ಮುನಿರಾಜು ಅರಿಕೆರೆ ಚಿಕ್ಕಬಳ್ಳಾಪುರ
ಸೇವಾ ಭದ್ರತೆ ಬದಲಿಗೆ ಅಭದ್ರತೆಗೆ ಒತ್ತು
ಜೀವನಕ್ಕೆ ತಂದಿದೆ ಕುತ್ತು
ಕಾಯಂಗೊಳಿಸಲು ಒತ್ತಾಯ
ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕಟಣೆ ಗೊಂದಲದ ಗೂಡಾಗಿದ್ದು, ಸೇವಾ ಭದ್ರತೆ ಕೊಡಿ ಎಂದು ಕೇಳಿದ್ದ ಅತಿಥಿಗಳ ಬದುಕಿಗೆ ಅಭದ್ರತೆಯ ಕೊಡುಗೆ ನೀಡಿದೆ. ಇದಕ್ಕೆ ಅತಿಥಿ ಉಪನ್ಯಾಸಕ ವಲಯದಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.
ಹೌದು ರಾಜ್ಯದ ಉದ್ದಗಲಕ್ಕೂ ಇರುವ ೪೩೦ ಸರಕಾರಿ ಪದವಿ ಕಾಲೇಜುಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅತಿಥಿ ಉಪನ್ಯಾ ಸಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿರುವ ೧೧೫೦೦ ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆಗೆ ಬೆಲೆ ನೀಡಬೇಕು. ವೈನಾಗಿ ಸಿಂಗಾರಗೊಂಡು ಬೀದಿಯಲ್ಲಿ ನಿಲ್ಲುವ ನಿತ್ಯ ಸುಮಂಗಲಿ ಯಂತೆ ಪ್ರತಿವರ್ಷವೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದು, ಮೆರಿಟ್ ಪಟ್ಟಿಯಲ್ಲಿ ನನ್ನ ಹೆಸರೆಲ್ಲಿದೆ ಎಂದು ದುರ್ಭೀನು ಹಾಕಿ ಹುಡುಕುವುದು, ಕೌನ್ಸೆಲಿಂಗ್ ದಿವಸ ಜಾತಕ ಪಕ್ಷಿಗಳಂತೆ ಕಾದು ಸಿಕ್ಕ ಕಡೆ ಹೋಗಿ ಕೆಲಸ
ಮಾಡಿಸುವ ವ್ಯವಸ್ಥೆಗೆ ಇನ್ನಾದರೂ ವಿರಾಮ ನೀಡಲು ಇಲಾಖೆ ಮುಂದಾಗಲಿ.
ಕಾರಣ ಎಷ್ಟೋ ಸಂದರ್ಭಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ನಿಯಮಾವಳಿಯಂತೆ ಎಲ್ಲಾ ತಪಾಸಣೆಗಳನ್ನು ಯಶಸ್ವಿಯಾಗಿ ಮುಗಿಸಿ ಕರ್ತವ್ಯಕ್ಕೆ ಹಾಜರಾದರೂ ನೆಮ್ಮದಿ ಮರೀಚಿಕೆ. ಆಯ್ಕೆಯಾದ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಆದೇಶದಂತೆ ೮-೧೦ ತಿಂಗಳು ಕೆಲಸ ಮಾಡಲೂ ಬಿಡದೆ ಹೊಸ ನೇಮಕಾತಿ,ಅಕಾಲಿಕ ವರ್ಗಾವಣೆ, ಹುದ್ದೆ ಸಹಿತ ವರ್ಗಾವಣೆಗಳ ನೆಪದಲ್ಲಿ ಕನಿಷ್ಟ ನೋಟಿಸ್ ಕೊಡದೆ ಕೆಲಸದಿಂದ ತೆಗೆದು ಬೀದಿಗೆ ತಳ್ಳಿರುವುದು ಉಂಟು.
ಈಗಲಾದರೂ ಸರಕಾರ ಮುಖ್ಯಮಂತ್ರಿಗಳು ಮಾನವೀಯತೆ ಆಧಾರದಲ್ಲಿ ನಮ್ಮನ್ನು ಕಾಯಂಗೊಳಿಸಿ ಉದ್ಯೋಗ ಭದ್ರತೆ ನೀಡಿ ಎಂದು ಬೇಡುತ್ತಾ ಬಂದಿದದ್zರೆ. ಆದರೆ ಇಲಾಖೆ ಮಾತ್ರ ಈ ಕಡೆ ನೋಡದೆ ಪ್ರತಿವರ್ಷವೂ ನೇಮಕಾತಿಗೆ ಹೊಸ ಹೊಸ ನಿಯಮಾವಳಿ ತಂದು ಅತಿಥಿಗಳ ಬದುಕನ್ನು ಮತ್ತಷ್ಟು ಅಸಹನೀಯಗೊಳಿಸಿದೆ. ಕಾಯಂ ಉಪನ್ಯಾಸಕರ ನೇಮಕಾತಿಗೆ ಇಲ್ಲದ ನಿಬಂಧನೆಗಳನ್ನು ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ತಂದು
ಆಧುನಿಕ ಜೀತಗಾರಿಕೆಗೆ ಮುನ್ನುಡಿ ಬರೆಯುತ್ತಿದೆ ಎನ್ನುವುದು ಅತಿಥಿ ಉಪನ್ಯಾಸಕರ ಅಳಲು
ಏನಿದು ನೇಮಕದ ಗೊಂದಲ?
೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿಗಳಾಗಿ ಕರ್ತವ್ಯ ನಿರ್ವಹಿಸಿದ ಕಾಲೇಜಿನಲ್ಲಿ ಕಾರ್ಯಭಾರ ವಿದ್ದಲ್ಲಿ, ೨೦೨೪-೨೫ನೇ ಸಾಲಿಗೆ ಅರ್ಜಿ ಸಲ್ಲಿಸುವಾಗ ಕಂಟಿನ್ಯೂ ಆಫ್ಶನ್ಗೆ ಟಿಕ್ ಮಾಡಿದರೆ ಅವರನ್ನು ಅಲ್ಲಿಯೇ ಮುಂದುವರೆಸಲಾಗುವುದು ಎಂದಿದೆ. ಆದರೆ ರಾಜ್ಯ ಸರಕಾರ ಎನ್ಇಪಿ ರದ್ದುಗೊಳಿಸಿ ಎಸ್ಇಪಿ ಜಾರಿಗೊಳಿಸಿದ
ಕಾರಣ ಮೊದಲೇ ಬೋಧನಾ ಕಾರ್ಯಭಾರ ದಿಢೀರ್ ಕುಸಿತಕಂಡಿದೆ. ಮತ್ತು ಇದೇ ಮೊದಲ ಬಾರಿಗೆ ಮಂಜೂರಾತಿ ಹುದ್ದೆಗಳ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ತೋರಿಸಬಾರದು ಎಂದಿರುವುದು ಕೂಡ ಗೊಂದಲ ತಂದಿದೆ.
ಹಿಂದಿನ ವರ್ಷಗಳಲ್ಲಿ ಇದೇ ಹುದ್ದೆಯ ಕಾರ್ಯಭಾರ ನಿರ್ವಹಿಸಿರುವ ಅತಿಥಿ ಉಪನ್ಯಾಸಕರು ಇಎಂಐಎಸ್ನಲ್ಲಿ ಇದನ್ನು ತೋರಿಸದ ಕಾರಣ ಕಂಟಿನ್ಯೂ ಆಪ್ಶನ್ ಎಂಟ್ರಿ ಮಾಡಲಾಗದೆ ಇಕ್ಕಟ್ಟಿನಲ್ಲಿದ್ದಾರೆ. ೧೫,೧೯ಗಂಟೆಗಳ ಬೋಧನೆಗೆ ಆಯ್ಕೆ ಆಗುವ ಅತಿಥಿ ಉಪನ್ಯಾಸಕರು ಇತರೆ ಕಾಲೇಜು, ಸಂಸ್ಥೆಗಳಲ್ಲಿ ಕೆಲಸ ಮಾಡಬಾರದು ಎನ್ನುವ
ಕಂಡೀಷನ್ ಸರಿಯಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನದ ಖಾತರಿ ನೀಡಿ ಈ ಕೆಲಸ ಮಾಡಲು ಹೇಳಲಿ ಎನ್ನುವುದು ಎರಡನೇ ಸಮಸ್ಯೆಯಾಗಿದೆ. ಹಿಂದೆ ಅರೆಕಾಲಿಕ ಉಪನ್ಯಾಸಕರನ್ನು ಕಾಯಂಗೊಳಿಸುವ
ಸಂದರ್ಭದಲ್ಲಿ ಪರಿಗಣಿಸಿದ ನಿಯಮಗಳನ್ನೇ ಈಗಿನ ಅತಿಥಿಗಳ ನೇಮಕಾತಿಗೂ ಅನ್ವಯಿಸಿ ೨೦೦೯ಕ್ಕೂ ಹಿಂದಿನ ಎಂಫಿಲ್ ಅನ್ನು ಯುಸಿಜಿ ಅರ್ಹತೆಯಾಗಿ ತರಲಿ ಎನ್ನುವುದು ಅತಿಥಿಗಳ ಆಗ್ರಹವಾಗಿದೆ.
*
ಮುಷ್ಕರದ ಅವಧಿಯನ್ನು ಕಡಿತಗೊಳಿಸಿ ಸೇವಾ ಪ್ರಮಾಣ ಪತ್ರ ನೀಡುತ್ತಿರುವುದು ಸರಿಯಲ್ಲ. ಅತಿಥಿ ಉಪನ್ಯಾ ಸಕರ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೆ.೭ರ ಒಳಗೆ ಇಲಾಖೆ ಇದನ್ನು ಸರಿಪಡಿಸಬೇಕು. ಮುಷ್ಕರದ ಅವಧಿಯ ವೇತನ ಬಿಡುಗಡೆ ಜತೆಗೆ ಇದನ್ನು ಸೇರಿಸಿ ಸೇವಾ ಪ್ರಮಾಣ ಪತ್ರ ನೀಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಸರಕಾರಕ್ಕೆ ಮನವಿ ಮಾಡುತ್ತೇನೆ.
-ಪುಟ್ಟಣ್ಣ ಎಂಎಲ್ಸಿ ಬೆಂಗಳೂರು ಶಿಕ್ಷಕರ ಕ್ಷೇತ್ರ