ಮಶಾಕ ಬಳಗಾರ
ಕೊಲ್ಹಾರ: ಬಡವರ ಹಸಿವು ನೀಗಿಸುವುದರ ಜೊತೆಗೆ ಹಸಿವು ಮುಕ್ತ ರಾಜ್ಯ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಪಟ್ಟಣದ ಮಹಾತ್ಮ ಗಾಂಧೀ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು ಕೆಲಸ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಕ್ಯಾಂಟಿನ್ ಉದ್ಘಾಟನೆ ಗೊಂಡು ಬಡವರ ಹಸಿವು ನೀಗಿಸಲಿದೆ.
ಬೆಂಗಳೂರಿನ ಎಂ.ಎಸ್ ಎಕ್ಸಲ್ ಪ್ರಿಕ್ಯಾಸ್ಟ್ ಸಲ್ಯೂಷನ್ ಲಿಮಿಟೆಡ್ ಕಂಪನಿ ಕಟ್ಟಡ ಕಾಮಗಾರಿಯ ಗುತ್ತಿಗೆ ಟೆಂಡರ್ ಪಡೆದಿದ್ದು. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಅತಿ ಶೀಘ್ರದಲ್ಲಿ ಸಚಿವ ಶಿವಾನಂದ ಪಾಟೀಲ್ ಕ್ಯಾಂಟಿನ್ ಉದ್ಘಾಟನೆ ನೇರವೇರಿಸಲಿದ್ದಾರೆ ಎಂಬ ಮಾಹಿತಿ ಇದೆ. ತಾಲೂಕ ಕೇಂದ್ರ ವಾಗಿರುವ ಕೊಲ್ಹಾರ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿದೆ. ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ ಹಾಗಾಗಿ ಕೊಲ್ಹಾರ ಪಟ್ಟಣಕ್ಕೆ ಇಂದಿರಾ ಕ್ಯಾಂಟಿನ್ ಅವಶ್ಯಕ ವಾಗಿತ್ತು ಸಚಿವ ಶಿವಾನಂದ ಪಾಟೀಲರ ಪರಿಶ್ರಮದಿಂದ ಇಂದಿರಾ ಕ್ಯಾಂಟಿನ್ ಮಂಜೂರಾಗಿ ಸದ್ಯ ಲೋಕಾರ್ಪಣೆಗೆ ಸಜ್ಜಾಗಿ ನಿಂತಿದೆ.
ಹಸಿವು ನೀಗಿಸಲಿದೆ ಇಂದಿರಾ ಕ್ಯಾಂಟೀನ್: ಕೊಲ್ಹಾರ ಪಟ್ಟಣಕ್ಕೆ ಪ್ರತಿದಿನ ಸಾವಿರಾರು ಜನರು ವಿವಿಧ ಕೆಲಸಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ.
ಪಟ್ಟಣದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯ, ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯ, ನಾಡ ಕಾರ್ಯಾಲಯ, ಪಟ್ಟಣ ಪಂಚಾಯತ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಹಿತ ವಿವಿಧ ಸರ್ಕಾರಿ ಕಛೇರಿಗಳು ಕಾರ್ಯನಿರ್ವಾಸಿಸುತ್ತಿದ್ದು ಪ್ರತಿದಿನ ನೂರಾರು ಜನರು ತಮ್ಮ ಕಾರ್ಯಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ ಇಂದಿರಾ ಕ್ಯಾಂಟಿನ್ ಈ ಜನರ ಹೊಟ್ಟೆ ತುಂಬಿಸಲಿದೆ.
*
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ ಕಂಪನಿಯೊಂದಕ್ಕೆ ಟೆಂಡರ್ ನೀಡಿದೆ. ಸರ್ಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯತ ವತಿಯಿಂದ ನೀರು ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗುವುದು.
ಉಮೇಶ ಚಲವಾದಿ, ಪ.ಪಂ ಮುಖ್ಯಾಧಿಕಾರಿಗಳು ಕೊಲ್ಹಾರ.
ತಾಲೂಕ ಕೇಂದ್ರವಾಗಿರುವ ಕೊಲ್ಹಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಬಹು ಅವಶ್ಯಕವಾಗಿತ್ತು. ತಮ್ಮ ದೈನಂದಿನ ಕೆಲಸಗಳಿಗೆ ಆಗಮಿಸುವ ಜನರ ಹಸಿವು ಇಂದಿರಾ ಕ್ಯಾಂಟಿನ್ ನೀಗಿಸಲಿದೆ.
ಮಹಾಂತೇಶ ಗಿಡ್ಡಪ್ಪಗೋಳ, ಪ.ಪಂ ಸದಸ್ಯರು ಕೊಲ್ಹಾರ.