Friday, 27th September 2024

Social Media: ಕೃತಕ ಬುದ್ಧಿಮತ್ತೆ ಸಾಮರ್ಥ್ಯ ವರ್ಧನೆಗೆ ಸೋಶಿಯಲ್ ಮೀಡಿಯಾಗಳಿಂದ ಮಾಹಿತಿ ಕಳ್ಳತನ

Social Media

ಕೃತಕ ಬುದ್ಧಿಮತ್ತೆ (Artificial Intelligence ) ಮಾದರಿಗಳ ರಚನೆಗೆ ಸಾಮಾಜಿಕ ಮಾಧ್ಯಮಗಳ (Social Media) ವೈಯಕ್ತಿಕ ಖಾತೆಗಳಿಂದ ಮಾಹಿತಿ ಕದಿಯಲಾಗುತ್ತದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದು ವೈಯಕ್ತಿಕ ಹಕ್ಕಿನ ಕಾಳಜಿಗೆ ಕಾರಣವಾಗಿದೆ. ಆದಾಗ್ಯೂ ಮಾಹಿತಿ ನೀಡಲು ಬಯಸದೇ ಇದ್ದರೆ ಆ ಆಯ್ಕೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಹಲವಾರು ಪ್ರಮುಖ ಸಾಮಾಜಿಕ ಜಾಲತಾಣದ ವೇದಿಕೆಗಳು ತಮ್ಮ ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಬಳಕೆದಾರರ ಮಾಹಿತಿಗಳನ್ನು ಬಳಸುತ್ತಿವೆ. ಉದಾಹರಣೆಗೆ OpenAI, ChatGPT ಮೊದಲಾದವುಗಳು ಬಳಕೆದಾರರ ಮಾಹಿತಿಯನ್ನು ಬಳಸುತ್ತಿರುವುದಾಗಿ ಒಪ್ಪಿಕೊಂಡಿದೆ. ಇದರಲ್ಲಿ ಲಿಂಕ್ಡ್‌ಇನ್, ಸ್ನ್ಯಾಪ್ ಚಾಟ್ ಕೂಡ ಸೇರಿಕೊಂಡಿದೆ. ಅದರ ಎಐ ಮಾದರಿಗಳನ್ನು ಪರಿಷ್ಕರಿಸಲು ಬಳಕೆದಾರರ ಮಾಹಿತಿ, ರೆಸ್ಯೂಮ್‌, ಸೆಲ್ಫಿಗಳನ್ನು ಬಳಸುತ್ತಿವೆ ಎನ್ನಲಾಗಿದೆ.

Social Media

ಭಾಷೆ, ಸಮಯ, ವಿವಿಧ ಕಾರ್ಯಕ್ರಮ ಸೇರಿದಂತೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸಂವಾದಾತ್ಮಕ ಮಾಹಿತಿಯನ್ನು ಸಂಗ್ರಹಿಸಿಕೊಂಡು ಎಐ ವ್ಯವಸ್ಥೆಗಳಿಗೆ ತರಬೇತಿ ನೀಡಲು ಬಳಸಲಾಗುತ್ತದೆ. ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಇದು ಬಳಸುವುದರಿಂದ ಅನೇಕ ಬಳಕೆದಾರರು ತೊಂದರೆ ಉಂಟಾಗುವ ಆತಂಕವೂ ಇದೆ.

ನೋಬಡೀಸ್ ಕೆಫೆಯ ಸಂಸ್ಥಾಪಕ ಡೇವಿಡ್ ಒಗಿಸ್ಟೆ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಐ ಅಭಿವೃದ್ಧಿಯೂ ಆತಂಕಕ್ಕೆ ಕಾರಣವಾಗಿದೆ. ಆದರೆ, ಗ್ರಾಹಕರ ಮಾಹಿತಿ ಬಳಕೆ ಮತ್ತು ಬಳಸಬಾರದು ಎಂಬುದರ ಆಯ್ಕೆಯೂ ಇದೆ. ಆದರೆ ಇದನ್ನು ಇನ್ನೂ ಪೂರ್ಣವಾಗಿ ಅಳವಡಿಸಿಲ್ಲ ಎಂದು ಹೇಳಿದ್ದಾರೆ.

Social Media

ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಎಐಗಾಗಿ ಡೇಟಾ ಹಂಚಿಕೆಯಿಂದ ಹೊರಗುಳಿಯುವ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತವೆ. ಆದರೆ ಸಾರ್ವಜನಿಕವಾಗಿ ಪೋಸ್ಟ್ ಮಾಡಿದ ವಿಷಯವನ್ನು ಮೂರನೇ ವ್ಯಕ್ತಿಗಳ ಮೂಲಕ ಪಡೆಯಲು ಸಾಧ್ಯವಾಗುತ್ತದೆ.

ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಎಐಗಾಗಿ ಬಳಕೆದಾರರ ಯಾವ ಮಾಹಿತಿ ಪಡೆಯುತ್ತದೆ ಎಂಬುದರ ಸಣ್ಣ ಮಾಹಿತಿ ಇಲ್ಲಿದೆ.

ಲಿಂಕ್ಡ್‌ಇನ್ ಎಐಗಾಗಿ ಬಳಕೆದಾರರ ಮಾಹಿತಿಯನ್ನು ಪಡೆಯುತ್ತದೆ. ಆದರೆ ಗ್ರಾಹಕರಿಗೆ ಅದರಿಂದ ಹೊರಗೆ ಹೋಗುವ ಅವಕಾಶ ಇದೆ.

ಎಕ್ಸ್ (ಹಿಂದಿನ ಟ್ವಿಟರ್‌) ಬಳಕೆದಾರರು ತಮ್ಮ ಪೋಸ್ಟ್‌ಗಳನ್ನು ಎಐ ಅಭಿವೃದ್ಧಿ ಮಾಡುವ ಗ್ರೋಕ್‌ಗೆ (Rrok) ನೀಡದಿರಲು ಬಯಸಿದರೆ ಆ ಆಯ್ಕೆಯನ್ನು ಪಡೆಯಬಹುದು.

ಸ್ನ್ಯಾಪ್‌ಚಾಟ್ ಎಐ ರಚಿಸಿದ ಜಾಹೀರಾತುಗಳಿಗಾಗಿ ಸೆಲ್ಫಿಗಳನ್ನು ಬಳಸುತ್ತದೆ. ಆದರೆ ಆಯ್ಕೆಯಿಂದ ಹೊರಗುಳಿಯಲು ಬಳಕೆದಾರರಿಗೆ ಅವಕಾಶವಿದೆ.

Unique Tradition: ಈ ನಗರದ ಗಡಿಯಾರದಲ್ಲಿ 12 ಸಂಖ್ಯೆಯೇ ಇಲ್ಲ!

ರೆಡ್ಡಿಟ್ ಎಐ ತರಬೇತಿಗಾಗಿ ಮೂರನೇ ವ್ಯಕ್ತಿಗಳಿಂದ ಅಂದರೆ ಸೋಶಿಯಲ್ ಮೀಡಿಯಾ ಬಳಕೆದಾರರ ಡೇಟಾ ಪಡೆಯುತ್ತದೆ. ಆದರೆ ಖಾಸಗಿ ವಿಷಯವನ್ನು ಹಂಚಿಕೊಳ್ಳುವುದಿಲ್ಲ.

ಮೆಟಾತನ್ನ ಎಐಗಾಗಿ ಫೇಸ್ ಬುಕ್ , ಇನ್ಸ್ಟಾ ಗ್ರಾಮ್ ಡೇಟಾ ಬಳಸುತ್ತದೆ. ಆದರೆ ಖಾಸಗಿ ಸಂದೇಶಗಳನ್ನು ಬಳಸುವುದಿಲ್ಲ.