Thursday, 24th October 2024

ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ: ಡಿ.9 ರಿಂದ ಆರಂಭ

ಹೈದರಾಬಾದ್​: ರಾಜ್ಯದ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇದೇ ತಿಂಗಳ 9 ರಿಂದ ಆರಂಭವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಆರ್​ಟಿಸಿ ಸಿದ್ಧತೆ ನಡೆಸಿದೆ.

ಅಧಿಕಾರಿಗಳು ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಸಾರಿಗೆ ಸೌಲಭ್ಯ ಕಲ್ಪಿಸುವುದರ ಪರಿಣಾಮ ಮತ್ತು ಸಂಸ್ಥೆಯ ಮೇಲೆ ಬೀರುವ ಆರ್ಥಿಕ ಪರಿಣಾ ಮದ ಕುರಿತು ಸಲಹೆಯನ್ನು ಸರ್ಕಾರದಿಂದ ಪಡೆದಿದೆ. ಸಂಸ್ಥೆಯ ಎಂಡಿ ಸಜ್ಜನರ್​​ಗೆ ಈ ಸಂಬಂಧ ಮೂಲ ಮಾಹಿತಿಯನ್ನು ನೀಡಲಾಗಿದ್ದು, ಶುಕ್ರ ವಾರವೂ ಈ ಅಧ್ಯಯನ ಸಾಗಲಿದೆ.

ಮುಖ್ಯಮಂತ್ರಿಗಳು ಮಹಿಳೆಯರಿಗೆ ಉಚಿತ ಬಸ್​ ಸೇವೆ ಕುರಿತಾದ ಮಾಹಿತಿಯನ್ನು ಚರ್ಚಿಸಲಿದ್ದಾರೆ. ಇದಾದ ಬಳಿಕ ಅವರು ಸಂಪೂರ್ಣ ಮಾರ್ಗಸೂಚಿ ಯೊಂದಿಗೆ ಯೋಜನೆ ಕುರಿತು ಘೋಷಣೆ ಮಾಡಲಿದ್ದಾರೆ. ಘೋಷಣೆಯಲ್ಲಿ ಯಾವ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿದೆ.

ಕರ್ನಾಟಕ ಸರ್ಕಾರ ಜೂನ್​ನಿಂದಲೇ ಮಹಿಳೆಯರಿಗೆ ಉಚಿತ ಬಸ್​ ಸೌಲಭ್ಯವನ್ನು ನೀಡಿದೆ. ರಾಜ್ಯದಲ್ಲಿ 22 ಸಾವಿರ ಬಸ್​​ಗಳಿವೆ. ಕರ್ನಾಟಕದಲ್ಲಿ ಶೇ 45ರಷ್ಟು ಮಹಿಳೆಯರು ಮತ್ತು ಶೇ 55ರಷ್ಟು ಪುರುಷರು ಪ್ರಯಾಣಿಸುತ್ತಿದ್ದಾರೆ. ಈ ಯೋಜನೆ ಜಾರಿಗೆ ಮುನ್ನ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ 40-41ರಷ್ಟಿತ್ತು. ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ದರ ಶೇ 12-15ರಷ್ಟು ಏರಿಕೆಯಾಗಿದೆ.