ಮದುವೆಯ ಮಧುರ ಕ್ಷಣಗಳು ಎದುರಾಗುವ ಸಮಯಕ್ಕಿಂತ ತುಸು ಮುಂಚೆ ನಡೆಯುವ ನಿಶ್ಚಿತಾರ್ಥ ಸಮಾರಂಭಕ್ಕೆ
ತನ್ನದೇ ಪಾವಿತ್ರ್ಯತೆ ಇದೆ. ಅದೊಂದು ಮಿನಿ ಮದುವೆ.
ಖುಷಿ
ಯುವಕರ ಬಾಳಲ್ಲಿ ಹರೆಯದ ವಯಸ್ಸು ರೋಮಾಂಚಕಾರಿ. ನಿಜವಾಗಿ ಅದ್ಭುತ ಅನಿಸುವ ಹಾಗೂ ಆತಂಕದೊಂದಿಗೆಯೇ ಒಳಗೊಳಗೆ ತವಕವನ್ನು ಅನುಭವಿಸುವ ಸುಮಧುರ ಕ್ಷಣ ನಿಶ್ಚಿತಾರ್ಥ. ಹರೆಯದಲ್ಲಿ ಪ್ರೀತಿ ಪ್ರೇಮ ಎಲ್ಲವೂ ಸಹಜ. ಆದರೆ ಗಂಡು-ಹೆಣ್ಣಿಗೆ ಹಾಗೂ ಹೆಣ್ಣು-ಗಂಡಿಗೆ ಪರಸ್ಪರ ಒಪ್ಪಿತವಾಗಿ ವಾಗ್ದಾನ ನೀಡುವ ಮಹೋನ್ನತ ಗಳಿಗೆಯೇ ನಿಶ್ಚಿತಾರ್ಹ.
ಇಲ್ಲಿ ಗಂಡು-ಹೆಣ್ಣಿನ ಜತೆಗೆ ಎರಡು ಕುಟುಂಬಗಳ ಒಪ್ಪಿತವೂ ಅಧಿಕೃತವಾಗುವುದರಿಂದ ಇದನ್ನು ಶೇ.50ರ ಪ್ರಮಾಣದ
ವಿವಾಹ ಎಂಬುದಾಗಿಯೇ ತೀರ್ಮಾನಿಸಲಾಗುತ್ತದೆ. ನಿಶ್ಚಿತಾರ್ಥ ಸಮಾರಂಭ ಮುಗಿಯಿತೆಂದರೆ ಅರ್ಧ ಪ್ರಮಾಣದ ವಿವಾಹ ವಾದಂತೆಯೇ ಎಂಬಷ್ಟು ನಂಬಿಕೆ. ಬಹುತೇಕ ನಿಶ್ಚಿತಾರ್ಥಗಳು ಮದುವೆಯ ಹಂತವನ್ನು ತಲುಪಿವೆ. ಕೆಲವು ನಿಶ್ಚಿತಾರ್ಥಗಳು ಮದುವೆವರೆಗೆ ಸಾಗದಿರಬಹುದು, ಆದರೆ ಇವು ಅಲ್ಪ ಪ್ರಮಾಣ ಉದಾಹರಣೆಗಳಷ್ಟೇ.
ಪ್ರಮುಖ ಕ್ಷಣ
ನಿಶ್ಚಿತಾರ್ಥ ಎಂಬುದು ಇಂದಿಗೆ ನಾನಾ ಸ್ವರೂಪಗಳನ್ನು ಪಡೆದಿರಬಹುದು, ಕಾರ್ಯಕ್ರಮಗಳ ಅದ್ಧೂರಿತನಕ್ಕೆ ಸಾಕ್ಷಿಯಾಗಿರ ಬಹುದು, ಆದರೆ ಎಂದಿಗೂ ತನ್ನ ಮಹತ್ವ ಕಳೆದುಕೊಳ್ಳುವುದಿಲ್ಲ. ಏಕೆಂದರೆ ನವ ದಾಂಪತ್ಯಕ್ಕೆ ಪ್ರವೇಶಿಸುವ ಗಂಡು-ಹೆಣ್ಣುಗಳ ಪರಸ್ಪರ ಭಾವನೆಗಳ ವಿನಿಮಯಕ್ಕೆ ಬರೆದ ಮುನ್ನುಡಿಯೇ ನಿಶ್ಚಿತಾರ್ಥ. ಐತಿಹಾಸಿಕವಾಗಿ ಗಮನಿಸುವುದಾದರೆ ನಿಶ್ಚಿತಾರ್ಥ ಎಂಬುದು ಒಂದು ಪ್ರಾಯೋಗಿಕ ಮದುವೆಯೇ ಹೌದು.
ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ಹಾಗೂ ಯುವಕ – ಯುವತಿ ವೈವಾಹಿಕ ಜೀವನ ಪ್ರವೇಶಿಸಲು
ಹೊಂದಾಣಿಕೆ ಬರುವವರೆಗೆ ಒಂದು ಒಪ್ಪಂದದ ಕ್ರಮವಾಗಿ ನಿಶ್ಚಿತಾರ್ಥವನ್ನು ಅಳವಡಿಸಿಕೊಂಡು, ಆಚರಿಸಿಕೊಂಡು ಬರ ಲಾಗುತ್ತಿದೆ. ಹಿಂದೆ ಎರಡು ಕುಟುಂಬಗಳ ನಡುವೆ ಆಚರಿಸಲ್ಪಡುತ್ತಿದ್ದ ನಿಶ್ಚಿತಾರ್ಥ ಎಂಬ ಒಪ್ಪಂದವು ಇಂದು ಒಂದು ಸಮಾ ರಂಭವಾಗಿ ಬದಲಾಗುತ್ತಿದೆ. ವಿವಾಹ ಕಾರ್ಯಕ್ರಮದಂತೆಯೇ ಅದ್ದೂರಿಯ ಆಚರಣೆಯಾಗಿ ಮಾರ್ಪಡುತ್ತಿದೆ. ಇದರ ರೀತಿ – ನೀತಿಗಳು ಬದಲಾದರೂ ಮೂಲ ಆಶಯ ಬದಲಾಗದು. ಕಾರಣ ಎರಡು ಮನಸ್ಸುಗಳು ವೈವಾಹಿಕ ಜೀವನ ಪ್ರವೇಶಿಸಲು ತಮ್ಮ ಒಳಿತು-ಕೆಡಕುಗಳ ಭಾವನೆಗಳನ್ನು ಹಂಚಿಕೊಳ್ಳಲು ಆಂಭಿಸುವ ಮೂಲಕ ಎರಡು ಆತ್ಮಗಳು ಒಂದುಗೂಡಲು ಆರಂಭಿ ಸುವ ಅತ್ಯದ್ಭುತ ಕ್ಷಣವೇ ಈ ನಿಶ್ಚಿತಾರ್ಥ.
ನಿಶ್ಚಿತಾರ್ಥ ಎಂದರೆ ಕೇವಲ ಒಂದು ಸಮಾರಂಭವಲ್ಲ. ಎರಡು ಬೇರೆ ಬೇರೆ ದೇಹಗಳನ್ನು, ಜೀವಗಳನ್ನು ಒಂದೇ ಆತ್ಮವಾಗಿ ರೂಪಿಸಲು ಹಿರಿಯರು ತೋರಿದ ದಾರಿಯ ಪ್ರಥಮ ಹೆಜ್ಜೆಯೇ ನಿಶ್ಚಿತಾರ್ಥ. ಹೆಸರೆ ಸೂಚಿಸುವಚಂತೆ ನಿಶ್ಚಿತಾರ್ಥ ಎಂದರೆ ವಿವಾಹಕ್ಕೆ ವಧು-ವರರನ್ನು ನಿಶ್ಚಯಗೊಳಿಸಿ, ಸಮಸ್ಯೆೆಗಳು ಎದುರಾಗದಂತೆ ಎಲ್ಲವನ್ನು ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಪಡಿಸಿಕೊಳ್ಳುವ ಒಂದು ಮಹತ್ವದ ತೀರ್ಮಾನವೂ ಹೌದು.
ನಿಶ್ಚಿತಾರ್ಥ ಎಂಬುದು ಆಚರಣೆ ಎಂದು ಭಾವಿಸುವವರಿಗೆ ಅದು ಕೇವಲ ಆಚರಣೆ. ಮತ್ತೆೆ ಕೆಲವರ ಪಾಲಿಗೆ ಅದೊಂದು ಪುರಾತನ ಸಂಸ್ಕೃತಿ. ವ್ಯಾಖ್ಯಾನಗಳು ಬದಲಾದರೂ, ವಿವಾಹಕ್ಕೆ ಸಜ್ಜುಗೊಳ್ಳುವ ಹೆಣ್ಣು- ಗಂಡಿಗೆ ಅದೊಂದು ವಿಸ್ಮಯ, ರೋಮಾಂಚನ, ಆತಂಕಗಳಿಂದ ಕೂಡಿದ ಅದ್ಭುತ ಅನುಭವ. ನವಿರು ಭಾವದ ಜತೆಗೆ ನವಜೀವನಕ್ಕೆ ಸಜ್ಜಾಗಲು ನಡೆಸುವ ಸಂಭ್ರಮ. ಜತೆಗೆ ಮುಂದಿನ ಬಾಳಿನ ಪಯಣದ ಕುರಿತಾಗಿ ಅಲ್ಪ ಪ್ರಮಾಣದ ಆತಂಕ. ಈ ಎಲ್ಲ ಭಾವನೆಗಳು ರೂಪು ಪಡೆಯಲು ಕಾರಣವಾದ ನಿಶ್ಚಿತಾರ್ಥ ಇಂದಿನ ಆಧುನಿಕ ಯುಗದಲ್ಲಿ ಆಂಗ್ಲಪದವಾದ ಎಂಗೇಜ್‌ಮೆಂಟ್ ಎಂದೇ ಜನಪ್ರಿಯ. ಇಂಥ ಎಂಗೇಂಜ್ ಮೆಂಟ್ ಎಂದರೆ ಹೇಳಿಕೊಳ್ಳದಂಥ ಮಧುರ ಸಂಕಟ. ಆದ್ದರಿಂದ ಬಹಳಷ್ಟು ಯುವಕರಲ್ಲಿ ನಿಶ್ಚಿತಾರ್ಥ ಎಂದೊ ಡನೆ ಮೂಡುವ ಭಾವ ‘ಎಂಗೇಜ್‌ಮೆಂಟ್ ಎಂದರೆ ಹೆಂಗೆಂಗೋ ಆಗುತ್ತೆ…’