ಆಂಧ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಮಾರಕ
ಗಡಿ ಪ್ರಾಧಿಕಾರ, ಕಸಾಪ, ಕರವೇ ಮೌನವೇಕೆ….?
ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ರಾಯಚೂರು : ರಾಜ್ಯದಲ್ಲಿ ಸರಕಾರ ಅಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಕನ್ನಡ ನಾಡಿನಲ್ಲಿ ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಪರಿಕಲ್ಪನೆಯನ್ನು ಕೈಬಿಟ್ಟಿರುವಂತೆ,ಗಡಿ ಭಾಗದಲ್ಲಿನ ರಾಜ್ಯಗಳು ಕೂಡ ನಿಧನವಾಗಿ ಕನ್ನಡ ಶಾಲೆಗಳನ್ನು ಆಂಧ್ರ ಸರ್ಕಾರ ಜಿಲ್ಲೆಯ ಗಡಿ ಶಾಲೆಗಳಲ್ಲಿ ಅಂಗ್ಲ ಭಾಷೆಯ ಶಾಲೆಗಳಾಗಿ ಪರಿವರ್ತಿಸುತ್ತಿದ್ದು ಗಡಿ ನಾಡ ಕನ್ನಡಿಗರಲ್ಲಿ ಅತಂಕ ಮೂಡಿಸಿದರೆ.
ಭಾಷವಾರು ಪ್ರಾಂತ ವಿಂಗಡನೆ ಸಮಯದಲ್ಲಿ ರಾಜ್ಯದ ಗಡಿ ಭಾಗದಲ್ಲಿನ ಅದೋನಿ, ಹೋಳಗುಂದಿ, ಕೌತಾಳಂ ಮಂಡಲಗಳ ಭಾಗವನ್ನು ಕರ್ನಾಟಕ ರಾಜ್ಯದಲ್ಲಿ ಸೇರಿಸುವಂತೆ ಅನೇಕ ಹೋರಾಟ ನಡೆಸಿದ್ದರು. ಹೆಚ್ಚಾಗಿ ಕನ್ನಡಭಾಷೆಯನ್ನು ಮಾತನಾಡುವ ಗ್ರಾಮಗಳು ಆಂಧ್ರಪ್ರದೇಶದಲ್ಲಿ ಉಳಿಯ ಬೇಕಾಯಿತು.
ಕನ್ನಡ ಭಾಷೆಯನ್ನು ಹೆಚ್ಚಾಗಿ ಮಾತನಾಡುವುದರಿಂದ ಈ ಭಾಗದಲ್ಲಿ 35 ಪ್ರಾಥಮಿಕ ಹಾಗೂ 19 ಫ್ರೌಡಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತ ಬಂದಿವೇ ಇವುಗಳಲ್ಲಿ ಅಂದಾಜು (8000) ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ನದಿಚಾಗಿ ಕನ್ನಡ ಶಾಲೆ ಶತಮಾನವನ್ನು ಕಂಡಿದು,ಅದೋನಿ ಮಂಡಲದಲ್ಲಿ ಪೆದಹಾರಿವಾಣ ಗ್ರಾಮದಲ್ಲಿ 2 ಕನ್ನಡ ಶಾಲೆ, ಹನುವಾಳನಲ್ಲಿ 1 ಒಟ್ಟು 3 ಶಾಲೆಗಳಲ್ಲಿ 2023-24 ನೇ ಸಾಲಿನಲ್ಲಿ 899 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಕಲಿಯುತ್ತಿದ್ದಾರೆ. ಕೌತಳಾಂ ಮಂಡಲದಲ್ಲಿ 19 ಕನ್ನಡ ಶಾಲೆಗಳಿದ್ದು ನದಿಚಾಗಿಯಲ್ಲಿ ಪ್ರಾಥಮಿಕ ಹಾಗೂ ಫ್ರೌಡಶಾಲೆ ಸೇರಿ 2ಶಾಲೆ, ಕೌತಾಳಂ, ವಲ್ಲೂರು, ಮ್ಯಾಳಿಗನೂರು, ಅಗಸಲದಿನ್ನಿ,ಕಾಮವರಂ, ಬದಿನೇಹಾಳ್ ಪ್ರಾಥಮಿಕ ಹಾಗೂ ಫ್ರೌಡಶಾಲೆ ಸೇರಿ 2ಶಾಲೆ, ಬಾಪುರಂ ಪ್ರಾಥಮಿಕ ಹಾಗೂ ಫ್ರೌಡಶಾಲೆ ಸೇರಿ 2 ಶಾಲೆ, ರೌಡೂರು ಪ್ರಾಥಮಿಕ ಹಾಗೂ ಫ್ರೌಡಶಾಲೆ ಸೇರಿ 2 ಶಾಲೆ, ಉಪ್ಪರಹಾಳ್ ಪ್ರಾಥಮಿಕ ಹಾಗೂ ಫ್ರೌಡಶಾಲೆ ಸೇರಿ 2ಶಾಲೆ, ಸೂಳೆಕೆರೆ, ಕುಂಟ್ನಾಳ್ ಗ್ರಾಮಗಳಲ್ಲಿ ಒಟ್ಟು 3756 ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಹೊಳಗುಂದಿ ಮಂಡಲದಲ್ಲಿನ ಗ್ರಾಮಗಳಾದ
ಆಂಧ್ರಪ್ರದೇಶ ಸರಕಾರವು 2023-24 ನೇ ಸಾಲಿನಲ್ಲಿ 1 ಸಾವಿರ ಸರಕಾರಿ ಶಾಲೆಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಮಾಧ್ಯಮಿಕ ಶಾಲೆಗಳಲ್ಲಿ ಸಿ.ಬಿ.ಎಸ್.ಸಿ. ಪಠ್ಯಕ್ರಮವನ್ನು ಅನುಷ್ಠಾನಗೊಳಿಸುವುದಕ್ಕೆ ಮುಂದಾಗಿದ್ದು ಈ ಪ್ರಥಮ ವಿಷಯವಾಗಿ ಇಂಗ್ಲೀಷ್ ಮತ್ತು ಸಾಹಿತ್ಯ, ಎರಡನೇ ವಿಷಯವಾಗಿ ತೆಲುಗು ಮೂರನೆ ವಿಷಯವಾಗಿ ಗಣಿತ, ನಾಲ್ಕನೇ ವಿಷಯವಾಗಿ ವಿಜ್ಞಾನ ಐದನೇ ವಿಷಯವಾಗಿ ಸಮಾಜ ವಿಜ್ಞಾನ ಅರನೇ ವಿಷಯವಾಗಿ ಮಾಹಿತಿ ತಂತ್ರಜ್ಞಾನ ಅಥವಾ ಕೃತಕ ಬುದ್ದಿಮತ್ತೆ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ 7ನೇ ವಿಷಯವಾಗಿ ಉರ್ದು, ಒರಿಯಾ,ಕನ್ನಡ,ತಮೀಳ್ ಭಾಷೆಯನ್ನು ಅಯ್ಕೆ ಮಾಡಿಕೊಳ್ಳಬಹುದಾಗಿದ್ದರು ಈ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ತೆಲುಗು ಆಗಿದಲ್ಲಿ ಕಡ್ಡಾಯವಾಗಿ ತೆಲುಗು ಭಾಷೆಯನ್ನು ಅಯ್ಕೆ ಮಾಡಿಕೊಳ್ಳಬೇಕಾಗಿದೆ.
ಅದರಿಂದ 1ಸಾವಿರ ಶಾಲೆಗಳಲ್ಲಿ ಪ್ರಯೋಗಿಕವಾಗಿ 2023-24 ನೇ ಸಾಲಿಗೆ ಕರ್ನೂಲ್ ಜಿಲ್ಲೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳಿರುವ ಕರ್ನೂಲ್ ಜಿಲ್ಲೆಯ ಹೊಳಗುಂದ ಜಿಲ್ಲಾ ಪರಿಷತ್ ಪ್ರೌಡಶಾಲೆಯಲ್ಲಿ , ದೊಡ್ಡ ಹರಿವಾಣದ ಜಿಲ್ಲಾ ಪರಿಷತ್ ಪ್ರೌಡಶಾಲೆಯಲ್ಲಿ ಕೌತಾಳಂ ಜಿಲ್ಲಾ ಪರಿಷತ್ ಪ್ರೌಡಶಾಲೆ ಯಲ್ಲಿ, ಬದನಹಾಳು ಜಿಲ್ಲಾ ಪರಿಷತ್ ಪ್ರೌಡಶಾಲೆಯಲ್ಲಿ ಅನಿವಾರ್ಯವಾಗಿ 6 ನೇತರಗತಿಗೆ ಸಿ.ಬಿ.ಎಸ್.ಸಿ. ಪಠ್ಯಕ್ರಮ ಅನುಸಾರ ದಾಖಲಾಗಬೇಕಿದೆ. 6ರಿಂದ 9ನೇತರಗತಿ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡಿದರು ಸಿ.ಬಿ.ಎಸ್.ಸಿ. ಪಠ್ಯಕ್ರಮ ಅನುಸಾರ ಅಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಮುಂದುವರೆಸಬೇಕಾಗಿದ್ದು ವಿದ್ಯಾರ್ಥಿಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣವಾಗಲಿದೆ.
ಕನ್ನಡ ವಿಷಯ ಶಿಕ್ಷಕರು ಕೂಡ ಬೇರೆ ವಿಷಯವನ್ನು ಬೋದಿಸಬೇಕಾಗಿದು ಕ್ರಮೇಣ ಈ ಗಡಿ ಭಾಗದ 35 ಪ್ರಾಥಮಿಕ ಹಾಗೂ 19 ಫ್ರೌಡಶಾಲೆಗಳು ಅಂಗ್ಲ ಮಾಧ್ಯಮ ಶಾಲೆಗಳಾದಲ್ಲಿ ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಸಂಗ ಪ್ರಮಾಣ ಪತ್ರ ದೊರೆಯುವುದಿಲ್ಲ, ಈ ಭಾಗದ ಕನ್ನಡ ಭಾಷೆಯಲ್ಲಿ ಯುವಕರು ಡಿ.ಇ.ಡಿ.ಹಾಗೂ ಬಿ.ಎಡ್ ಪದವಿ ಪಡೆದವರಿಗೆ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ದೊರೆಯುವುದಿಲ್ಲ,ಸರೋಜ ಮಹಿಷಿ ವರದಿಯಂತೆ ಕನ್ನಡ ಭಾಷಿಕರಿಗೆ ಶೇ5 ರಷ್ಟು ಮೀಸಲಾತಿ ದೊರೆಯುವುದಿಲ್ಲ.
ಈವರೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಗಡಿ ಭಾಗದ ಪ್ರತಿ ಕನ್ನಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ 3 ವಿದ್ಯಾರ್ಥಿಗಳಿಗೆ ಪ್ರಥಮ 13 ಸಾವಿರ ದ್ವಿತೀಯ 12 ಸಾವಿರ,ತೃತೀಯ 10 ಸಾವಿರ ನಗದು ಪುಸ್ಕಾರ ದೊರೆಯುವುದಿಲ್ಲ.
ಇದರಿಂದ ಕನ್ನಡ ಭಾಷಿಕರಿಗೆ ತೀವ್ರ ಅನ್ಯಾಯವಾಗುವುದರಿಂದ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಗಡಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ನಾಡು ನುಡಿ ಜಲಕ್ಕಾಗಿ ದುಡಿಯುತ್ತೇವೆ ಎಂದು ಕನ್ನಡ ಪರ ಸಂಘಟನೆಗಳು ಕೂಡ ಇಂದು ಮೌನವಾಗಿವೆ ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಆಂಧ್ರ ಸರಕಾರದೊಂದಿಗೆ ಚರ್ಚೆನಡೆಸಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳುವ ಮೂಲಕ ಗಡಿ ನಾಡು ಕನ್ನಡಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗಡಿಭಾಗದ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.
*
ಜಿಲ್ಲೆಗೆ ಗಡಿ ಬಾಗದಲ್ಲಿ ತೆಲಂಗಾಣ ಮತ್ತು ಆಂಧ್ರ ಈ ಎರಡು ರಾಜ್ಯಗಳು ಕೆಲವು ಪ್ರಾಂತಗಳನ್ನು ರಾಯಚೂರಿಗೆ ಬಿಟ್ಟು ಕೊಡುವಂತೆ ಕೆಲವು ದಿನಗಳ ಹಿಂದೆ ಹೋರಾಟ ಮಾಡಲಾಗಿತ್ತು. ಕಾರಣಾಂತರಗಳಿಂದ ಹಾವು ಪ್ರದೇಶಗಳು ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಸೀಮಿತ ಆದ ಸಂದರ್ಭದಲ್ಲಿ ನಮ್ಮ ಕನ್ನಡದ ಶಾಲೆಗಳನ್ನು ಆ ರಾಜ್ಯ ಸರ್ಕಾರವೇ ನೋಡಿಕೊಂಡು ಹೋಗುತ್ತಿರುವುದು ಗಮನಹರವಾಗಿದ್ದು.ಕಳೆದ ಬಾರಿ ಇದ್ದಂತಹ ಜಗನ್ಮೋಹನ್ ಅವರ ಸರ್ಕಾರದಲ್ಲಿ ಈ ಒಂದು ನಮ್ಮ ನಾಲ್ಕು ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಮಾಡಿರುವುದರಿಂದ ನಮ್ಮ ಆ ಭಾಗದ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪತ್ರ ದೊರೆಯುವುದಿಲ್ಲ ಹೀಗಾಗಿ ಇದರ ವಿರುದ್ಧ ನಮ್ಮ ರಾಜ್ಯ ಸರ್ಕಾರದ ಸಚಿವರು, ಗಡಿಪಾಧಿಕಾರದವರು, ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರು ಈಗಿನ ಆಂಧ್ರ ಸರ್ಕಾರದ ಚಂದ್ರ ಬಾಬು ನಾಯ್ಡು ಅವರನ್ನು ಭೇಟಿಯಾಗಿ ಕೂಡಲೇ ಆ ಪ್ರೌಢಶಾಲೆಗಳನ್ನು ಕನ್ನಡದಲ್ಲಿ ಮುಂದುವರಿಸಲು ಬೇಡಿಕೆ ಇಡುತ್ತಿದ್ದೇವೆ.
ಅಶೋಕ್ ಕುಮಾರ್ ಸಿ ಕೆ ಜೈನ್
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾಧ್ಯಕ್ಷರು.
ನಾಡು .ನುಡಿ, ನೆಲ.ಜಲಕ್ಕಾಗಿ ಹೋರಾಡುವ ಹಾಗೂ ಉಳಿಸುವ ಉದ್ದೇಶವನ್ನು ಹೊಂದಿರುವ ಗಡಿನಾಡು ಪ್ರಾಧಿಕಾರ,ಕನ್ನಡ ಸಾಹಿತ್ಯ ಪರಿಷತ್, ಕನ್ನಡ ರಕ್ಷಣವೇದಿಕೆಗಳು, ಕನ್ನಡಪರ ಸಂಘಟನೆಗಳು, ವಿರೋಧ ಪಕ್ಷ ಹಾಗೂ ಆಡಳಿತ ಸರಕಾರದ ದಿವ್ಯ ನಿರ್ಲಕ್ಷತೆಯಿಂದ ಕರ್ನಾಟಕದ ಆಂಧ್ರ ಗಡಿ ಭಾಗದಲ್ಲಿನ ನಾಲ್ಕು ಪ್ರೌಢ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ.
ಗಡಿ ಕನ್ನಡ ತಾಯಿಯ ಸಿರೇಯ ದಡಿಯಿದಂತೆ ಎಂದು ಕನ್ನಡದ ಕವಿಯೊಬ್ಬರು ತಮ್ಮ ಸಾಹಿತ್ಯದಲ್ಲಿ ವರ್ಣಿಸಿದ್ದಾರೆೆ ಅದರೆ ನಾಡಿನ ರಾಜಕೀಯ ಮುಖಂಡರಿಗೆ ಇತ್ತೀಚಿನ ದಿನಗಳಲ್ಲಿ ಗಡಿಯ ಬಗ್ಗೆ ಅಭಿಮಾನ ಶೂನ್ಯತೆಗೆ ಅಂಗ್ಲ ಭಾಷೆಯ ಮೇಲಿನ ವ್ಯಾಮೋಹವು ಕಾರಣವಾಗಿರ ಬಹುದು. ಶಾಲೆಗಳಲ್ಲಿನ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕ ಇಲ್ಲ, ರಾಜ್ಯದ ವಸತಿ ನಿಲಯಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಗಡಿನಾಡು ಕನ್ನಡಿಗರಿಗೆ ಮೀಸಲಾತಿ ನೀಡದೆ ಇದ್ದರು ಗಡಿ ಭಾಗದಲ್ಲಿ ವಾಸಿಸುವ ಕನ್ನಡಿಗರ ಕನ್ನಡ ಪ್ರೇಮ ಇಂತಿಷ್ಠು ಕೂಡ ಕಡಿಮೆಯಾಗಿಲ್ಲ.
ಹೆಸರು ಹೇಳಲು ಇಚ್ಛಿಸಿದ ಗಡಿ ಭಾಗದ ಶಾಲೆಯ ಶಿಕ್ಷಕ