ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀ ಇಂಡಿಯಾ ಆಟಗಾರರು ಗುರುವಾರ ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿಯಾದ ಆಟಗಾರರು ಅವರ ಜೊತೆ ಉಪಹಾರ ಸೇವಿಸಿದರು. ನಂತರ ವಿಶ್ವಕಪ್ ಹಿಡಿದು ಪ್ರಧಾನಿ ಮೋದಿ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದರು.
ಟೀಂ ಇಂಡಿಯಾ ಆಟಗಾರರಿಗೆ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖಡಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ.
ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ಗುರುವಾರ ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿ ವಿಜಯೋತ್ಸವ ಆಚರಿಸಲಾಗಿದೆ. ನಂತರ ಕೇಕ್ ಕತ್ತರಿಸಿ ಆಟಗಾರರು ಸಂಭ್ರಮಾರಣೆ ನಡೆಸಿದರು. ನಂತರ ಪ್ರಧಾನಿ ಮೋದಿ ನಿವಾಸಕ್ಕೆ ಆಗಮಿಸಿದ್ದಾರೆ.
ಜೂನ್ 29 ರಂದು, ಐಸಿಸಿ ಪುರುಷರ T20 ವಿಶ್ವಕಪ್ 2024 ಫೈನಲ್ನಲ್ಲಿ ಭಾರತವು ಬಾರ್ಬಡೋಸ್ನಲ್ಲಿ ಏಡೆನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿತು.
ಜೂನ್ 30 ರಿಂದ ಬೆರಿಲ್ ಚಂಡಮಾರುತದ ಕಾರಣದಿಂದಾಗಿ ಆಗಮನ ವಿಳಂಬವಾಗಿತ್ತು.