Saturday, 14th December 2024

ವಾರಣಾಸಿಯಲ್ಲಿ ಮೋದಿಗೆ ಹಾಸ್ಯನಟ ಶ್ಯಾಮ್ ರಂಗೀಲಾ ಸ್ಪರ್ಧೆ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹಾಸ್ಯನಟ ಶ್ಯಾಮ್ ರಂಗೀಲಾ ಘೋಷಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ.

ನಾಮಪತ್ರ ಸಲ್ಲಿಕೆ ಹಾಗೂ ಮುಂದಿನ ಮಾಹಿತಿಗಳ ಬಗ್ಗೆ ವೀಡಿಯೋ ಸಂದೇಶಗಳ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.

2014ರಲ್ಲಿ ನಾನು ಮೋದಿ ಅಭಿಮಾನಿಯಾಗಿದ್ದೆ. ಪ್ರಧಾನಿಗಳನ್ನು ಬೆಂಬಲಿಸುವ ಹಲವು ವೀಡಿಯೋಗಳನ್ನು ಶೇರ್‌ ಮಾಡಿದ್ದೆ. ರಾಹುಲ್‌ ಗಾಂಧಿ, ಅರವಿಂದ್‌ ಕೇಜ್ರಿವಾಲ್‌ ಅವರಿಗೆ ವಿರುದ್ಧವಾದ ವೀಡಿಯೋಗಳನ್ನು ಶೇರ್‌ ಮಾಡಿದ್ದೆ.

ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಲ್ಲ ಎಂದು ಶಪಥ ಮಾಡಿದ್ದೆ. ಆದರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಆದ್ದರಿಂದಲೇ ನಾನು ಈ ಬಾರಿ ವಾರಣಾಸಿಯಿಂದ ಪ್ರಧಾನಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.