ನಾರ್ವೆ: ಓಸ್ಲೋ ಪ್ರೈಡ್ ಇವೆಂಟ್ನಲ್ಲಿ ಸಾಂಸ್ಕೃತಿಕ ಮತ್ತು ಲಿಂಗ ಸಮಾನತೆ ಇಲಾಖೆ ಸಚಿವೆ ಲುಬ್ನಾ ಜ್ಯಾಫೆರಿ ತಾವು ಧರಿಸಿದ್ದ ಟಾಪ್ ಅನ್ನು ಎತ್ತಿ ತಮ್ಮ ಸ್ತನಗಳನ್ನು ತೋರಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾರ್ವೆಯ ಸಾಂಸ್ಕೃತಿಕ ಸಚಿವೆ ತಮ್ಮ ಸ್ತನಗಳನ್ನು ಪ್ರದರ್ಶಿಸುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದ್ದು, ಅನೇಕರು ಸಚಿವೆಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೂನ್ನಲ್ಲಿ ಈ ಓಸ್ಲೋ ಪ್ರೈಡ್ ಇವೆಂಟ್ ಅನ್ನು ಆಯೋಜಿಸಿದ್ದು, ಸಚಿವೆ ಲುಬ್ನಾ ಜ್ಯಾಫೆರಿಗೆ ʼಫ್ಯಾಗ್ ಹ್ಯಾಗ್ 2024ʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ ಲುಬ್ನಾ, ತಕ್ಷಣ ತಾವು ಧರಿಸಿದ್ದ ಟಾಪ್ ಅನ್ನು ಎತ್ತಿ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾಳೆ. ಇದೇ ವೇಳೆ ಮಾತನಾಡಿದ ಅವರು ನಿಮ್ಮನ್ನು ನೀವು ಹೊರಗೆ ತನ್ನಿ. ನಿಮ್ಮನ್ನು ನೀವು ಅಷ್ಟೋಂದು ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ.
ಮತ್ತೊಂದೆಡೆ ಈವೆಂಟ್ನ ಆಯೋಜಕ ಜೋಕಿಮ್ ಆಡ್ಲ್ಯಾಂಡ್ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ‘ಹಲವಾರು ವರ್ಷಗಳಲ್ಲಿ ‘ಓಸ್ಲೋ ಪ್ರೈಡ್’ ಸಮಯದಲ್ಲಿ ಸಂಭವಿಸಿದ ಅತ್ಯುತ್ತಮ ಸಂಗತಿ ಇದಾಗಿದೆ. ಈ ರೀತಿ ಮುಕ್ತವಾಗಿ ತಮ್ಮ ಅಭಿಪ್ರಾಯ, ವರ್ತನೆಯನ್ನು ವ್ಯಕ್ತಪಡಿಸುವ ಸಚಿವೆಯನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಇಷ್ಟು ವರ್ಷಗಳಲ್ಲಿ ಇದುವರೆಗೆ ಇಂತಹ ಪ್ರತಿಕ್ರಿಯೆ ಸಿಕ್ಕಿಯೇ ಇಲ್ಲ’ ಎಂದಿದ್ದಾರೆ.