Friday, 29th November 2024

Nicholas Pooran: ರಿಜ್ವಾನ್‌ ವಿಶ್ವ ದಾಖಲೆ ಮುರಿದ ಪೂರನ್‌

Nicholas Pooran

ಬಾರ್ಬಡೋಸ್‌: ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಎಡಗೈ ಬ್ಯಾಟರ್‌ ನಿಕೋಲಸ್‌ ಪೂರನ್‌(Nicholas Pooran) ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ರನ್‌ ಗಳಿಸಿದ(Most T20 runs in a calendar year) ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಜತೆಗೆ ಕ್ಯಾಲೆಂಡರ್ ವರ್ಷದಲ್ಲಿ150 ಸಿಕ್ಸರ್ ಸಿಡಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 28ನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ ವಿರುದ್ಧ ಪೂರನ್ 27 ರನ್ ಬಾರಿಸಿದದರು. ಇದೇ ವೇಳೆ ಅವರು ಟಿ20 ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಾಗಿ ಮೂಡಿಬಂದರು. ಇದುವರೆಗೆ ಈ ದಾಖಲೆ ಪಾಕಿಸ್ತಾನದ ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌(Mohammad Rizwan) ಹೆಸರಿನಲ್ಲಿತ್ತು. ರಿಜ್ವಾನ್‌ 2021ರಲ್ಲಿ 45 ಇನಿಂಗ್ಸ್​ಗಳಲ್ಲಿ ಒಟ್ಟು 2036 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಪೂರನ್‌ 2024ರಲ್ಲಿ ಸದ್ಯ 65 ಟಿ20 ಇನಿಂಗ್ಸ್ ಆಡಿ 2059* ರನ್ ಕಲೆಹಾಕಿದ್ದಾರೆ. ಈ ವರ್ಷ ಕೊನೆಗೊಳ್ಳುವ ವೇಳೆ ಪೂರನ್‌ 3 ಸಾವಿರ ಗಡಿ ದಾಟಿದರೂ ಅಚ್ಚರಿಯಿಲ್ಲ.

ಅತ್ಯಧಿಕ ಸಿಕ್ಸರ್‌ ದಾಖಲೆ

ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದ ಪೂರನ್‌ ಇದೀಗ ತಮ್ಮ ಸಿಕ್ಸರ್‌ಗಳನ್ನು 150ಕ್ಕೆ ಏರಿಸಿದ್ದಾರೆ. ಈ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ 150 ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ ಎಂಬ ಮೈಲುಗಲ್ಲು ನೆಟ್ಟರು. ಪೂರನ್ ಅವರಿಗಿಂತ ಮೊದಲು, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಕ್ರಿಸ್ ಗೇಲ್ 2015ರಲ್ಲಿ 36 ಪಂದ್ಯಗಳಲ್ಲಿ 135 ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ IND vs BAN: ಒಂದೂ ಎಸೆತ ಕಾಣದೆ ರದ್ದುಗೊಂಡ 2ನೇ ದಿನದಾಟ

ಭಾರತ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಒಂದು ಬಾರಿ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಟಿ20 ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. 2016ರಲ್ಲಿ 29 ಇನಿಂಗ್ಸ್‌ ಆಡಿದ್ದ ಕೊಹ್ಲಿ ಒಟ್ಟು 1,614 ರನ್‌ ಕಲೆ ಹಾಕಿದ್ದರು. ಟಿ20 ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಬಾರಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ರಿಜ್ವಾನ್‌ ಹೆಸರಿನಲ್ಲಿದೆ. ಅವರು ಕ್ರಮವಾಗಿ 2021 ಮತ್ತು 2022ರಲ್ಲಿ ಸತತವಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ರನ್‌ ಬಾರಿದ ಟಾಪ್‌-5 ಬ್ಯಾಟರ್‌ಗಳು

ಆಟಗಾರವರ್ಷಪಂದ್ಯರನ್‌
ನಿಕೋಲಸ್‌ ಪೂರನ್‌2024662,059
ಮೊಹಮ್ಮದ್‌ ರಿಜ್ವಾನ್‌2021482,036
ಅಲೆಕ್ಸ್‌ ಹೇಲ್ಸ್‌2022611,946
ಜಾಸ್‌ ಬಟ್ಲರ್‌2023561,833
ಮೊಹಮ್ಮದ್‌ ರಿಜ್ವಾನ್‌2022441,817