ಬೆರಳ ತುದಿಯಲ್ಲಿ ಎಲ್ಲ ಮಾಹಿತಿಗಳೂ ಲಭ್ಯವಿರುವ ಈ ಆನ್ ಲೈನ್ ಕಾಲದಲ್ಲಿ ಮನೆಯಲ್ಲಿಯೇ ಇದ್ದು ದೈಹಿಕ ಚಟುವಟಿಕೆ ಗಳು ಬಹಳವೇ ಕಡಿಮೆಯಾಗಿರುವಾಗ, ಮಕ್ಕಳನ್ನು ವಾಕಿಂಗ್, ಜಾಗಿಂಗ್ , ಯೋಗ ಅಥವಾ ಯಾವು ದಾದರೂ ಶ್ರಮಿಕ ಕಾರ್ಯ ದಲ್ಲಿ ತೊಡಗಿಸೋಣವೆಂದರೆ ತಲೆಮಾರಿಗೆ ವಂಶವಾಹಿಯಾಗಿರುವ ಬಳುವಳಿ ಸೋಮಾರಿ ತನ! ಅದರೊಂದಿಗೆ ವಿಳಂಬ ಪ್ರವೃತ್ತಿ. ಇಂತಹ ನಿದರ್ಶನಗಳೇ ತುಂಬಿರುವ ಇಂದಿನ ಈ ಕಾಲದಲ್ಲಿ ಹಿರಿಯ ನಾಗರಿಕ ರೊಬ್ಬರು ಯುವಕರಿಗೆ ಪರ್ವತಾರೋಹಣದಲ್ಲಿ ಮಾರ್ಗದರ್ಶನ ನೀಡುವ ವಿಷಯ ಬಹುವಿಶೇಷ.
ಸೌಮ್ಯ ಪ್ರಮೋದ್
ನನ್ನ ಇವರ ಪರಿಚಯ ಇಂದು ನಿನ್ನೆಯದಲ್ಲ. ನಾ ಚಿಕ್ಕ ಮಗುವಾಗಿದ್ದಾಗಿನಿಂದಲೂ ಇವರನ್ನು ಪ್ರೀತಿಯಿಂದ ಬಿ.ಯು.ಕೆ. ಮಾಮ ಎಂದೇ ಕರೆದಿದ್ದು. ನನ್ನ ತಂದೆಯವರೊಂದಿಗೆ ಒಂದೇ ಕಚೇರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೇಂದ್ರ ಸರಕಾರ ದಡಿಯಲ್ಲಿ ಗುರುತಿಸಿಕೊಳ್ಳುವ ಇಎಸ್ಐಸಿ ಕಚೇರಿಯಲ್ಲಿ ಸುಮಾರು 30 ವರ್ಷ ಸಹೋದ್ಯೋೋಗಿಗಳಾಗಿದ್ದರು. ಅವರೇ ಬಿ.ಯು.ಕೃಷ್ಣ ಮೂರ್ತಿ.
ಯುವಕರಲ್ಲಿ ಗೆಲುವು, ಉತ್ಸಾಹ, ಧೈರ್ಯ, ಸಫಲತೆ, ಆಶಾವಾದ, ಕ್ರೀಡಾ ಮನೋಭಾವ, ಸಾಧನೆಯ ಛಲ, ಸ್ಪೂರ್ತಿಯನ್ನು ತುಂಬುತ್ತಾ ದಣಿವೇ ಅರಿಯದೆ 67 ಯುವ ವಸಂತಗಳನ್ನು ಪೂರೈಸಿರುವ ಬಿ.ಯು.ಕೃಷ್ಣಮೂರ್ತಿ ಎಂಬ ಚಾರಣ ಮತ್ತು ಪರ್ವತಾರೋಹಣ ನಡೆಸುವ ವಿವರಗಳು ಬಹು ಕುತೂಹಲಕಾರಿ.
ಇವರ ಪ್ರಮುಖ ಹವ್ಯಾಸವೆಂದರೆ, ಪರ್ವತಾರೋಹಣ. ನಿಜ ಹೇಳಬೇಕೆಂದರೆ, ಅದು ಅವರ ಹವ್ಯಾಸಕ್ಕಿಂತ ಮಿಗಿಲು, ಉಸಿರು ಎಂದರೂ ತಪ್ಪಿಲ್ಲ. ತಾವು ಪರ್ವತ ಏರುವುದರ ಜತೆಯಲ್ಲೆ, ಹಲವರಿಗೆ ಪರ್ವತಾರೋಹಣದ ಶಿಕ್ಷಣ ನೀಡುತ್ತಾ ಸ್ವಾವಲಂಬಿ ಜೀವನ ನಡೆಸುವತ್ತ ಪ್ರೇರೇಪಿಸು ತ್ತಿರುವ ಈ ಕೃಷ್ಣಮೂರ್ತಿರವರದು ಬಹುಮುಖ ಪ್ರತಿಭೆ.
ನಾಯಕನನ್ನೇ ರಕ್ಷಿಸಿದ ಸದಸ್ಯ
1983 ರಲ್ಲಿ ಕಟ್ಮಂಡುವಿನಿಂದ ಮೌಂಟ್ ಎವರೆಸ್ಟ್ನ ಮೂಲ ಶಿಬಿರದ ಆ 18200 ಅಡಿ ಎತ್ತರವನ್ನು ಮೊದಲಿಗನಾಗಿ ತಲುಪಿ
ದ್ದಲ್ಲದೆ, ಹೈ ಆಲ್ಟಿಟ್ಯೂಡ್ ಸಿಕ್ನೆಸ್ನಿಂದ ಪ್ರಜ್ಞಾಹೀನನಾದ ತಂಡದ ನಾಯಕ ನನ್ನು ಶಿಬಿರಕ್ಕೆ ಮರಳಿ ಕರೆತರುವಲ್ಲಿ ಮತ್ತು ಜತೆಗಾರರಿಂದ ದಾರಿ ತಪ್ಪಿದ್ದ ಮತ್ತೊಬ್ಬ ಸದಸ್ಯನನ್ನು ಹುಡುಕಿ ಕರೆತಂದ ಗರಿಮೆ ಈ ನಮ್ಮ ಕನ್ನಡಿಗನಿಗೆ ಸೇರುತ್ತದೆ. ವಿಶೇಷತೆ ಎಂದರೆ ಕರ್ನಾಟಕ ಮತ್ತು ದಕ್ಷಿಣ ಭಾರತದಿಂದ ಆಯೋಜಿಸ ಲ್ಪಟ್ಟಿದ್ದ ಮೊದಲ ಅಂತಾರಾಷ್ಟ್ರೀಯ ಚಾರಣ ಇದು.
ಪಂಚಚೂಲಿ-3 ಶಿಖರವನ್ನು ಯಶಸ್ವಿಯಾಗಿ ಏರಿದ ತಂಡದ ಮುಂಚೂಣಿ ಸದಸ್ಯ ನಾಗಿ ಲಿಂಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡಿರುವ ಹೆಮ್ಮೆಯ ಕನ್ನಡಿಗ. ಹೀಗೆ 1983 ರಿಂದ ಪ್ರಾರಂಭವಾದ ಈ ಸಾಹಸ 2015 ರಲ್ಲಿ ಸ್ಟಾಂಗ್ ಕೊಂಗ್ರಿ ಎಂಬ 20178 ಅಡಿಯ ಚಾರಣದವರೆಗೂ ಅವಿರತ ನಡೆಯುತ್ತಲೇ ಬಂದಿದೆ. ಮೌಂಟ್ ಜಾಒನ್ಲಿ 21276 ಅಡಿ, ಬುಂಡೇರ್ ಪಂಚ್ 20871 ಅಡಿ, ಬದ್ರಿನಾಥ್ 19598 ಅಡಿ, ಕೈಲಾಷ್ 22742 ಅಡಿ, ತೇಲು 19691 ಅಡಿ, ಕಾಳಿಂದಿ 20023 ಅಡಿ, ಜಮ್ಮು ಕಾಶ್ಮೀರದ ಚಾರಣ 20066 ಅಡಿ ಕಾಮೆಟ್ 25466 ಅಡಿ ಈ ರೀತಿ ಹಲವು ಪರ್ವತಾರೋಹಣ ಮಾಡಿದ್ದಾರೆ.
ಸಹಾಯಕ್ಕೆ ಸದಾ ಮುಂದು ಇವರು ತಮ್ಮ ಈ ಸುದೀರ್ಘ 37 ವರ್ಷದ ಈ ಸಾಹಸಕರ ಅಭಿಯಾನದಲ್ಲಿ ಅನೇಕ ಜೀವಗಳನ್ನು ಉಳಿಸಿದ್ದಾರೆ. ಅನೇಕರಿಗೆ ಪರ್ವತಾರೋಹಣದ ಕಲೆಯನ್ನು ಬೋಧಿಸಿದ್ದಾರೆ. ಭಾರತೀಯ ಪರ್ವತಾರೋಹಣ ಸಂಸ್ಥೆೆಯ ವಿದೇಶಿ
ಪರ್ವತಾರೋಹಣ ತಂಡಗಳಿಗೆ ಸಂಪರ್ಕಾಧಿಕಾರಿಯಾಗಿದ್ದರು. ಮತ್ತೊಂದು ಹೆಮ್ಮೆಯ ವಿಷಯವೆಂದರೆ 2001 ಮೇ-ಜೂನ್
ನಲ್ಲಿ ಭಾರತೀಯ ಪರ್ವತಾರೋಹಣ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪರ್ವತಾರೋಹಣದಲ್ಲಿ ಯಶಸ್ವಿಯಾಗಿ
ಪಾಲ್ಗೊಂಡ ಮೊತ್ತ ಮೊದಲ ಕನ್ನಡಿಗ ಎಂಬ ಗರಿಮೆ ಹಿರಿಮೆ ಇವರಿಗೆ ಸಲ್ಲುತ್ತದೆ.
ತಾವು ಹುಟ್ಟು ಹಾಕಿದ ಪರ್ವತಾರೋಹಣ ಸಂಸ್ಥೆಯ ಮೂಲ ವಾಕ್ಯ ‘ಹೆಜ್ಜೆಗಳನ್ನು ಮಾತ್ರ ಬಿಡು, ಬೇರೇನನ್ನೂ ಬಿಡಬೇಡ’ ಇದನ್ನು ಅಕ್ಷರ ಸಹ ಪಾಲಿಸಿ ಬಹುತೇಕಯುವ ಜನತೆಗೆ ಇದನ್ನು ಪಾಲಿಸಲು ಮಾರ್ಗ ತೋರಿದ್ದಾರೆ. ಬೆಂಗಳೂರು ನಗರ ಪೊಲೀಸ್ ರವರ ನೇಬರ್ಹುಡ್ ಸ್ಕೀಮ್ನ ಅಡಿ ನಂದಿನಿ ಬಡಾವಣೆಯ ಪೊಲೀಸ್ ಠಾಣೆಯ ಸದಸ್ಯರಾಗಿ ಸಮರ್ಥಕವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬಹುಮುಖ ಆಸಕ್ತಿ
ಇದರ ಜತೆ, ಚಿತ್ರಕಲೆ, ಕವನ ಬರೆಯುವುದು, ನಾಟಕಗಳಲ್ಲಿ ಪಾತ್ರ ಮಾಡುವುದು, ನಾಣ್ಯ ಸಂಗ್ರಹ ಮೊದಲಾದ ಚಟುವಟಿಕೆ ಗಳಲ್ಲಿ ಕೃಷ್ಣಮೂರ್ತಿಯುವರು ತೊಡಗಿಕೊಂಡಿದ್ದಾರೆ. ಇವರು ಒಬ್ಬ ನಾಣ್ಯ ಶಾಸ್ತ್ರಜ್ಞ (ನುಮಿಸ್ಮಾಟಿಸ್ಟ್) ಬಹಳಷ್ಟು ಬಗೆಬಗೆಯ ನಾಣ್ಯಗಳನ್ನು ಸಂಗ್ರಹಿಸಿ, ಪ್ರದರ್ಶಿಸಿದ್ದಾರೆ.
*ಅಂಚೆಚೀಟಿ ಸಂಗ್ರಹಕಾರರೂ ಹೌದು.
*ಇವರೊಬ್ಬ ಫಿಲುಮಿನಿಸ್ಟ್, ಅಂದರೆ ಬೆಂಕಿ ಪೊಟ್ಟಣದ ಹೊರ ಲೇಬಲ್ ಸಂಗ್ರಹಿಸುವುದು. ಅನೇಕ ರೀತಿಯ ಬೆಂಕಿ ಪೊಟ್ಟಣ ಗಳನ್ನು ಇವರ ಬಳಿ ಕಾಣಬಹುದು.
*ಪರ್ವತಾರೋಹಣದ ಕುರಿತು, ಶಾಂತಿಯ ಪತಾಕೆ ಹಾರಿಸಲು, ಜೀವನದ ಹೋರಾಟದ ಕುರಿತು, ಮಾನವನ ಕುರಿತು ಹಲವು ಕವನಗಳನ್ನು ಬರೆದಿದ್ದಾರೆ.
ಗೌರವ
ಅನೇಕ ಸಂಘ ಸಂಸ್ಥೆಗಳು ಪರ್ವತಾರೋಹಣದಲ್ಲಿ ಇವರು ನೀಡಿರುವ ಕೊಡುಗೆಯನ್ನುಗುರುತಿಸಿ, ಗೌರವಿಸಿವೆ. ದೆಹಲಿಯ ಕನ್ನಡ ಮಾಸ ಪತ್ರಿಕೆ ಇವರ ಸೇವೆಯನ್ನು ಗುರುತಿಸಿ ಪುರಸ್ಕರಿಸಿದೆ. ಡಾ. ರಾಜ್ ಕುಮಾರ್ ಅಂರಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಕೃಷ್ಣದೇವರಾಯರ 500ನೆಯ ಪೀಠಾರೋಹಣ ವರ್ಷದ ಸಂದರ್ಭದಲ್ಲಿ ಪರ್ವತಾರೋಹಣ ಮತ್ತು ಸಾಹಸ ಚಟು ವಟಿಕೆಗಳಿಗಾಗಿ ಇವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತು.
ಯುವಕರಿಗೆ ಸ್ಫೂರ್ತಿ
ಬಿ.ಯು.ಕೃಷ್ಣಮೂರ್ತಿಯವರಿಗೆ ಈಗ 67 ವರ್ಷ ವಯಸ್ಸು. ಇಂದಿಗೂ ಪರ್ವತಾರೋಹಣ, ಚಾರಣದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಯುವಕರಿಗೆ ಮಾರ್ಗದರ್ಶನ ನೀಡುವ ಅವರ ಉತ್ಸಾಹ ಯುವಜನತೆಗೆ ಸ್ಫೂರ್ತಿಯಾಗಲಿ. ಇವರ ಮಾರ್ಗ ದರ್ಶನ ಇನ್ನೂ ಬಹಳಷ್ಟು ಯುವಕ ಯುವತಿಯರಿಗೆ ಪ್ರೇರಣೆಯಾಗಲಿ.
ಕೆಲವು ಸಾಧನೆಗಳು
*ಅಖಿಲ ಕರ್ನಾಟಕ ಕೌನ್ಸಿಲ್ನ ವ್ಯವಸ್ಥಾಪಕ ಸಮಿತಿಯ ಸದಸ್ಯರು
*ಹಿಲ್ ಟಾಪ್ ಪರ್ವತಾರೋಹಣ ಸಂಸ್ಥೆಯನ್ನು ಹುಟ್ಟು ಹಾಕಿ ಶಿಬಿರಗಳನ್ನು ಹಮ್ಮಿಕೊಂಡು ಬಹಳಷ್ಟು ಸಾಹಿಸಿಗಳನ್ನು ಬೆಳೆಸಿದರು
*ಆಲ್ ಇಂಡಿಯಾ ಸ್ಪೋರ್ಟ್ಸ್ ಕ್ಲೈಂಬಿಂಗ್ ಸ್ಪರ್ಧೆಯ ತೀರ್ಪುಗಾರರಾಗಿ ಸೇವೆ
*ಭಾರತೀಯ ಪರ್ವತಾರೋಹಣದ 2011 -13 ರ ಎಕ್ಸ್ಪೆಡಿಷನ್ ಸಮಿತಿಯ ಸದಸ್ಯ.
*ಕರ್ನಾಟಕ ದಕ್ಷಿಣ ವಲಯದ ಸ್ಪೋರ್ಡ್ಸ್ ಕ್ಲೈಂಬಿಂಗ್ ನ 2011 -13ರ ಸದಸ್ಯತ್ವ. 2016 ರಲ್ಲಿ ಪುನರ್ ನೇಮಕ.
*100 ರಿಂದ 900 ಕಿ ಮೀ ದೂರದ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದ ಹಿರಿಮೆ.
*ಸೌತ್ ಜೋನ್ ಟೀಮ್ ಸೆಲೆಕ್ಷನ್ಗಾಗಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಲ್ಲಿಕಾರ್ಯ ನಿರ್ವಹಣೆ
*ಇಎಸ್ಐಸಿ ಸಂಸ್ಥೆಯ ವಿನೋದಕೂಟದ ಗೌರವ ಖಜಾಂಚಿ.
ಬಹುಮುಖ ಆಸಕ್ತಿ
ಇದರ ಜತೆ, ಚಿತ್ರಕಲೆ, ಕವನ ಬರೆಯುವುದು, ನಾಟಕಗಳಲ್ಲಿ ಪಾತ್ರ ಮಾಡುವುದು, ನಾಣ್ಯ ಸಂಗ್ರಹ ಮೊದಲಾದ ಚಟುವಟಿಕೆ ಗಳಲ್ಲಿ ಕೃಷ್ಣಮೂರ್ತಿಯುವರು ತೊಡಗಿಕೊಂಡಿದ್ದಾರೆ.
*ಇವರು ಒಬ್ಬ ನಾಣ್ಯ ಶಾಸ್ತ್ರಜ್ಞ (ನುಮಿಸ್ಮಾಟಿಸ್ಟ್) ಬಹಳಷ್ಟು ಬಗೆಬಗೆಯ ನಾಣ್ಯಗಳನ್ನು ಸಂಗ್ರಹಿಸಿ, ಪ್ರದರ್ಶಿಸಿದ್ದಾರೆ.
*ಅಂಚೆಚೀಟಿ ಸಂಗ್ರಹಕಾರರೂ ಹೌದು.
*ಇವರೊಬ್ಬ ಫಿಲುಮಿನಿಸ್ಟ್, ಅಂದರೆ ಬೆಂಕಿ ಪೊಟ್ಟಣದ ಹೊರ ಲೇಬಲ್ ಸಂಗ್ರಹಿಸುವುದು. ಅನೇಕ ರೀತಿಯ ಬೆಂಕಿ ಪೊಟ್ಟಣ ಗಳನ್ನು ಇವರ ಬಳಿ ಕಾಣಬಹುದು.
*ಪರ್ವತಾರೋಹಣದ ಕುರಿತು, ಶಾಂತಿಯ ಪತಾಕೆ ಹಾರಿಸಲು, ಜೀವನದ ಹೋರಾಟದ ಕುರಿತು, ಮಾನವನ ಕುರಿತು ಹಲವು ಕವನಗಳನ್ನು ಬರೆದಿದ್ದಾರೆ.