Friday, 29th November 2024

ಮತ್ತೊಂದು ಬಜೆಟ್: ಅದರ ಮೇಲೆ ಜನರ ನಿರೀಕ್ಷೆಗಳೇನು ?

ಪ್ರಸ್ತುತ

ಡಾ.ಪವಿತ್ರ ಆರ್‌.ಎಚ್‌

೨೦೨೪-೨೫ನೇ ಸಾಲಿನ ಕೇಂದ್ರ ಬಜೆಟ್ ದಿನಗಣನೆ ಆರಂಭವಾಗಿದೆ. ಎಂದಿನಂತೆ ಈ ಬಾರಿಯೂ ಬಜೆಟ್ ಬಗ್ಗೆ ಕುತೂಹಲ ಇದ್ದೇ ಇದೆ. ಈ ವರ್ಷ ಫೆಬ್ರವರಿಯಲ್ಲಿ ಚುನಾವಣೆಗೂ ಮುನ್ನ ೨೦೨೪-೨೫ ಆರ್ಥಿಕ ವರ್ಷದ ಮಧ್ಯಾಂತರ/ಲೇಖಾನುದಾನ ಬಜೆಟ್ ಮಂಡಿಸಲಾಗಿದ್ದು, ಮಂಬರುವ ಪೂರ್ಣ ಬಜೆಟ್ ಯಾವ ರೀತಿ ಇರಲಿದೆ ಎಂಬ ಸಣ್ಣ ನೋಟವನ್ನು ಇದು ನೀಡಿದೆ. ಇದು ಮುಂದಿನ ಬಜೆಟ್‌ಗೆ ಪೂರ್ಣ ಮಟ್ಟವನ್ನು ನೀಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣಾ ನಂತರ ರಾಜಕೀಯ ರೂಪುಗೊಂಡಿರುವ ಹೊಸ ರಾಜಕೀಯ ಚಿತ್ರಣ ೨೦೨೫ ರ ಆರ್ಥಿಕ ವರ್ಷದ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ನಮ್ಮ ಸಂಸತ್ ಚುನಾವಣಾ ಪ್ರಕ್ರಿಯೆಗಳು ಮುಗಿದ ಬೆನ್ನ, ಹಲವು ಪ್ರಮುಖ ರಾಜ್ಯಗಳಲ್ಲಿ ಶೀಘ್ರದಲ್ಲಿ ಚುನಾವಣೆಗಳು ನಡೆಯಲಿವೆ. ಇದರ ಹೊರತಾಗಿ ಜಾಗತಿಕ ರಾಜಕೀಯ ವಿದ್ಯಮಾನಗಳೂ ಹೆಚ್ಚು ಅನಿಶ್ಚಿತವಾಗಿವೆ. ಈಗ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ಸಂಘರ್ಷದ ಹಾದಿಗಳು ೨೦೨೫ ಮತ್ತು ಅದರಾಚೆಗೂ ವಿಸ್ತಾರವಾಗುವ ಸಾಧ್ಯತೆ ಇದೆ. ಆದ್ದರಿಂದ, ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ದೊಡ್ಡ ಆರ್ಥಿಕತೆಯ ಸ್ತಾನಕ್ಕೆ ಒತ್ತಾಸೆ ಯಾಗಲು ಕೇಂದ್ರ ಬಜೆಟ್ ಮತ್ತು ಸರಕಾರದ ಒಟ್ಟಾರೆ ನೀತಿಗಳು ಹೇಗಿರಬೇಕು? ಇಲ್ಲಿ ಎರಡು ಮುಖ್ಯ ಪ್ರಶ್ನೆಗಳು ಏಳುತ್ತವೆ. ಒಂದು, ಆರ್ಥಿಕ ಬೆಳವಣಿಗೆಯ ದೇಶೀಯ ಚಾಲಕರನ್ನು ರಕ್ಷಿಸುವುದು ಹೇಗೆ? ಇನ್ನೊಂದು, ಕಾರ್ಮಿಕ ವಲಯಲ್ಲಿ ದೊಡ್ಡ ಮಟ್ಟದಲ್ಲಿ ಮುಂದೆ ಹೊಸ ಸೇರ್ಪಡೆಗಳು ಆಗುವಾಗ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೆ ಖಾಸಗಿ ವಲಯಕ್ಕೆ ಬೆಂಬಲದ ವಾತಾವರಣವನ್ನು ಸೃಷ್ಟಿಸುವುದು ಹೇಗೆ ಎನ್ನುವುದು. ಕೋವಿಡ್ ಸಾಂಕ್ರಾಮಿಕ ಕಾಯಿಲೆಯ ನಂತರ, ಸರಕಾರ ಮಾಡುತ್ತಿರುವ ಬಂಡವಾಳ ವೆಚ್ಚ ಗಣನೀಯವಾಗಿ ಏರಿಕೆ ಕಂಡಿದ್ದು, ಇದು ಜಿಡಿಪಿ ವಿಸ್ತರಣೆಗೆ ಸಹಾಯ ಮಾಡಿದೆ.

ಮಧ್ಯಂತರ-೩ ಬಜೆಟ, ೨೦೨೫ ನೇ ಆರ್ಥಿಕ ವರ್ಷದಲ್ಲಿ ಸರಕಾರದ ಬಂಡವಾಳ ವೆಚ್ಚವನ್ನು ಶೇಕಡ ೧೭ ರಷ್ಟು ಹೆಚ್ಚಾಗುವಂತೆ ಮಾಡಿದೆ, ಪೂರ್ಣ ಬಜೆಟ್‌ನಲ್ಲಿ ಇದನ್ನೇ ಮುಂದುವರಿಸುವ ನಿರೀಕ್ಷೆ ಇದೆ. ಬಜೆಟ್‌ನಲ್ಲಿ ರಸ್ತೆಗಳು, ರೈಲ್ವೆ, ಬಂದರು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ಸಾರಿಗೆ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಕ್ರೆಡಿಟ್ ರೇಟಿಂಗ್ ಕಂಪನಿ (ಐಸಿಆರ್‌ಎ) ಹೇಳಿದೆ. ಬಂಡವಾಳ ವೆಚ್ಚಕ್ಕೆ ಉತ್ತೇಜನ ಕೇಂದ್ರ ಸರಕಾರವು ರಾಜ್ಯ ಬಜೆಟ್‌ಗಳಿಗೆ ನೇರವಾಗಿ ಮತ್ತು ಬಡ್ಡಿ ರಹಿತ ಸಾಲಗಳನ್ನು ನೀಡುವುದರೊಂದಿಗೆ ಬಂಡವಾಳ ವೆಚ್ಚವನ್ನು ಹೆಚ್ಚಳ ಮಾಡಿದೆ.

೨೦೨೫ನೇ ಹಣಕಾಸು ವರ್ಷದ ಅನಂತರವೂ ಲಭ್ಯವಿರುವ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಬಂಡವಾಳ ವ್ಯಯವನ್ನು ಜಾಸ್ತಿ ಮಾಡುವುದಕ್ಕೆ ಆದ್ಯತೆ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಖಾಸಗಿ ವೆಚ್ಚವು (ಬಳಕೆ) ಭಾರತದ ಜಿಡಿಪಿಗೆ ಶೇ.೬೦ರಷ್ಟು ಕೊಡುಗೆ ನೀಡುತ್ತದೆ. ನಿರೀಕ್ಷಿತ ಜನಸಂಖ್ಯಾ ಲಾಭಾಂಶದೊಂದಿಗೆ, ದೇಶೀಯ ಬಳಕೆ ಬೆಳವಣಿಗೆಯು ಭಾರತದ ಆರ್ಥಿಕ ಪ್ರಗತಿಯು ವೇಗ ಮುಂದುವರಿಯಲು ಮುಖ್ಯ ಕಾರಣವಾಗಿದೆ.
ನಮ್ಮ ರಫ್ತು ಪಾಲುದಾರರಲ್ಲಿ ತುಂಬಾ ಹಳೆಯದಾದ ಸೊಸೈಟಿಗಳಿದ್ದು ಇವು ನಾವು ಮುಂದೆ ಏನು? ಎಷ್ಟು? ಮತ್ತು ಯಾರಿಗೆ? ರಫ್ತು ಮಾಡುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

ಅಷ್ಟೇನೂ ಹಿತಕರವಲ್ಲದ ಅಂಶವೆಂದರೆ, ೨೦೧೯ರ ಮತ್ತು ೨೦೨೪ರ ಹಣಕಾಸು ವರ್ಷಗಳ ನಡುವೆ, ಖಾಸಗಿ ವೆಚ್ಚದ ಪ್ರಮಾಣ ಶೇ.೪ರಷ್ಟನ್ನು ಸಂಯುಕ್ತ ವಾರ್ಷಿಕ ಅಭಿವೃದ್ದಿ (ಸಿಎಜಿಆರ್) ದರ ದಾಖಲಿಸಿದೆ. ೨೦೨೪ ಹಣಕಾಸು ವರ್ಷದಲ್ಲಿ ಒಟ್ಟಾರೆ ಬಳಕೆಯ ಬೆಳವಣಿಗೆ ಕಳಪೆಯಾಗಿತ್ತು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆಯ ಹೊರತಾಗಿಯೂ, ಉಳಿದ ನಗರ ವಿಭಾಗಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರ ಎಚ್ಚರಿಕೆಯ ಮನೋ ಭಾವ ವೆಚ್ಚದ ಮೇಲೆ ಪರಿಣಾಮ ಬೀರಿದೆ. ಪಿಎಂ ಕಿಸಾನ್, ಎಂಜಿಎನ್ ಆರ್‌ಇಜಿಎ (ಎಂನರೇಗಾ) ಅಥವಾ ಪಿಎಂ ಆವಾಸ್ ಯೋಜನೆಯಂತಹ ಯೋಜನೆಗಳ ಮೇಲೆ ಹೆಚ್ಚಿನ ವೆಚ್ಚಗಳು ಗ್ರಾಮೀಣ ಭಾಗದಲ್ಲಿ ವೆಚ್ಚ ಮಾಡಲು ಪ್ರೇರೇಪಿಸುವ ಸಾಧ್ಯತೆ ಇದೆ.

ಇದು ಮತ್ತೊಂದು ಅಸಮರ್ಪಕ ಮುಂಗಾರಿಗೆ ಬೆಲೆಯನ್ನು ತೆರುತ್ತಿದೆ. ಹೆಚ್ಚುವರಿಯಾಗಿ, ವೈಯಕ್ತಿಕ ಆದಾಯ ತೆರಿಗೆಗೆ ಹೆಚ್ಚಿನ ಮಿತಿ ನೀಡುವುದರಿಂದ ವೇತನ ಪಡೆಯುವವರಲ್ಲಿ ಖಂಡಿತವಾಗಿಯೂ ಕೊಂಚ ನಿರಾಳದ ಭಾವನೆಯನ್ನು ಮೂಡಿಸಲಿದೆ. ಪಾವತಿ ಮಾಡಬೇಕಾದ ತೆರಿಗೆ ಕಡಿಮೆ ಯಾಗುವು ದರಿಂದ ಜನರು ಖರ್ಚಿನತ್ತ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ. ಇದು ಸಣ್ಣ ಅವಧಿಯಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಕುಟುಂಬಗಳು ಎದುರಿಸುತ್ತಿರುವ ಆತಂಕಗಳನ್ನು ಕಡಿಮೆಗೊಳಿಸಲು ಕೌಶಲ ಮತ್ತು ಕೌಶಲದ ಕಡೆಗೆ ಸ್ಪಷ್ಟ ದೃಷ್ಟಿಯನ್ನು ಹೊಂದಿರುವ ಶಿಕ್ಷಣದ ಮೇಲೆ ಖರ್ಚು ಮಾಡುವುದರ ಜೊತೆಗೆ ಆರೋಗ್ಯದ ಮೇಲೆ ಖರ್ಚು ಮಾಡುವುದನ್ನು ಮಧ್ಯಮಾವಧಿಯಲ್ಲಿ ಹೆಚ್ಚಿಸಬೇಕಾಗಿದೆ.

ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ತ್ವರಿತವಾಗಿ ಸುಧಾರಿಸುವ ಇನ್ನೊಂದು ನಿರ್ಣಾಯಕ ಅಂಶ ಶಿಶುಪಾಲನೆಯ ಅಗತ್ಯ ಗಳನ್ನು ನೀಗಿಸುವುದಾಗಿದೆ. ಜನಸಂಖ್ಯೆಯ ಲಾಭವನ್ನು ಸಮರ್ಪಕವಾಗಿ ಅರಿತುಕೊಳ್ಳಲು, ಉತ್ತಮ ಪಾವತಿ ಕೊಡುವ ಸಾಮಾನ್ಯ ವಲಯದ
ಉದ್ಯೋಗಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸಷ್ಟಿಸುವತ್ತ ಮಧ್ಯಮ ಅವಧಿಯಲ್ಲಿ ನೀತಿಗಳನ್ನು ರೂಪಿಸಬೇಕು.
ಕೊನೆಯದಾಗಿ, ನಮ್ಮ ಒಟ್ಟು ಆಮದುಗಳನ್ನು ಕಡಿಮೆ ಮಾಡಲು, ಹೊಸ-ತಂತ್ರeನದ ಹೊಸ-ಯುಗದ ವಲಯಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳುವ ಸಾಂಪ್ರದಾಯಿಕ ಉತ್ಪಾದನಾ ವಲಯಗಳಿಗೂ ಪ್ರೋತ್ಸಾಹ ನೀಡುವ ಯೋಜನೆಗಳ ಬಗ್ಗೆ ಹೆಚ್ಚಿನ ಗಮನವನ್ನು ನಾವು ನಿರೀಕ್ಷಿಸುತ್ತೇವೆ.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಸೇವೆಗಳ ರಫ್ತುಗಳ ದೊಡ್ಡ ಮೂಲವಾಗಿ ಹೊರಹೊಮ್ಮಿವೆ. ಹೀಗಾಗಿ ಸರಕಾರ ಸೇವಾ ವಲಯಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

(ಲೇಖಕರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹ
ಪ್ರಾಧ್ಯಾಪಕರು)