Sunday, 27th October 2024

Darga Urus: ಎರಡು ದಿನಗಳ ಕಾಲ ಮರುಗಮಲ್ಲ ದರ್ಗಾ ಉರುಸು ಕಾರ್ಯಕ್ರಮ ವಿಜೃಂಭಣೆಯಿಂದ

ಚಿಂತಾಮಣಿ : ಇದೇ ಸೆಪ್ಟೆಂಬರ್ ತಿಂಗಳ ೧೬ ಮತ್ತು ೧೭ರಂದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯತಾಣವಾಗಿರುವ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ -ಬಾಬಾಜಾನ್ ದರ್ಗಾ ದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಉರುಸ್ ಕಾರ್ಯಕ್ರಮ  ನಡೆಯುತ್ತದೆ ಎಂದು ದರ್ಗಾ ಕಾರ್ಯದರ್ಶಿ ಆರಿಫ್ ಖಾನ್ ಹೇಳಿದರು.

ಉರುಸು ಪ್ರಯುಕ್ತ ದರ್ಗಾ ಆವರಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ೧೬ರ ಸೋಮವಾರದಂದು ಈದ್ ಮಿಲಾದ್ ಹಬ್ಬವಿದ್ದು ಅದೇ ದಿನ ಸಂಜೆ ಊರಿನ ಗಂಧೋತ್ಸವ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಸಂಜೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಗಂಧೋತ್ಸವದ ಮೆರವಣಿಗೆ ಯನ್ನು ಅದ್ದೂರಿಯಾಗಿ ಮಾಡಲಾಗುವುದು. ರಾತ್ರಿ ೧೦ ಕ್ಕೆ ಖ್ಯಾತ ಕಲಾವಿದರಾದ ಜುನೇದ್ ಸುಲ್ತಾನಿ ಹಾಗೂ ಪರ್ವೇಜ್ ಆಲಂ ಅವರಿಂದ ಕವಾಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆಯಲಿರುವ ಗಂಧೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭಕ್ತಾದಿಗಳು ಕಡ್ಡಾಯ ವಾಗಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿ ದರು.

ದರ್ಗಾ ಸಮಿತಿ ಉಪಾಧ್ಯಕ್ಷ ಟೊಮೊಟೊ ಗೌಸ್ ಪಾಷಾ ಮಾತನಾಡಿ ಗಂಧೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ವಾಹನಗಳಲ್ಲಿ ಬರುವ ಭಕ್ತಾದಿಗಳು ಟ್ರಾಫಿಕ್ ನಿಯಮ ಮತ್ತು ಕಾನೂ ನನ್ನು ಉಲ್ಲಂಘನೆ ಮಾಡಬಾರದು. ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡಿದರೆ ಅವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ ಈ ಬಗ್ಗೆ ಎಚ್ಚರವಿರಲಿ ಎಂದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಂಡಿ ಸುಹೇಲ್ ಅಹಮದ್ ಮಾತನಾಡಿ ದರ್ಗಾ ಅಭಿವೃದ್ದಿಗಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ವಕ್ಫ್ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ರಾಜ್ಯ ವಕ್ಫ್ ಅಧ್ಯಕ್ಷರು ಸುದೀರ್ಘವಾಗಿ ಚರ್ಚೆ ನಡೆಸಿ ೨೫ ಕೋಟಿ ವೆಚ್ಚದ ಯೋಜನೆ ತಯಾರಿಸಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ದರ್ಗಾ ಸಮಿತಿಯ ಸದಸ್ಯರಾದ ಅಮೀರ್ ಜಾನ್, ಅಮಾನುಲ್ಲಾ, ನಜೀರ್, ವಕೀಲರಾದ ಅನ್ವರ್ ಖಾನ್, ಅಬ್ದುಲ್ ಸಲಾಂ, ಜಬಿವುಲ್ಲಾ, ಫೈಯಾಜ್, ಖಲೀಂ, ಜಿಲಾನಿ, ಆಸಿಫ್, ಫಯಾಜ್ ದರ್ಗಾ ಮೇಲ್ವಿಚಾರಕರಾದ ತಯೂಬ್ ನವಾಜ್‌ ಸೇರಿದಂತೆ ಗ್ರಾಮದ ಮುಖ್ಯಸ್ಥರು ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.