ಅಭಿಮತ
ಪಿ.ಎಂ.ವಿಜಯೇಂದ್ರ
ಸುಬೇದಾರ್ ಛತ್ರ ರಸ್ತೆಯ ಗಂಗಾರಾಂ ಕಟ್ಟಡ ಕುಸಿದು ಬಿದ್ದ ದಿನ ನಡೆದ ಘಟನೆ. ಪ್ರತಿಷ್ಠಿತ ಪತ್ರಿಕೆಯೊಂದರ ವರದಿಗಾರ ಮೆಜೆಸ್ಟಿಕ್‌ಗೆ ಸಿನಿಮಾ ನೋಡಲು ಹೋಗಿದ್ದ. ಕಟ್ಟಡ ಕುಸಿಯುತ್ತಿದ್ದು ದರ ಬಗ್ಗೆ ಯಾರೋ ಮಾತಾಡಿದ್ದು ಕಿವಿಗೆ ಬಿದ್ದು, ತಕ್ಷಣ ವೇ ಹತ್ತಿರದಲ್ಲಿ ಸಿಕ್ಕ ಫೋನ್‌ನಿಂದ ತನ್ನ ಸುದ್ದಿಸಂಪಾದಕರಿಗೆ ಫೋನಾಯಿಸಿದ್ದೇನೆ. ತಕ್ಷಣ ಫೋಟೋಗ್ರಾಫರನ್ನು ಕಪಾಲಿ ಚಿತ್ರ ಮಂದಿರದ ಬಳಿ ಕಳಿಸಿ, ಕಟ್ಟಡ ಮಗುಚಿಕೊಂಡು ಬಿದ್ದಿದೆ, ಎಂದು ಹೇಳಲು ‘ಇಲ್ಲಪ್ಪಾ, ನೀ ಎ ಕುಡಿದ್ಬಿಟ್ಟಿದ್ದಿ ಅನ್ಸುತ್ತೆ’ ಅಂತ ಪ್ರತಿಕ್ರಿಯೆ ಬಂದಿದೆ.
ವರದಿಗಾರನಿಗಾದರೋ ಬಾಯಿ ಬಡಿದುಕೊಳ್ಳೊ ಪರಿಸ್ಥಿತಿ. ಮೇಲಿನವರನ್ನು ನಂಬಿಸಬೇಕಾದರೆ ತುಸು ಹೆಣಗಬೇಕಾಯಿತು. ಅದು ಆ ವರದಿಗಾರ ಗಳಿಸಿಕೊಂಡಿದ್ದ ಇಮೇಜ್. ಕೆಲಸದ ವೇಳೆಯಲ್ಲೂ ಕುಡಿದಿರುತ್ತಾನೆ, ಆದ್ದರಿಂದ ಅವನ ಮಾತನ್ನು ಕೇಳಿ
ಫೋಟೋಗ್ರಾಫರ್‌ಗೆ ದೌಡಾಯಿಸಲು ಹೇಳುವುದು ದುಡುಕಿದಂತೆ. ಇಲ್ಲಿ ಸುದ್ದಿಸಂಪಾದಕರ ತಪ್ಪಿಲ್ಲ. ಇದು ಏತಕ್ಕೆ ಹೇಳ್ತಿನಿ ಅಂದ್ರೆ reputation matters.
ಹನ್ನೆರಡು ವರ್ಷಗಳ ಹಿಂದೆ ಒಂದು ಮಧ್ಯಾಹ್ನ, ನಡುವಯಸ್ಸಿನ ವ್ಯಕ್ತಿಯೊಬ್ಬ ಚಾಮುಂಡಿ ಬೆಟ್ಟದಲ್ಲಿ ದನಗಾಹಿ ಹೆಣ್ಣುಮಗ ಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾಗ, ಗಸ್ತಿನಲ್ಲಿದ್ದ ಗರುಡ ಪೊಲೀಸರು ಆತನನ್ನು ಪ್ರಶ್ನಿಸಲಾಗಿ, ಆತ ತಬ್ಬಿಬ್ಬಾಗಿ ಓಡಲು ತೊಡಗಿದ. ಓಡುತ್ತಾ. ಓಡುತ್ತಾ ಹತ್ತಿರದಲ್ಲಿ ಕಂಡ ಮಹಿಷಾಸುರನ ಪ್ರತಿಮೆಯ ಹಿಂದೆ ಅವಿತುಕೊಂಡು ಕುಳಿತ. ನಾಪತ್ತೆಯಾದ ಆ ಪುರುಷನ ತಲಾಷ್ ಕೈಬಿಟ್ಟು ಮತ್ತೆ ತಮ್ಮ ಗಸ್ತು – ವಾಹನದ ಬಳಿಗೆ ಬರಲಾಗಿ ಆ ಹೆಣ್ಣುಮಗಳು ಕಂಡಳು. ಅವಳನ್ನು ಪ್ರಶ್ನಿಸ ಲಾಗಿ, ಆ ಪುರುಷ ಆ ಪ್ರದೇಶದಲ್ಲಿ ಆಗಾಗ್ಗೆ ಕಂಡುಬರುತ್ತಾನೆಂಬ ಮಾಹಿತಿ ಒದಗಿಸಿದಳು.
ಪೊಲೀಸರು ಕಾಣೆಯಾಗುವವರೆಗೆ ಉಸಿರು ಬಿಗಿಹಿಡಿದು ಕುಳಿತಿದ್ದ ಆ ವ್ಯಕ್ತಿ ಬದುಕಿದೆಯಾ ಬಡಜೀವವೇ ಎಂದು ಮಹಿಷಾಸುರ ನಿಗೆ ವಂದಿಸುತ್ತಾ, ಬೆಟ್ಟದ ತಪ್ಪಲಲ್ಲಿ ಬಿಟ್ಟಿದ್ದ ತನ್ನ ಕಾರಿನತ್ತ ಹೆಜ್ಜೆ ಹಾಕಿದ. ಅಂದಿನಿಂದ ಅವನು ತನ್ನ ದುಶ್ಚಟಕ್ಕೆ ಬೇರೊಂದು ಜಾಗವನ್ನು ಹುಡುಕಿಕೊಂಡ. ಆದರೆ, ತಪರಾಕಿ ಬೀಳುವುದನ್ನು ತಪ್ಪಿಸಿದ ಮಹಿಷಾಸುರನನ್ನ ಆತ ಮರೆಯಲಾಗ ಲಿಲ್ಲ. ಸ್ವಲ್ಪ ವರ್ಷ, ಪೊಲೀಸರಿಗೆ ಸಿಕ್ಕದಂತೆ ತಲೆಮರೆಸಿಕೊಂಡು, ತನ್ನ ಗುರುತು ಅವರು ಹಿಡಿಯಲಾರರು ಎಂಬುದನ್ನು ಖಚಿತ ಪಡಿಸಿಕೊಂಡು, ಕೆಲವರು ಸಮಾನಮನಸ್ಕರನ್ನು ಕಲೆಹಾಕಿ ಮಹಿಷಾಸುರನ ಬಗ್ಗೆ ಇಲ್ಲಸಲ್ಲದ ಕತೆಕಟ್ಟಿದ.
ಚಾಮುಂಡಿಬೆಟ್ಟದಲ್ಲಿ ತನ್ನ ಅನೈತಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದು ಆ ಚಾಮುಂಡೇಶ್ವರಿಯೇ ಎಂದು ಬಗೆದು ಆಕೆಯ ಬಗ್ಗೆಯೂ ಕಪೋಲಕಲ್ಪಿತ ಕತೆಗಳನ್ನು ತೇಲಿಬಿಟ್ಟ, ಅದನ್ನು ಹರಿಬಿಡಲು ತನ್ನ ಶಿಷ್ಯರಿಗೆ ಕುಡಿಸಿ ತಿನಿಸಿದ. ಇದುವರೆಗೆ ಒದಗಿಸಿದ ಮಾಹಿತಿಯ ಮೇರೆಗೆ, ನಿಮಗೆ ಸದರಿ ವ್ಯಕ್ತಿಯ ಹೆಸರು ಭಗವಾನ್ ಎಂದು ಹೊಳೆದಿದ್ದರೆ, ಅದನ್ನು ನಾನು ನಿರಾಕರಿಸುವುದು ಕಷ್ಟ because reputation matters. ಭರತ ಖಂಡದ ಉದ್ದಗಲಕ್ಕೂ ಶ್ರೀರಾಮಚಂದ್ರ ಆದರ್ಶಪುರುಷನೆಂಬ ನಂಬಿಕೆ ಇದೆ. ಅವನನ್ನು
ನಾವ್ಯಾರೂ ನೋಡಿಲ್ಲ.
ಅಂತಹ ಶ್ರೀರಾಮ ಕುಡುಕ, ವ್ಯಭಿಚಾರಿ ಎಂತೆಲ್ಲ ಭಗವಾನ್ ಹೇಳಿದಾಗ ಆತನ ಎಂಟೋ ಹತ್ತೋ ಶಿಷ್ಯರಷ್ಟೇ ಅದನ್ನು ನಂಬು ತ್ತಾರೆ (ಅಥವಾ ಸಿಗುವ ಕ್ವಾರ್ಟರ್ ಬಾಟಲಿ ಶರಾಬಿಗೆ ನಿಯತ್ತು ತೋರಿ ನಂಬಿದಂತೆ ನಟಿಸುತ್ತಾರೆ). ಜನಮಾನಸದಿಂದ ಶ್ರೀರಾಮ ನನ್ನು ನಿರ್ಮೂಲಗೊಳಿಸಲಾಗುವುದಿಲ್ಲ, ಆತನಲ್ಲಿರುವ ನಂಬಿಕೆ ಕಿಂಚಿತ್ ಅಲುಗಾಡುವುದಿಲ್ಲ. ಕುತೂಹಲದ ಸಂಗತಿಯೆಂದರೆ, ಬಹುಮಟ್ಟಿಗೆ ನೀವ್ಯಾರೂ ನೋಡಿರದ ಭಗವಾನ್ ಬಗ್ಗೆ ನಾನು ಮೇಲ್ಕಂಡ ಮಾಹಿತಿಯನ್ನು ಹಂಚಿಕೊಂಡರೆ, ನೀವ್ಯಾರೂ ಅದನ್ನು ಅಲ್ಲಗಳೆಯಲಾರಿರಿ.
ಅದು ನನ್ನ ಮೇಲಿನ ನಂಬಿಕೆಯಿಂದಲ್ಲ, ಭಗವಾನ್ ಚಾರಿತ್ರ್ಯ ಕುರಿತು ನಿಮಗಿರುವ ಮಾಹಿತಿಯಿಂದ. ಅದೇ ಭಗವಾನ್‌ನನ್ನು ನಾನು ಹೊಗಳಿದ್ದರೆ, ನೀವು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಿರಿ ಎಂಬುದು ನನ್ನ ಊಹೆಗೆ ಸಿಲುಕದ ವಿಚಾರ.