Friday, 25th October 2024

Pooja Bhatt : ಮೆಟ್ರೊದಲ್ಲಿ ಜೈಶ್ರೀರಾಮ್ ಘೋಷಣೆ; ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲ ನಿಷಿದ್ಧ ಎಂದ ನಟಿ ಪೂಜಾ ಭಟ್‌!

Pooja Bhatt

ಮುಂಬೈ: ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ಜನರ ಗುಂಪೊಂದು ಮುಂಬೈ ಮೆಟ್ರೋದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಮತ್ತು ”ಗರ್ಬಾ ಹಾಡುಗಳನ್ನು’ ಹಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟಿ ಪೂಜಾ ಭಟ್ (Pooja Bhatt ) ಅಸಮಾಧಾನ ವ್ಯಕ್ತಪಡಿಸಿದ್ದು ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದು ಸಾರ್ವಜನಿಕ ಸ್ಥಳದ ದುರುಪಯೋಗ ಎಂದು ಕರೆದಿದ್ದು. ಇಂಥದ್ದನ್ನು ಅನುಮತಿಸಬಾರದು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತಗೊಂಡಿದ್ದು ಅನೇಕರು ಅವರನ್ನು ಟ್ರೋಲ್ ಮಾಡಿದ್ದಾರೆ. ಗುಂಪು ಮೆಟ್ರೋ ಬೋಗಿಯನ್ನು ಮುಂಚಿತವಾಗಿ ಕಾಯ್ದಿರಿಸಿದೆ ಮತ್ತು ಬೇರೆ ಯಾರಿಗೂ ತೊಂದರೆ ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ವೀಡಿಯೊವನ್ನು ಪೋಸ್ಟ್ ಮಾಡಿರುವ ಕುನಾಲ್ ಪುರೋಹಿತ್ ಎಂಬುವರು “ಹಿಂದುತ್ವ ಪಾಪ್ ಸಂಗೀತವನ್ನು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಮತ್ತು ನಗರದಾದ್ಯಂತ ವಿವಿಧ ವರ್ಗಗಳಲ್ಲಿ ಸುಲಭವಾಗಿ ಆಕರ್ಷಿಸುವ ಸುಲಭ ಮಾರ್ಗವಾಗಿದೆ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಪೂಜಹಾ ಅವರು “ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗುತ್ತದೆ? ಅದು ಹಿಂದುತ್ವ ಪಾಪ್, ಕ್ರಿಸ್ಮಸ್ ಕ್ಯಾರಲ್‌ಗು ಬಾಲಿವುಡ್ ಬ್ಲಾಕ್‌ಬಸ್ಟರ್ ಅಥವಾ ಇನ್ನಾವುದೇ ಆಗಿರಲಿ ಪರವಾಗಿಲ್ಲ. ಸಾರ್ವಜನಿಕ ಸ್ಥಳಗಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ಇದನ್ನು ಹೇಗೆ ಮತ್ತು ಏಕೆ ಅನುಮತಿಸುತ್ತಿದ್ದಾರೆ?” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Unrest in Bahraich: ದೇವಿ ವಿಗ್ರಹದ ಮೆರವಣಿಗೆ ವೇಳೆ ಕೋಮು ಸಂಘರ್ಷ; ಯುವಕ ಬಲಿ

ನಾವು ನಿಯಮಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ನಿಜವಾದ ಅರ್ಥದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದರಲ್ಲಿ ಅನುಮಾನ ಇಲ್ಲ. ನಗರವನ್ನು ಅಪವಿತ್ರಗೊಳಿಸುವ ಎಲ್ಲಾ ರಾಜಕೀಯ ಪಕ್ಷಗಳ ಅಕ್ರಮ ಹೋರ್ಡಿಂಗ್‌ಗಳು ಮೆಟ್ರೋವನ್ನು ಪಾರ್ಟಿ ಪ್ರದೇಶವಾಗಿ ಪರಿವರ್ತಿಸಿದೆ. ಬೀದಿಯ ಮಧ್ಯದಲ್ಲಿ ಪಟಾಕಿಗಳನ್ನು ಸುಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಮಹೇಶ್ ಭಟ್ ಪುತ್ರಿ ಪೂಜಾ ಭಟ್ ಬಿಗ್ ಬಾಸ್ ಒಟಿಟಿ 2 ರ ಭಾಗವಾಗುವ ಮೂಲಕ ರಿಯಾಲಿಟಿ ಟಿವಿ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ತನ್ನ ಒಟಿಟಿ ವೃತ್ತಿಜೀವನವನ್ನು ಮುಂದಕ್ಕೆ ತೆಗೆದುಕೊಂಡು, ಅವರು ಈಗ ಅಮೆಜಾನ್ ಪ್ರೈಮ್ ನ ‘ಬಿಗ್ ಗರ್ಲ್ಸ್ ಡೋಂಟ್ ಕ್ರೈ’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಅವರು ಶಾಲಾ ಪ್ರಾಂಶುಪಾಲರ ಪಾತ್ರ ನಿರ್ವಹಿಸಲಿದ್ದಾರೆ. ಪೂಜಾ ಅವರಲ್ಲದೆ, ಅವಂತಿಕಾ ವಂದನಾಪು, ಅನೀತ್ ಪಡ್ಡಾ, ದಲೈ, ವಿದುಷಿ, ಲಕ್ಕಿಲಾ, ಅಫ್ರಾ ಸಯೀದ್, ಅಕ್ಷಿತಾ ಸೂದ್, ರೈಮಾ ಸೇನ್ ಮತ್ತು ಜೋಯಾ ಹುಸೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.