Monday, 25th November 2024

Physical Abuse: ಪಾಪಿ ತಂದೆಯಿಂದ 14 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸಿರಿನಿಂದ ಕೃತ್ಯ ಬಯಲು

physical abuse

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗುತ್ತದೋ ಅದೇ ಪರಿಸ್ಥಿತಿ ತುಮಕೂರಿನ ಬಡ ಹುಡುಗಿಯೊಬ್ಬಳಿಗೆ ಆಗಿದೆ. ಮಗಳನ್ನು ಕಾಪಾಡಬೇಕಿದ್ದ ತಂದೆಯೇ ಪೈಶಾಚಿಕ ಕೃತ್ಯ (crime news) ಎಸಗಿದ್ದು, ಮಗಳ ಮೇಲೆ ನಿರಂತರ ಅತ್ಯಾಚಾರ (Physical Abuse) ನಡೆಸಿದ್ದಾನೆ. ಬಾಲಕಿ 3 ತಿಂಗಳ ಗರ್ಭಿಣಿಯಾದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

ತುಮಕೂರು (tumkur news) ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರ್ಬರ ಘಟನೆ ನಡೆದಿದೆ. ಕಾಮುಕ ತಂದೆ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. 14 ವರ್ಷದ ಮಗಳು ಗರ್ಭ ಧರಿಸಿದ್ದು, ಆಗ ಅಪ್ಪನ ಕೃತ್ಯ ಬಯಲಿಗೆ ಬಂದಿದೆ.

ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಘಟನೆ ಬೆಳಕು ಕಂಡಿದೆ. ತನ್ನ ಮಗಳ ಮೇಲೆಯೇ ತಂದೆ ಕ್ರೌರ್ಯ ಎಸಗಿರುವುದು ತಿಳಿದುಬಂದಿದೆ. ತಂದೆಯ ಮೇಲೆ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪದಡಿ ಕೇಸ್ ದಾಖಲಾಗಿದೆ. ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ.

ದರ್ಶನ್‌ ಶೂಗಳಲ್ಲಿ ಸಿಕ್ಕಿತು ಮಹತ್ವದ ಸಾಕ್ಷಿ! ನಟನಿಗೆ ಮತ್ತೊಂದು ಸಂಕಷ್ಟ

ಬೆಂಗಳೂರು: ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ (renuka swamy murder) ಪ್ರಕರಣದಲ್ಲಿ, ಆರೋಪಿ ದರ್ಶನ್‌ ವಿರುದ್ಧ ಮತ್ತೊಂದು ಮಹತ್ವದ ಸಾಕ್ಷಿ ಲಭ್ಯವಾಗಿದೆ. ಇದು ನಟನಿಗೆ ಕಂಟಕವಾಗಿ ಪರಿಣಮಿಸಲಿದೆ.

ರೇಣುಕಾ ಸ್ವಾಮಿ ಮೇಲೆ ನಡೆಸಲಾದ ಚಿತ್ರಹಿಂಸೆಯಲ್ಲಿ ದರ್ಶನ್‌ ಪಾತ್ರವೂ ಇದೆಯೆಂದು ಹೇಳಲಾಗಿತ್ತು. ಆದರೆ ಅದಕ್ಕೆ ಪೂರಕ ಸಾಕ್ಷಿಗಳು ಸಿಕ್ಕಿರಲಿಲ್ಲ. ಇದೀಗ ಎವಿಡೆನ್ಸ್‌ಗಳ ಮೇಲೆ ನಡೆಸಲಾದ ಲೂಮಿನಲ್ ಟೆಸ್ಟ್‌ನಲ್ಲಿ ಪೂರಕ ಸಾಕ್ಷಿ ದೊರೆತಿದೆ. ದರ್ಶನ್ ಧರಿಸಿದ್ದ ಶೂಗಳೇ ಇದೀಗ ಪ್ರಮುಖ ಸಾಕ್ಷಿ ಆಗಲಿವೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ದರ್ಶನ್ ಶೂಗಳನ್ನು ಲೂಮಿನಲ್ ಟೆಸ್ಟ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು ಕಳಿಸಿದ್ದರು. ಲೂಮಿನಲ್ ಟೆಸ್ಟ್ ವೇಳೆ ದರ್ಶನ್ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಇದು ಮೂರನೇ ಮುಖ್ಯ ಎವಿಡೆನ್ಸ್ ಆಗಿ ದೊರೆತಿದೆ.

ಈ ಹಿಂದೆ ದರ್ಶನ್ ಟಿ ಶರ್ಟ್ ಮೇಲೂ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿದ್ದವು. ಇದನ್ನು ಹಲ್ಲೆಯ ಸಂದರ್ಭದಲ್ಲಿ ದರ್ಶನ್‌ ಧರಿಸಿದ್ದರು. ಇದೀಗ ದರ್ಶನ್ ಧರಿಸಿದ್ದ ಟೀಶರ್ಟ್, ಪ್ಯಾಂಟ್, ಬೆಲ್ಟ್‌ ಜೊತೆಗೆ ಶೂ ಕೂಡ ಪ್ರಮುಖ ಸಾಕ್ಷ್ಯಗಳಾಗಿವೆ. ಬೆಲ್ಟ್‌ನಿಂದ ರೇಣುಕಾಸ್ವಾಮಿ ಮೇಲೆ ಹೊಡೆದಿದ್ದ, ಶೂಗಳಿಂದ ಒದ್ದಿದ್ದ ಬಗೆ ದೂರಲಾಗಿತ್ತು. ಹೀಗಾಗಿ ಅದೂ ಸಾಕ್ಷಿಯಾಗಿದೆ.

ಚಾರ್ಜ್ ಶೀಟ್‌ನಲ್ಲಿ ಈ ಮೂರು ವಸ್ತುಗಳ ಬಗ್ಗೆ ಪೊಲೀಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ‌ದರ್ಶನ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಜ್ಜಾಗಿದ್ದಾರೆ. ಚಾರ್ಜ್‌ಶೀಟ್‌ ಪುಟಗಳ ಸಂಖ್ಯೆ 4800ಕ್ಕೂ ಮೀರಿದೆ ಎಂದು ತಿಳಿದುಬಂದಿದೆ. ಎಸ್ಪಿಪಿ ಪ್ರಸನ್ನಕುಮಾರ್ ಮುಖಾಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Mamata Banerjee: ಅಪರಾಜಿತ ಮಸೂದೆ ಜಾರಿ; ಅತ್ಯಾಚಾರಿಗಳ ವಿರುದ್ಧ ದೀದಿ ದಿಟ್ಟ ನಡೆ