ಬೆಂಗಳೂರು ತನ್ನ ಕಚೇರಿ ಮುದ್ರಣ ಪೋರ್ಟ್‌ಫೋಲಿಯೋಗೆ ಹೊಸ ಸೇರ್ಪಡೆಯಾಗಿ ಎಚ್‌ಪಿ ಕಲರ್ ಲೇಸರ್ ಜೆಟ್ ಪ್ರೊ 300 (HP Color LaserJet Pro 3000) ಸರಣಿಯನ್ನು ಎಚ್‌ಪಿ (HP Printer) ಪರಿಚಯಿಸಿದೆ. ಭಾರತದಲ್ಲಿ ತನ್ನ ವ್ಯವಹಾರಗಳಿಗೆ ಪೂರಕವಾಗಿ ಈ ಹೊಸ ಶ್ರೇಣಿಯು ಸೂಕ್ಷ್ಮ ಬಣ್ಣಗಳು ಮತ್ತು ತ್ವರಿತ ಮುದ್ರಣ ಒದಗಿಸುವ ಜೊತೆಗೆ ಕರೆಂಟ್ ಉಳಿಸಲು ಟೆರ್ರಾಜೆಟ್ ಟೋನರ್ ತಂತ್ರಜ್ಞಾನ ಇದು ಬಳಸಿಕೊಳ್ಳುತ್ತದೆ. ಭಾರತದಲ್ಲಿ ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್‌ಸರಣಿಯ ಎರಡು ಮಾದರಿಗಳಿವೆ: ಸಿಂಗಲ್-ಫಂಕ್ಷನ್ ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ ಪ್ರಿಂಟರ್ 3203ಡಿಡಬ್ಲ್ಯು ಮತ್ತು ಮಲ್ಟಿ-ಫಂಕ್ಷನ್ ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ ಪ್ರಿಂಟರ್ 3303ಎಸ್‌ಡಿಡಬ್ಲ್ಯು. ಇದು ವರ್ಣಮಯ ಹಾಗೂ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮುದ್ರಣ, ಸ್ಕ್ಯಾನಿಂಗ್ ಮತ್ತು ಕಾಪಿ ಮಾಡುವ ಸಾಮರ್ಥ್ಯ ಹೊಂದಿದೆ.
HP Launches New 3000 Series Color LaserJet Pro Printers For Indian Businesseshttps://t.co/Uyzlponf26
— GadgetBridge (@gadgetbridge) September 19, 2024
ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ 3000 ಸರಣಿಯು ಅಸಾಧಾರಣ ವೇಗ ಮತ್ತು ದಕ್ಷತೆ ನೀಡುತ್ತದೆ. ನಿಮಿಷಕ್ಕೆ 25 ಪುಟಗಳವರೆಗಿನ ಮುದ್ರಣ ವೇಗ ಮತ್ತು ಕೇವಲ 10.9 ಸೆಕೆಂಡುಗಳಲ್ಲೇ ಮೊದಲ ಪ್ರಿಂಟ್ ಔಟ್ ನೀಡುವ ಸಾಮರ್ಥ್ಯ ಹೊಂದಿದೆ. ಡೀಫಾಲ್ಟ್ ಡ್ಯುಪ್ಲೆಕ್ಸ್ ಮುದ್ರಣ ವೈಶಿಷ್ಟ್ಯವು ಪ್ರತಿ ಪುಟದ ಎರಡೂ ಬದಿಗಳಲ್ಲಿ ಸ್ವಯಂಚಾಲಿತವಾಗಿ ಮುದ್ರಿಸುವ ಮೂಲಕ ಕಾಗದದ ಬಳಕೆ ಮತ್ತು ವೆಚ್ಚ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದೊಂದಿಗೆ, ಈ ಸಾಧನವು 40,000 ಪುಟಗಳ ಸಾಮರ್ಥ್ಯ ಹೊಂದಿದ್ದು, ಟೋನರ್ ಯೀಲ್ಡ್ 1,300 ಬ್ಲ್ಯಾಕ್ ಮತ್ತು 1,200 ಕಲರ್ ಪುಟದವರೆಗೆ ನೀಡುತ್ತದೆ.
ಎಚ್‌ಪಿ ಇಂಡಿಯಾ ಮಾರ್ಕೆಟ್ ಪ್ರಿಂಟಿಂಗ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ಸುನೀಶ್ ರಾಘವನ್ ಪ್ರತಿಕ್ರಿಯಿಸಿ, “ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ವಿಸ್ತರಿಸುತ್ತಿರುವುದರಿಂದ, ಅವುಗಳ ಕಾರ್ಯಾಚರಣೆಗೆ ಪರಿಣಾಮಕಾರಿ ಮತ್ತು ಸುರಕ್ಷಿತ ಮುದ್ರಣವು ಮುಖ್ಯವಾಗಿರುತ್ತದೆ. ವೃದ್ಧಿಸುತ್ತಿರುವ ತಮ್ಮ ಅಗತ್ಯಗಳನ್ನು ಸರಿಯಾದ ತಾಂತ್ರಿಕ ಪರಿಹಾರಗಳೊಂದಿಗೆ ಸಮತೋಲನಗೊಳಿಸುವಲ್ಲಿ ಪ್ರಮುಖ ಎಸ್‌ಎಮ್‌ಬಿಗಳು ಎದುರಿಸುತ್ತಿರುವ ಸವಾಲುಗಳನ್ನು ನಾವು ಕಂಡಿದ್ದೇವ. , ಹೊಸ ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ 3000 ಸರಣಿಯನ್ನು ನಾವು ಸಂತೋಷದಿಂದ ಪರಿಚಯಿಸುತ್ತಿದ್ದೇವೆ. ನವೀನ ಟೆರ್ರಾಜೆಟ್ ತಂತ್ರಜ್ಞಾನ ಹೊಂದಿರುವ ಈ ಸರಣಿಯು ಕಾಂಪ್ಯಾಕ್ಟ್ ವಿನ್ಯಾಸದೊಳಗೆ ಅಸಾಧಾರಣ ಬಣ್ಣದ ಗುಣಮಟ್ಟ, ವೃತ್ತಿಪರ ವೇಗ ಮತ್ತು ಇಂಧನ ದಕ್ಷತೆ ನೀಡುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: Sourav Ganguly : ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಸೌರವ್ ಗಂಗೂಲಿ; ಪ್ರತಿಷ್ಠೆಗೆ ಹಾನಿಯಾಗಿರುವ ಆರೋಪ
ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ MFP 3303sdw ಉತ್ಪಾದಕತೆ 26 ಪಿಪಿಎಮ್ (ಲೆಟರ್) ಮತ್ತು 25 ಪಿಪಿಎಮ್ (A4) ಗಾತ್ರದಲ್ಲಿ ಎರಡು-ಬದಿಯ ಹೈ-ಸ್ಪೀಡ್ ವರ್ಣಮಯ ಮುದ್ರಣ ಒದಗಿಸುತ್ತದೆ. ಇದು 50-ಹಾಳೆಗಳ ಸ್ವಯಂಚಾಲಿತ ಡಾಕ್ಯುಮೆಂಟ್ ಫೀಡರ್ಮ ತ್ತು ತಡೆರಹಿತ ಸಂಪರ್ಕಕ್ಕಾಗಿ ವಿಶ್ವಾಸಾರ್ಹ Wi-Fi ಸಂಪರ್ಕ ಒಳಗೊಂಡಿದೆ. ನಿಮ್ಮ ಡೇಟಾದ ರಕ್ಷಣೆ ಖಚಿತಪಡಿಸಿಕೊಳ್ಳಲು ಎಚ್‌ಪಿ ವೂಲ್ಫ್ ಪ್ರೊ ಸೆಕ್ಯುರಿಟಿ ಮತ್ತು ಎಚ್‌ಪಿ ಸೆಕ್ಯುರಿಟಿ ಮ್ಯಾನೇಜರ್ ಮೂಲಕ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಬೆಲೆ ಎಷ್ಟು?
ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ 3203dw ಬೆಲೆ ರೂ. 50304 ರೂಪಾಯಿ ಬೆಲೆಯಾದರೆ, ಎಚ್‌ಪಿ ಕಲರ್ ಕಲರ್ ಲೇಸರ್ ಜೆಟ್ 3303sdw ಬೆಲೆ ರೂ. 61,181 ಆಗಿದೆ. ಕಪ್ಪು ಮತ್ತು ಲೇಸರ್ ಡ್ಯುಪ್ಲೆಕ್ಸ್ ಹೈ-ಸ್ಪೀಡ್ ಪ್ರಿಂಟರ್‌ಗಳ ಸಮಗ್ರ ಶ್ರೇಣಿ ನೀಡುವ ಎಚ್‌ಪಿ ವ್ಯಾಪಾರಗಳಿಗೆ ಮುದ್ರಣ ಪರಿಹಾರಗಳ ಆವಶ್ಯಕತೆಗಳನ್ನು ಪೂರೈಸುತ್ತದೆ. ಮೊನೊಕ್ರೋಮ್ ಡ್ಯುಪ್ಲೆಕ್ಸ್ ಲೇಸರ್ ಪ್ರಿಂಟರ್‌ಗಳನ್ನು ಎಚ್‌ಪಿ ವಿತರಿಸಿದೆ.