ಶಿವಕುಮಾರ್ ಬೆಳ್ಳಿತಟ್ಟೆ
ಎಂಡಿ ಗುಂಗೆ ಅವಧಿಯಲ್ಲಿನ ಹಗರಣಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು, ಸರಕಾರದಿಂದಲೂ ತನಿಖೆ ಸಂಭವ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಬೆನ್ನಿಗೆಯೇ ಉತ್ತರ ಕರ್ನಾಟಕ ಭಾಗದ ಜೀವ ನದಿಗಳ
ಅಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ನೀರಾವರಿ ನಿಗಮದಲ್ಲಿ ಅಕ್ರಮ ನೇಮಕ ಮತ್ತು ಬಡ್ತಿ ನೀಡಿರುವುದು ಬೆಳಕಿಗೆ ಬಂದಿದೆ.
ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಮಲ್ಲಿಕಾರ್ಜುನ ಗುಂಗೆ ಅವರ ಅವಧಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ಜನರನ್ನು ಅರ್ಹತೆ
ಇಲ್ಲದಿದ್ದರೂ ನೇಮಕ ಮಾಡಲಾಗಿದೆ. ಅನೇಕ ಸಿಬ್ಬಂದಿಗೆ ಅಕ್ರಮವಾಗಿ ಸೇವಾ ಬಡ್ತಿ ನೀಡಿ ಗಜೆಟೆಡ್ ಹುzಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಸದ್ಯ ನೇಮಕ ಮತ್ತು ಬಡ್ತಿ ಅಕ್ರಮ ಲೋಕಾಯುಕ್ತ ಮೆಟ್ಟಿಲೇರಿದೆ. ಜಲಸಂಪ ನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸದ್ಯವೇ ಈ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸುವ ನಿರೀಕ್ಷೆ ಇದ್ದು, ಎಂ.ಡಿ. ಅವರ ಗುಂಗೆ ಕಾಲದಲ್ಲಿ ನಡೆದಿರುವ ಕಾಮಗಾರಿಗಳನ್ನೂ ಪರಿಶೀಲನೆಗೊಳಪಡಿಸುವ ನಿರೀಕ್ಷೆ ಇದೆ.
ಮಲ್ಲಿಕಾರ್ಜುನ್ ಗುಂಗೆ ಸತತ ೧೦ ವರ್ಷಗಳ ಕಾಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಗಿದ್ದರು. ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ
ಸಚಿವರಾದಾಗಿನಿಂದಲೂ ಗುಂಗೆ ಅವರೇ ಎಂ.ಡಿ.ಯಾಗಿದ್ದರು. ಈ ಅವಧಿಯಲ್ಲಿ ಅಕ್ರಮಗಳು ನಡೆದ ಬಗ್ಗೆ ಸರಕಾರಕ್ಕೆ ದೂರುಗಳು ಬಂದಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಡಿ ಹುದ್ದೆಗಳಿಗೂ ಬಡ್ತಿ ಭಾಗ್ಯ !
ಅಕ್ರಮವಾಗಿ ನೇಮಕಗೊಂಡಿದ್ದ ೨೫ ಸಿಬ್ಬಂದಿಯಲ್ಲಿ ಸುಮಾರು ೬ ಮಂದಿಗೆ ಗೆಜೆಟೆಡ್ ಪರ್ಸನಲ್ ಅಸಿಸ್ಟೆಂಟ್ (ಜಿಪಿಎ) ಹುದ್ದೆಗಳನ್ನು ನೀಡಲಾಗಿದೆ. ಅಂದರೆ ಇವು ಸಚಿವಾಲಯದಲ್ಲಿ ಕಾರ್ಯದರ್ಶಿಗಳಾದ ಐಎಎಸ್ ಅಧಿಕಾರಿಗಳ ಆಪ್ತ ಕಚೇರಿಯ ಹಿರಿಯ ಸಿಬ್ಬಂದಿ ಹುದ್ದೆಗಳು. ಈ ಹುದ್ದೆಗಳು ರಾಜ್ಯದ ಯಾವುದೇ ನಿಗಮಗಳಲ್ಲೂ ಇರುವುದಿಲ್ಲ ಎನ್ನಲಾಗಿದೆ. ಇಂಥ ಉನ್ನತ ಹುದ್ದೆಗಳನ್ನು ಸೃಷ್ಟಿಸಿ ಅಲ್ಲಿಗೆ ಬಡ್ತಿ ನೀಡಿರುವುದು ಈಗ ಬಹಿರಂಗವಾಗಿದೆ.
ಡಿ ದರ್ಜೆ ಹುದ್ದೆಗಳಿಗೆ ಭತ್ಯೆ ಹೆಚ್ಚಾಗುತ್ತವೆಯೇ ವಿನಾ ಬಡ್ತಿ ನೀಡಲಾಗುವುದಿಲ್ಲ. ಆದರೆ ಇಲ್ಲಿ ಕಿರಿಯ ಸಹಾಯಕರನ್ನು ಹಿರಿಯ ಸಹಾಯಕರನ್ನಾಗಿ, ಚಾಲಕರನ್ನು ಹಿರಿಯ ಚಾಲಕ ಎಂದು ಅನೇಕ ಸಿಬ್ಬಂದಿ ಬಡ್ತಿ ನೀಡಲಾಗಿದೆ. ಕೇವಲ ಎಸ್ಎಸ್ಎಲ್ಸಿ ಓದಿರುವ ಅನೇಕ ಸಿಬ್ಬಂದಿಗೆ ಪದವಿಗೆ ಸಮಾನಾದ ಅಥವಾ ಅದಕ್ಕೂ ಮೀರಿದ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ ಎಂದು ಲೋಕಾಯುಕ್ತದಲ್ಲಿ ಜೂನ್ ೧೮ರಂದು ದೂರು ದಾಖಲಿಸಿರುವ ಆರ್ಟಿಐ ಕಾರ್ಯಕರ್ತ ದಿಲ್ಲಿ ಬಾಬು ತಿಳಿಸಿದ್ದಾರೆ.
ಏನಿದು ನೇಮಕ ಅಕ್ರಮ?
ಕರ್ನಾಟಕ ನೀರಾವರಿ ನಿಗಮದಲ್ಲಿ ೨೦೦೩ರ ಸಮಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಾಗಿತ್ತು. ಈ ವೇಳೆ ಕಡಿಮೆ ವಿದ್ಯಾರ್ಹತೆಯ ಅನೇಕ ಸಿಬ್ಬಂದಿ ಗಳನ್ನು ನೇಮಕ ಮಾಡಿಕೊಂಡು ತಾತ್ಕಾಲಿಕ ಎಂದು ತೋರಿಸಲಾಗಿತ್ತು. ಮಲ್ಲಿಕಾರ್ಜುನ ಗುಂಗೆ ಅವರು ಎಂ.ಡಿ.ಯಾಗುತ್ತಿದ್ದಂತೆ, ಸುಮಾರು ೨೫ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊರಗುತ್ತಿಗೆಯಡಿ ನೇಮಿಸಿಕೊಳ್ಳಲಾಗಿತ್ತು. ಈ ರೀತಿಯ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆ ಪದವಿ ಇರಬೇಕಿತ್ತು. ಡಿ. ದರ್ಜೆ ಸಿಬ್ಬಂದಿಗೆ ಕನಿಷ್ಠ ಪಿಯುಸಿ ವಿದ್ಯಾರ್ಹತೆಯಾದರೂ ಬೇಕಿತ್ತು. ಆದರೆ ಅದಕ್ಕಿಂತಲೂ ಕಡಿಮೆ ವಿದ್ಯಾರ್ಹತೆಯ ಸಿಬ್ಬಂದಿಗೆ ಪದವಿಗೆ ಸಮಾನಾದ ಕಿರಿಯ ಸಹಾಯಕ, ಟೈಪಿಸ್ಟ್, ಸ್ಟೆನೋ ಸೇರಿದಂತೆ ಅನೇಕ ಹುzಗಳನ್ನು ಇದಕ್ಕೆ ತಕ್ಕಂತೆ ಸಂಬಳ ನಿಗದಿಪಡಿಸಲಾಗಿತ್ತು ಎಂದು ದೂರಲಾಗಿದೆ.
೨೦೦೭ರ ನಂತರ ಈ ಎಲ್ಲಾ ಅನರ್ಹ ಸಿಬ್ಬಂದಿಗೆ ಏಕಾಏಕಿ ಬಡ್ತಿ ನೀಡಲಾಯಿತು. ಇದಕ್ಕಾಗಿ ನಿಗಮದ ವೃಂದ ಮತ್ತು ನೇಮಕ ನಿಯಮಗಳನ್ನೇ
ಬದಲಿಸಲಾಗಿತ್ತು ಎಂದು ಆರೋಪಗಳು ಕೇಳಿ ಬಂದಿವೆ. ಆರ್ ಟಿಐ ಅರ್ಜಿ ಮೂಲಕ ನೇಮಕಗೊಂಡ ಸಿಬ್ಬಂದಿ ಮತ್ತು ಬಡ್ತಿ ಪಡೆದ ಸಿಬ್ಬಂದಿಗಳ ಶೈಕ್ಷಣಿಕ ದಾಖಲೆಗಳ ವಿವರ ಕೇಳಿದಾಗ ನಿಗಮದ ಅಧಿಕಾರಿಗಳು ನಿರಾಕರಿಸಿದ್ದರು.