ಅದ್ವಿತೀಯ ಸಾಧನೆ
ದಿನದಿಂದ ದಿನಕ್ಕೆ ಹೆಚ್ಚು ಓದುಗರು
ದಿನದಿಂದ ದಿನಕ್ಕೆ ಹೆಚ್ಚು ಓದುಗರು
ವಿಭಿನ್ನ ಪುರವಣಿ, ಲೇಖನಗಳು
ರಂಗನಾಥ ಕೆ.ಮರಡಿ
ತುಮಕೂರು: ವಿಶ್ವವಾಣಿ ಪತ್ರಿಕೆಯು ಕ್ರಿಯಾತ್ಮಕ, ವಿಭಿನ್ನಾತ್ಮಕ ವರದಿ, ಪುರವಣಿ ಸೇರಿದಂತೆ ನವೀನ ಪ್ರಯೋಗಗಳನ್ನು ಕನ್ನಡ ಪತ್ರಿಕೆಯ ಇತಿಹಾಸ ದಲ್ಲಿ ಸೃಷ್ಟಿಸಿ ಅದ್ವಿತೀಯ ಸಾಧನೆ ಮಾಡಿದ್ದು, ಒಂಭತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಬಗ್ಗೆ ಜಿಲ್ಲೆಯ ಜನಮಾನಸದಲ್ಲಿ ವಿಶ್ವವಾಣಿ ಉಳಿ ದಿದ್ದು, ಜನಮನ್ನಣೆ ಗಳಿಸಿದೆ.
ಪ್ರತಿದಿನ ಏನಾದರೊಂದು ಹೊಸತನದೊಂದಿಗೆ ಜನರ ಕೈ ಸೇರುವ ಪತ್ರಿಕೆ ಜನರಿಂದ ಓದಿಸಿಕೊಂಡು ಹೋಗುತ್ತದೆ. ವಿಶ್ವವಾಣಿಯೊಂದಿಗೆ ಪ್ರಕಟ ಗೊಳ್ಳುವ ಪುರವಣಿಗಳು ಜಿಲ್ಲೆಯಲ್ಲಿ ಲಕ್ಷಾಂತರ ಓದುಗರ ಮನಸ್ಸನ್ನು ಸೆಳೆದಿದ್ದು, ಪುರವಣಿಗಾಗಿ ಕಾಯುವಂತೆ ಮಾಡಿದೆ.
ವಿವಿಧ ಸಾಧಕರು ಬರೆಯುವ ವಿಶೇಷ ಲೇಖನಗಳಂತೂ ಓದುಗರನ್ನು ಹುಚ್ಚೆಬ್ಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಹೊಂದಿದೆ. ವಿಶ್ವವಾಣಿಯಲ್ಲಿ ಮೂಡಿಬರುವ ಕೆಲವು ವಿಶೇಷ ವರದಿಗಳು ತನಿಖೆ, ಚರ್ಚೆಗೆ ಒಳಪಡುತ್ತಿದ್ದು, ದಿನದಿಂದ ದಿನಕ್ಕೆ ಅಪಾರ ಓದುಗರನ್ನು ಸೆಳೆಯುತ್ತಿದ್ದು, ಜಿಲ್ಲೆಯ ವಿವಿಧ ಸಾಧುಸಂತರು ಪತ್ರಿಕೆಗೆ ಆಶೀರ್ವದಿಸಿದ್ದಾರೆ.
ವಿಶ್ವವಾಣಿ ವಿಶಿಷ್ಟವಾದ, ಉತ್ತಮವಾದ ಪತ್ರಿಕೆ, ಶಿಕ್ಷಣ, ಸಾಮಾಜಿಕ, ರಾಜಕೀಯ, ಜನಪರ ಕಾಳಜಿಯುಳ್ಳ ಕಾರ್ಯ ಮಾಡುತ್ತಿದ್ದು, ಒಂಭತ್ತು ವರ್ಷ ದಲ್ಲಿ ಕನ್ನಡಿಗರ ಮನೆಮಾತಾಗಿದೆ. ಪತ್ರಿಕಾ ಮಾಧ್ಯಮ ಬಹಳ ಎಚ್ಚರಿಕೆಯಿಂದ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ವಿಶ್ವವಾಣಿ ಬಹಳ ಜಾಗ್ರತೆವಹಿಸುತ್ತದೆ. ಈ ಪತ್ರಿಕೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವದಿಸುತ್ತೇನೆ.
ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷರು, ಶ್ರೀ ಸಿದ್ದಗಂಗಾ ಮಠ.
ವಿಶ್ವವಾಣಿ ಪತ್ರಿಕೆಯನ್ನು ಪ್ರತಿದಿನ ಗಮನಿಸುತ್ತೇನೆ. ಹೊಸ ಹೊಸ ವಿಚಾರಗಳು ಅರ್ಥಪೂರ್ಣವಾಗಿ ಮೂಡಿ ಬರುತ್ತಿರುತ್ತವೆ. ಈ ರೀತಿಯ ಮಹತ್ವದ ಕಾರ್ಯ ಇನ್ನೂ ನಿರಂತರವಾಗಿ ಸಾಗಲಿ, ಸಮಾಜದ ಅಭಿವೃದ್ದಿಯಲ್ಲಿ ವಿಶ್ವವಾಣಿ ಪತ್ರಿಕೆ ವಿಶಿಷ್ಟ ಸ್ಥಾನಗಳಿಸಲಿ ಎಂದು ಹಾರೈಸುತ್ತೇನೆ; ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ತುಮಕೂರು.
ಕನ್ನಡ ಪತ್ರಿಕೆಯ ಇತಿಹಾಸದಲ್ಲಿ ವಿಶ್ವೇಶ್ವರ ಭಟ್ರವರು ಸೃಜನಶೀಲ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಕ್ರಿಯಾತ್ಮಕತೆಯ ವಿಚಾರಗಳನ್ನು ಪತ್ರಿಕೆ ಹೊಂದಿರುತ್ತದೆ. ವಿಶ್ವೇಶ್ವರಭಟ್ರವರು ಮತ್ತು ಇತರರು ಬರೆಯುವ ಲೇಖನಗಳು ಸರಳವಾಗಿದ್ದು ಜೀವನಕ್ಕೆ ಮಾದರಿಯಾಗಿರುತ್ತವೆ. ವಿಶ್ವವಾಣಿ ಹೆಮ್ಮರವಾಗಿ ಬೆಳೆದು, ಇನ್ನೂ ಹೆಚ್ಚಿನ ಓದುಗರನ್ನು ಹೊಂದಲಿ.
ಶ್ರೀ ನಂಜಾವಧೂತ ಸ್ವಾಮೀಜಿ, ಪೀಠಾಧ್ಯಕ್ಷರು, ಪಟ್ಟನಾಯಕನಹಳ್ಳಿ ಕ್ಷೇತ್ರ., ಶಿರಾ
ಕನ್ನಡ ದಿನಪತ್ರಿಕೆಗಳ ಸಾಲಿನಲ್ಲಿ ಪಾರದರ್ಶಕತೆಯಿಂದ ಒಂಭತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ವಿಶ್ವವಾಣಿ ಪತ್ರಿಕೆ ಓದುಗರ ವ್ಯಕ್ತಿತ್ವಕ್ಕೆ ಪೂರಕವಾದ ಸುವಿಚಾರಗಳನ್ನು ಪ್ರಕಟಗೊಳಿಸುವ ಮೂಲಕ ಈಗಾಗಲೇ ಜನರ ಹೃದಯ ಭಾವನೆಗಳಿಗೆ ಹತ್ತಿರವಾಗಿದೆ, ವಿಶ್ವವಾಣಿಯ ಕೀರ್ತಿ ಯಶಸ್ಸು ನೂರ್ಮಡಿಗೊಳ್ಳಲಿ
ಡಾ.ವಿರೇಶಾನಂದ ಸ್ವಾಮೀಜಿ, ರಾಮಕೃಷ್ಣಾಶ್ರಮ,ತುಮಕೂರು.
ಕನ್ನಡ ಪತ್ರಿಕೆಗಳ ನಡುವೆ ಕೇವಲ ಒಂಭತ್ತು ವರ್ಷಗಳಲ್ಲಿ ವಿಭಿನ್ನ ಪ್ರಯೋಗಗಳೊಂದಿಗೆ ಅಪಾರ ಓದುಗರನ್ನು ಹೊಂದುವ ಮೂಲಕ ತನ್ನದೆಯಾದ ಛಾಪು ಮೂಡಿಸಿರುವ ವಿಶ್ವವಾಣಿ ದಿನಪತ್ರಿಕೆಯ ಕೀರ್ತಿ ಬೃಹದಾಕಾರವಾಗಿ ಬೆಳಗಲಿ.
ಶ್ರೀ ಕರಿವೃಷಭದೇಶಿ ಶಿವಯೋಗೀಶ್ವರ ಸ್ವಾಮೀಜಿ, ಕಾಡುಸಿದ್ದೇಶ್ವರ ಮಠ, ನೊಣವಿನಕೆರೆ.
ವಿಶ್ವವಾಣಿ ಇಡೀ ವಿಶ್ವಕ್ಕೆ ವಾಣಿಯಾಗಲಿ. ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನು ಹೊತ್ತುತರುವ ಪತ್ರಿಕೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿ.
ಶ್ರೀ ಬಿಂದುಶೇಖರ ಓಡೆಯರ್, ಪೀಠಾಧಿಪತಿಗಳು, ರೇವಣಸಿದ್ದೇಶ್ವರ ಮಠ, ತುಮಕೂರು
ವಿಶ್ವವಾಣಿ ಪತ್ರಿಕೆಯು ಕನ್ನಡ ನಾಡಿನ ಜನರ ಮನೆ ಮನವನ್ನು ತಲುಪುತ್ತಾ ಅನೇಕ ಧಾರ್ಮಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗಳ ವಿಚಾರವನ್ನು ತನ್ನದೇ ಆದಂತಹ ಪ್ರಯೋಗಾತ್ಮಕತೆಯಲ್ಲಿ ಇಂದಿನ ಸಮಾಜ, ಯುವ ಜನರಿಗೆ ಮಾರ್ಗದರ್ಶಕವಾಗಿ ಮೂಡಿ ಬರುತ್ತಿದ್ದು, ಪತ್ರಿಕೆಯು ನೂರಾರು ವಸಂತಗಳನ್ನು ಪೂರೈಸಲೆಂದು ಹಾರೈಸುತ್ತೇನೆ.
ಡಾ. ಶ್ರೀ ಹನುಮಂತನಾಥ ಸ್ವಾಮೀಜಿ, ಕುಂಚಿಟಿಗರ ಮಹಾಸಂಸ್ಥಾನ, ಎಲೆರಾಂಪುರ, ಕೊರಟಗೆರೆ ತಾ.
ವಿಶ್ವವಾಣಿ ಜಗಕ್ಕೆಲ್ಲ ವಿಚಾರಧಾರೆಗಳ ಬೆಳಕನ್ನು ಪಸರಿಸಲಿ. ಪತ್ರಿಕೆ ಅಧಿಕ ಓದುಗರನ್ನು ಹೊಂದಿದ್ದು ಸಮಾಜಪರಿವರ್ತನೆಯಲ್ಲಿ ತನ್ನದೆಯಾದ ಪಾತ್ರವಹಿಸುತ್ತದೆ. ಇಂತಹ ಮಹತ್ವದ ಕಾರ್ಯ ನೂರಾರು ವರ್ಷ ನಿರಂತರವಾಗಿ ಸಾಗಲಿ.
ಡಾ.ಪಾಪಣ್ಣ, ಧರ್ಮದರ್ಶಿಗಳು, ಚಿಕ್ಕಣ್ಣಸ್ವಾಮಿ ಕ್ಷೇತ್ರ, ತುಮಕೂರು ತಾ.