Sunday, 5th January 2025

Dereliction of Duty: ಕರ್ತವ್ಯ ಲೋಪ: ಬಾಲ ಮಂದಿರದ ಅಧೀಕ್ಷಕಿಗೆ ನೋಟಿಸ್

ತುಮಕೂರು: ನಗರದ ಬಾಲಮಂದಿರದ ಅಧೀಕ್ಷಕಿ ಸತ್ಯಪ್ರೇಮ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಕಾರಣ ಕೇಳಿ ನೋಟಿಸ್ ನೀಡಿ, ಏಳು ದಿನದ ಒಳಗೆ ಸಮಾಜಯಿಷಿ ನೀಡುವಂತೆ ಆದೇಶಿಸಿದ್ದಾರೆ.

ಅನಿರೀಕ್ಷಿತ ಭೇಟಿ

ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ರವಿ, ಕಳೆದ ಆಗಸ್ಟ್‌ 23 ರಂದು ಬಾಲಮಂದಿರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ವೇಳೆ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ಪೋಕ್ಸೋ ಸಂತ್ರಸ್ತರಿಗೆ ಸಹಾಯಧನವನ್ನು ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಬೇರೆಡೆಗೆ ಮಕ್ಕಳು ದಾಖಲು

ಬಾಲಮಂದಿರದಲ್ಲಿರುವ 63 ಮಕ್ಕಳ ಪೈಕಿ 23 ಮಕ್ಕಳನ್ನು ವಿವಿಧ ವಸತಿ ಶಾಲೆಗಳಿಗೆ ದಾಖಲು ಮಾಡಿ ಮತ್ತೆ ಇದೇ ಮಕ್ಕಳು ಬಾಲಮಂದಿರದಲ್ಲೇ ಇರುವುದಾಗಿ ಹಾಜರಾತಿ ಪುಸ್ತಕದಲ್ಲಿ ಹೆಸರು ನಮೂದನೆ ಮಾಡಿ ಈ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಅಸಮರ್ಪಕ ನಿರ್ವಹಣೆ

ಸಂಸ್ಥೆಯಲ್ಲಿ ನಿಯಮನುಸಾರ ನಿರ್ವಹಿಸಬೇಕಾದ ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಹಾಗೂ ಮಕ್ಕಳಿಗೆ ಅವಶ್ಯವಿರುವ ಮೂಲ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಂಡಿಲ್ಲ ಎಂಬ ಕಾರಣ ಗಳಿಗಾಗಿ ಬಾಲಮಂದಿರದ ಅಧೀಕ್ಷಕಿ ಸತ್ಯಪ್ರೇಮಗೆ ನೋಟಿಸ್ ಜಾರಿ ಮಾಡಲಾಗಿದೆ.

Leave a Reply

Your email address will not be published. Required fields are marked *