ಪ್ರತಿಪಕ್ಷಗಳ ಜುಟ್ಟು ‘ಕೈ’ಯಲ್ಲಿ, ವಾಲ್ಮೀಕಿ ಅಸ್ತ್ರಕ್ಕೆ ಹೆದರಿದ ಕಾಂಗ್ರೆಸ್
ಮಂತ್ರಿ ರಾಜೀನಾಮೆಗೆ ಪಟ್ಟು
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಈ ಬಾರಿಯ ರಾಜ್ಯ ವಿಧಾನಮಂಡಲ ಅಧಿವೇಶನದ ಮೇಲೆ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹವಾಲು ಹಗರಣಗಳ ಕರಿನೆರಳು ಬೀಳತೊಡಗಿದ್ದು, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಹಾಗೂ ಆಡಳಿತರೂಢ ಕಾಂಗ್ರೆಸ್ ಪರಸ್ಪರ ಹೋರಾಟಕ್ಕೆ ಸಜ್ಜಾಗಿವೆ.
ಈ ಎರಡೂ ಹಗರಣಗಳನ್ನು ಕೈಗೆತ್ತಿಗೊಂಡು ಈಗಾಗಲೇ ಸದನದ ಹೊರಗೆ ಹೋರಾಟ ನಡೆಸುತ್ತಿರುವ ಪ್ರತಿಪಕ್ಷಗಳು ಜುಲೈ ೧೫ರಿಂದ ಆರಂಭವಾಗುವ ವಿಧಾನಮಂಡಲ ಅಽವೇಶನದ ಒಳಗೂ ಕಾದಾಟಕ್ಕೆ ಸಜ್ಜಾಗಿದೆ. ಇದನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ
ಸುರೇಶ್ ರಾಜೀನಾಮೆ ಪಟ್ಟು ಹಿಡಿಯಲು ಬಿಜೆಪಿ ಎಲ್ಲಾ ದಾಖಲೆಗಳ ಶಸ್ತ್ರಾಸ್ತ್ರಗಳನ್ನೂ ಸಜ್ಜು ಮಾಡಿಕೊಂಡಿದೆ.
ಆದರೆ ಪ್ರತಿಪಕ್ಷಗಳ ಹೋರಾಟದ ಜಾಡು ಹಿದಿರುವ ಕಾಂಗ್ರೆಸ್ ಈಗ ಬಿಜೆಪಿ- ಜೆಡಿಎಸ್ಗೆ ಮುಡಾ ಅಸ್ತ್ರದ ಮೂಲಕವೇ ಹೋರಾಟ ಹಿಮ್ಮೆಟ್ಟಿಸುವ ತಂತ್ರ ರೂಪಿಸಿದೆ. ಅಂದರೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಬದಲಾಗಿ ಈಗಾಗಲೇ ನಡೆಯುತ್ತಿರುವ ತನಿಖೆಗೆ ವ್ಯಾಪ್ತಿಗೆ ೨೦೦೪ರಿಂದ (ಎಚ್.ಡಿ.ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಅವಧಿ) ಈತನಕ ನಿವೇಶನಗಳ ಹಂಚಿಕೆ
ಯಾಗಿರುವುದನ್ನು ಸಮಗ್ರವಾಗಿ ತನಿಖೆ ನಡೆಸಲು ಒಪ್ಪಿಕೊಳ್ಳುವ ಸಂಭವ ಹೆಚ್ಚಾಗಿದೆ. ಹಾಗಂತ ಇದರ ವಿರುದ್ಧ ಬಿಜೆಪಿ ತೀರಾ ಕಠಿಣ ಹೋರಾಟಕ್ಕೆ
ಇಳಿಯುವುದು ಅಷ್ಟು ಸುಲಭವಲ್ಲ ಎನ್ನಲಾಗಿದೆ.
ಕಾರಣ ಈ ಹಗರಣದಲ್ಲಿ ಬಿಜೆಪಿಯ ಹಾಗೂ ಜೆಡಿಎಸ್ ಶಾಸಕರೂ ಸೇರಿದಂತೆ ಅನೇಕ ಜನಪ್ರತಿನಿಧಿಗಳೂ ಪಕ್ಷಾತೀತವಾಗಿ ಫಲಾನುಭವಿಗಳಾಗಿದ್ದಾರೆ
ಎಂದು ಹೇಳಲಾಗಿದೆ. ಹೀಗಾಗಿ ಮೈಸೂರು ಭಾಗದಲ್ಲಿ ಕೃಷ್ಣ ರಾಜಕ್ಷೇತ್ರದ ಶಾಸಕ ಶ್ರೀವತ್ಸ ಹೊರತುಪಡಿಸಿ ಉಳಿದ ಜನಪ್ರತಿನಿಽಗಳು ಮುಡಾ ಹಗರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.
ಇದೆಲ್ಲರ ಮಧ್ಯೆಯೂ ಮುಡಾ ಹಗರಣದ ಹೋರಾಟವನ್ನು ಕಠಿಣಗೊಳಿಸಿದರೆ, ಕಾಂಗ್ರೆಸ್ ಶಿವಮೊಗ್ಗ ಅಭಿವೃದ್ಧಿ ಪ್ರಾಽಕಾರದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮಗಳನ್ನು ಹೊರಗೆಳೆಯಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಆದರೂ ಕನಿಷ್ಟ ಬೈರತಿ ಸುರೇಶ್ ರಾಜೀನಾಮೆಯನ್ನಾದರೂ ಪಡೆಯಬೇಕು ಎಂದು ಬಿಜೆಪಿ ಪಟ್ಟು ಹಿಡಿಯಲಿದ್ದು, ಇದಕ್ಕೆ ಕಾಂಗ್ರೆಸ್ ನ ಕೆಲವು ಜನಪ್ರತಿನಿಧಿಗಳ ಪರೋಕ್ಷವಾಗಿ ಬೆಂಬಲವೂ ಇದೆ ಎನ್ನಲಾಗಿದೆ. ಇತ್ತೀಚಿಗೆ ಶಾಸಕ ವಿನಯ್ ಕುಲಕರ್ಣಿ ಅವರ ಮುನಿಸು ಪ್ರಸಂಗದ ನಂತರ ಈ ಬೆಳೆವಣಿಗೆ ನಡೆದಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಮನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಮುಡಾ ಹಗರಣದಲ್ಲಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಇದರಲ್ಲಿ ಸರಕಾರದಿಂದ ಹೆಚ್ಚಿನ ಮಟ್ಟದ ತನಿಖೆ ನಿರೀಕ್ಷಿಸಲಾಗದು ಎಂದು ಮೈಸೂರು ಭಾಗದ ಕೆಲವು ಹೋರಾಟಗಾರರು ಇದನ್ನು ನ್ಯಾಯಾಲಯಕ್ಕೆ ಎಳೆಯಲು ತಯಾರಾಗುತ್ತಿದ್ದಾರೆ.
ಮಾತನಾಡದ ಶಾಸಕ, ಸಂಸದರು
ಈ ಮಧ್ಯೆ ವಾಲ್ಮೀಕಿ ನಿಗಮದಿಂದ ಕಳೆದೊಂದು ವರ್ಷದಿಂದ ಯಾವುದೇ ಫಲಾನುಭವಿಗಳಿಗೆ ಒಂದು ಬಿಡಿಗಾಸೂ ನೀಡದಿದೆ ಅಪಖ್ಯಾತಿಗೆ
ದಾರಿಯಾಗಿರುವ ಬಗ್ಗೆ ಆ ಸಮುದಾಯದ ಯಾವುದೇ ಶಾಸಕರು, ಸಂಸದರು, ಪರಿಷತ್ ಸದಸ್ಯರು ಹಾಗೂ ಇತರ ನಾಯಕರು ಮಾತನಾಡುತ್ತಿಲ್ಲ ಎನ್ನುವ ಬೇಸರ ಸಮುದಾಯದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ ಪರಿಶಿಷ್ಟ ಪಂಗಡದಿಂದ ೧೮ ಮಂದಿ ಶಾಸಕರು ಹಾಗೂ ಇಬ್ಬರು ಸಂಸದರು ಮತ್ತು ಇಬ್ಬರು
ಪರಿಷತ್ ಸದಸ್ಯರಿದ್ದು, ಇವರು ಹಗರಣದ ಬಗ್ಗೆಯಾಗಲಿ, ಸಮುದಾಯಕ್ಕೆ ಸೇರಬೇಕಾದ ಹಣ ದುರ್ಬಳಕೆಯಾಗಿರುವ ಬಗ್ಗೆ ಮಾತನಾಡಿಲ್ಲ ಎಂದು ಪಕ್ಷದ ಹಿರಿಯ ನಾಯಕರೇ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ಅವರಿಗೂ ಬೇಸರವಾಗಿದೆ ಎಂದು ತಿಳಿದುಬಂದಿದೆ.
ಹವಾಲ ಇಕ್ಕಟ್ಟಿನಲ್ಲಿ ಸರಕಾರ
ಮುಡಾ ಹಗರಣದಲ್ಲಿ ಕಾಂಗ್ರೆಸ್ ಪ್ರತಿಪಕ್ಷಗಳಿಗೆ ತಿರುಮಂತ್ರ ಊದಿದಂತೆ ವಾಲ್ಮೀಕಿ ಹಗರಣದಲ್ಲಿ ಮಾಡುವುದು ಸುಲಭವಲ್ಲ. ಏಕೆಂದರೆ ನಿಗಮದ -ಲಾನುಭವಿಗಳಿಗೆ ಬಿಡುಗಾಸು ನೆರವನ್ನೂ ನೀಡದಿದ್ದರೂ ಸುಮಾರು ೯೦ ಕೋಟಿ ರು.ಗಳಿಗೆ ಹೆಚ್ಚಿನ ಹಣ ಅನ್ಯರ ಖಾತೆಗಳಿಗೆ ವರ್ಗವಣೆಯಾಗಿರುವುದು ಈಗಾಗಲೇ ದಾಖಲೆಗಳ ಸಹಿತ ಸಿಕ್ಕಿಕೊಂಡಿದೆ. ಇದೀಗ ಎಸ್ ಐಟಿ, ಸಿಬಿಐ ಹಾಗೂ ಇಡಿ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳು ಕೈ ಸೇರಿದ್ದು ಮಾಜಿ ಸಚಿವ ನಾಗೇಂದ್ರ ಕೂಡ ಬಂಧನವಾಗಿದ್ದಾರೆ.
ಸದ್ಯದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬವಸನಗೌಡ ದದ್ದಲ್ ಕೂಡ ಬಂಧನವಾಗುವ ಸಾಧ್ಯತೆ ಕಾಣುತ್ತಿದ್ದು, ತನಿಖೆ ತೀವ್ರಗೊಂಡರೆ, ಸಚಿವ ಶರಣಪ್ರಕಾಶ್ ಪಾಟೀಲ ಅವರಿಗೂ ತಗುಲಿಕೊಳ್ಳುವ ಸಂಭವ ಇದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ. ಇಂಥ ಸನ್ನಿವೇಶನದಲ್ಲಿ ಸರಕಾರ ವಾಲ್ಮೀಕಿ ಹವಾಲ ಹಗರಣವನ್ನು ಸಮರ್ಥಿಸಿದರೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರದಲ್ಲಿ ಕಾಂಗ್ರೆಸ್ ಕೇವಲ ಹಿಂದಿನ ಸರಕಾರಗಳಲ್ಲಿ ನಿಗಮಗಳಲ್ಲಿ ನಡೆದಿರುವ ಅಕ್ರಮಗಳ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿ ಸುಮ್ಮನಾಗಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
*
ಪರಿಶಿಷ್ಟ ಪಂಗಡದ ಅನುದಾನ ದುರ್ಬಳಕೆಯಾಗುವುದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮುದಾಯದ ಸಬಲೀಕರಣಕ್ಕೆ ಹೆಚ್ಚಿನ ಅನುದಾನ ನೀಡಿ ಆ ಸಮಾಜಕ್ಕಾದ ಅನ್ಯಾಯ ಸರಿಪಡಿಸಬೇಕು.
ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಹಿರಿಯ ನಾಯಕ