ಬೆಂಗಳೂರು: ಕೋಕೋ ಟೂರ್ನಮೆಂಟ್ ವೇಳೆ ಯುವಕರು ಡ್ಯಾಗರ್ ಸೇರಿದಂತೆ ಮಾರಣಾಂತಿಕ ಆಯುಧಗಳನ್ನು ಹಿಡಿದು ಜನರನ್ನು ಭಯಭೀತ ರನ್ನಾಗಿಸಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊತ್ತನೂರು ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಕೋಕೋ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ತೀರ್ಪುಗಾರರು ನೀಡಿದ ತೀರ್ಪು ತಪ್ಪು ಎಂದು ರೊಚ್ಚಿಗೆದ್ದ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಮೈದಾನದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸದ್ಯ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವಕರು ವಿಕೇಟ್, ಚಾಕು, ಡ್ರ್ಯಾಗರ್ಗಳನ್ನು ಹಿಡಿದು ಭಯದ ವಾತಾವರಣ ಸೃಷ್ಟಿಸಿದ್ದಾರೆ.
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದೂ ಮಾಕರಾಸ್ತ್ರಗಳನ್ನು ಹಿಡಿದು ಓಡಾಡಿದ್ದವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.