-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸಾಲಿನ ನವರಾತ್ರಿಯ ಒಂಭತ್ತು ದಿನದ ಕಲರ್ ಕೋಡ್ (Navaratri Colours List 2024) ಅಂದರೆ ಯಾವ ದಿನ ಯಾವ ಕಲರ್‌ನ ಡ್ರೆಸ್‌ಕೋಡ್ ಧರಿಸಬೇಕೆಂಬುದರ ಕುರಿತಂತೆ ಈಗಾಗಲೇ ಸಾಕಷ್ಟು ಕಲರ್ ವಿವರ ಇರುವಂತಹ ಲಿಸ್ಟ್‌ಗಳು ಬಿಡುಗಡೆಯಾಗಿವೆ. ದಸರಾ ಹಬ್ಬದ (Dasara) ಈ ಸೀಸನ್‌ನಲ್ಲಿ ಆಯಾ ದಿನಕ್ಕೆ ತಕ್ಕಂತೆ, ಯಾವ ಕಲರ್ ಹಾಗೂ ಯಾಕೆ ಧರಿಸಬೇಕು? ಏನನ್ನು ಧರಿಸಬಹುದು? ಎಂಬುದರ ಬಗ್ಗೆ ಎಕ್ಸ್‌ಪರ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಅಕ್ಟೋಬರ್ 3ರಂದು ಹಳದಿ ವರ್ಣದಲ್ಲಿ ಕಾಣಿಸಿಕೊಳ್ಳಿ
ಅಕ್ಟೋಬರ್ 3 ರಂದು ಕೂಷ್ಮಾಂಡಾ ದೇವಿಯ ದಿನ. ಖುಷಿಯನ್ನು ಪ್ರತಿನಿಧಿಸುವ ಹಳದಿ ವರ್ಣ, ಇದೀಗ ನಾನಾ ಶೇಡ್‌ಗಳಲ್ಲಿ ಬಿಡುಗಡೆಗೊಂಡಿದೆ. ನಿಮಗಿಷ್ಟವಾಗುವಂತಹ ಕಲರ್‌ನಲ್ಲಿ ಎಥ್ನಿಕ್‌ವೇರ್ ಇಲ್ಲವೇ ಸೀರೆ ಆಯ್ಕೆ ಮಾಡಿ, ಧರಿಸಿ, ಅಲಂಕರಿಸಿಕೊಳ್ಳಿ.
ಅಕ್ಟೋಬರ್ 4ರಂದು ಹಸಿರು ಪ್ರೇಮ ತೋರ್ಪಡಿಸಿ
ಅಕ್ಟೋಬರ್ 4 ರಂದು ಪ್ರಕೃತಿಯನ್ನು ಪ್ರತಿನಿಧಿಸುವ ಸ್ಕಂದಾಮಾತೆಯ ವಿಶೇಷ ದಿನವಿದು. ಈ ದಿನ ಹಸಿರಿನ ನಾನಾ ಶೇಡ್ಸ್ ಹೊಂದಿದ ಚೂಡಿದಾರ್, ಸಲ್ವಾರ್ ಇಲ್ಲವೇ ರೇಷ್ಮೆ ಸೀರೆ ಉಟ್ಟು ಸಿಂಗರಿಸಿಕೊಳ್ಳಿ.
ಅಕ್ಟೋಬರ್ 5ರಂದು ಬೂದು ಬಣ್ಣದಲ್ಲಿ ಅಲಂಕೃತಗೊಳ್ಳಿ
ಅಕ್ಟೋಬರ್ 5ರಂದು ದುಷ್ಟರನ್ನು ಬಗ್ಗುಬಡಿಯುವ ದೇವಿ ಕ್ಯಾತ್ಯಾಯನಿಯ ದಿನ. ಈ ದಿನ ಬೂದು ಬಣ್ಣದ ಎಥ್ನಿಕ್‌ವೇರ್‌ಗೆ ಸೈ ಎನ್ನಿ. ಇಲ್ಲವೇ ಸಾದಾ ಬಾರ್ಡರ್ ಅಥವಾ ಗ್ರ್ಯಾಂಡ್ ಬೂದು ವರ್ಣದ ಸೀರೆ ಧರಿಸಿ.
ಈ ಸುದ್ದಿಯನ್ನೂ ಓದಿ | Madhyantara Short Movie: ಮನಕ್ಕೆ ಮುದನೀಡುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಿರುಚಿತ್ರ ‘ಮಧ್ಯಂತರ’
ಅಕ್ಟೋಬರ್ 6ರಂದು ಆಕರ್ಷಕ ಆರೆಂಜ್ ವರ್ಣ
ಅಕ್ಟೋಬರ್ 6 ರ ಕಾಳರಾತ್ರಿಯ ದಿನದಂದು ಬೆಳಕು ಹಾಗೂ ಜ್ಞಾನದ ಪ್ರತೀಕವಾದ ಆರೆಂಜ್ ವರ್ಣಕ್ಕೆ ಮಾನ್ಯತೆ ನೀಡಿ. ಈ ಬಣ್ಣದ ಟ್ರೆಡಿಷನಲ್‌ವೇರ್ಸ್ ಅಥವಾ ಸೀರೆ ಉಟ್ಟು ನಲಿಯಬಹುದು.
ಅಕ್ಟೋಬರ್ 7ರಂದು ಬಿಳಿ ಬಣ್ಣ
ಅಕ್ಟೋಬರ್ 7ರಂದು ದೇವಿ ಶೈಲಪುತ್ರಿಯನ್ನು ಆರಾಧಿಸುವವರು ಶ್ವೇತ ವರ್ಣದ ಉಡುಪನ್ನು ಅಥವಾ ಸೀರೆಯನ್ನು ಧರಿಸಬಹುದು. ಈ ಸೀಸನ್‌ನಲ್ಲಿ ಅಂದ ಹಾಗೆ, ಬಿಳಿ ಬಣ್ಣ ಶಾಂತಿ ಹಾಗೂ ಪರಿಶುದ್ಧತೆಯ ದ್ಯೋತಕ.
ಅಕ್ಟೋಬರ್ 8ರಂದು ಕೆಂಪು ಸೀರೆ
ಅಕ್ಟೋಬರ್ 8 ರಂದು ಬ್ರಹ್ಮಚಾರಿಣಿ ದೇವಿಗೆ ಒಪ್ಪುವ ಕೆಂಪು ಕಲರ್‌ಗೆ ಮಾನ್ಯತೆ. ಈ ದಿನ ಕೆಂಪು ಬಣ್ಣದ ರೇಷ್ಮೆ ಸೀರೆ ಇಲ್ಲವೇ ಬಾರ್ಡರ್‌ನ ಗ್ರ್ಯಾಂಡ್ ಎಥ್ನಿಕ್ ಡಿಸೈನರ್‌ವೇರ್ ಧರಿಸಿ, ಸಂಭ್ರಮಿಸಬಹುದು.
ಅಕ್ಟೊಬರ್ 9ರಂದು ರಾಯಲ್ ನೀಲಿ
ಅಕ್ಟೋಬರ್ 9 ರಂದು ದೇವಿ ಚಂದ್ರಕಾಂತೆಯ ವಿಶೇಷ ದಿನ. ಡಿವೈನ್ ಎನರ್ಜಿ ಪ್ರತಿನಿಧಿಸುವ ರಾಯಲ್ ಬ್ಲ್ಯೂ ವರ್ಣದ ರೇಷ್ಮೆ ಅಥವಾ ಯಾವುದೇ ಬಗೆಯ ಸೀರೆ, ಲೆಹೆಂಗಾದಂತಹ ಎಥ್ನಿಕ್‌ವೇರ್ ಧರಿಸಿ, ಪೂಜಿಸಬಹುದು.
ಅಕ್ಟೋಬರ್ 10ರಂದು ಗುಲಾಬಿ ಶೇಡ್
ಅಕ್ಟೋಬರ್ 10 ರಂದು ಸಿದ್ದಿಧಾತ್ರಿಯ ದಿನ. ಉಲ್ಲಾಸ ಮೂಡಿಸುವ ಗುಲಾಬಿ ಬಣ್ಣದ ಉಡುಪು ಅಥವಾ ಸೀರೆಗೆ ಆದ್ಯತೆ. ಹಾಗಾಗಿ ತಿಳಿ ಗುಲಾಬಿ ಬಣ್ಣದಿಂದಿಡಿದು ರಾಣಿ ಪಿಂಕ್ ಶೇಡ್‌ನಲ್ಲೂ ಸಾಕಷ್ಟು ಡಿಸೈನರ್‌ವೇರ್ಸ್ ಬಂದಿವೆ. ಇವನ್ನು ಧರಿಸಿ, ನವರಾತ್ರಿ ಆಚರಿಸಬಹುದು.
ಈ ಸುದ್ದಿಯನ್ನೂ ಓದಿ | Bigg Boss Kannada 11: ಬಿಗ್‌ಬಾಸ್‌ನಲ್ಲಿ ಫ್ಯಾಷನ್ ಪ್ರಿಯರ ಮನಗೆದ್ದಿದೆ ಸುದೀಪ್ ಸೂಟ್! ಇದರ ದರ ಎಷ್ಟು?
ಅಕ್ಟೋಬರ್ 11 ರಂದು ನೇರಳೆ
ಅಕ್ಟೋಬರ್ 11ರಂದು ಮಹಾಗೌರಿಯ ದಿನದ ಹಿನ್ನೆಲೆಯಿರುವುದರಿಂದ ನೇರಳೆ ಬಣ್ಣದ ಡಿಸೈನರ್‌ವೇರ್ ಹಾಗೂ ಸೀರೆ ಉಟ್ಟು ದೇವಿಯಂತೆ ಅಲಂಕರಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)