ತುಮಕೂರು: ಸಿದ್ಧಗಂಗಾ ಮೆಡಿಕಲ್ ಕಾಲೇಜು ವತಿಯಿಂದ ದಿ ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಆಗಸ್ಟ್ 5 ರಿಂದ 10 ರವರೆಗೆ ಉಚಿತ ಮೂಳೆ ರೋಗ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 7 ರವರೆಗೆ ನೋಂದಣಿಗೆ ಅವಕಾಶವಿದ್ದು, ಬಡವರು,ಆರ್ಥಿಕವಾಗಿ ಹಿಂದುಳಿದವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹಿಪ್ ಮರುಜೋಡಣೆ ಹೊರತುಪಡಿಸಿ ಮೂಳೆಗೆ ಸಂಬಂಧಿಸಿದ ಉಳಿದೆಲ್ಲಾ ಶಸ್ತ್ರಚಿಕಿತ್ಸೆಗಳು ಉಚಿತವಾಗಿದ್ದು, ಔಷಧಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ. ಸರಿಯಾಗಿ ಜೋಡಣೆಯಾಗಿರದ ಮೂಳೆ ಖಾಯಿಲೆಗಳು, ಇಂಪ್ಲಾಂಟ್ ರಿಮೂವಲ್ ಸರ್ಜರಿ,ಸೊಂಟ ನೋವಿಗೆ ಸಂಬಂಧಿಸಿದ ಡಿಸ್ಕ್ ಸರ್ಜರಿಗಳು,ಮಂಡಿನೋವಿಗೆ ಸಂಬಂಧಿಸಿದ ಸರ್ಜರಿಗಳು ಸೇರಿದಂತೆ ಇನ್ನಿತರ ಮೂಳೆ ಸರ್ಜರಿಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ ಹೆಚ್ಚಿನ ವಿವಿರ ಗಳಿಗೆ 0816-2602222 ಕರೆಮಾಡಬಹುದಾಗಿದೆ