Monday, 25th November 2024

Israel Attack: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ಇಸ್ರೇಲಿ ಮಿಲಿಟರಿ ಅಟ್ಟಾಡಿಸಿ ಕೊಂದಿರುವ ಶೈಲಿಯ ರೋಚಕ?

Israel Attack

ಜೆರುಸಲೇಮ್: ಸುಮಾರು ಒಂದು ವರ್ಷದ ಯೋಜನೆಯ ಬಳಿಕ ಹಮಾಸ್ ಮುಖ್ಯಸ್ಥ (Hamas Chief) ಯಾಹ್ಯಾ ಸಿನ್ವಾರ್‌ನನ್ನು (Yahya Sinwar) ಇಸ್ರೇಲ್ ಸೇನೆ (Israeli Military) ಅಕ್ಟೋಬರ್ 16ರಂದು ಹತ್ಯೆ ಮಾಡಿದೆ (Israel Attack) ಹಾಕಿದೆ. ಗಾಜಾ ಯುದ್ಧ (Gaza war) ಆರಂಭವಾದ ಬಳಿಕ ಇಸ್ರೇಲ್ ಸೇನೆ ನಿರಂತರವಾಗಿ 61 ವರ್ಷದ ಯಾಹ್ಯಾ ಸಿನ್ವಾರ್ ಮೇಲೆ ಕಣ್ಣಿಟ್ಟಿತ್ತು.

ದಕ್ಷಿಣ ಗಾಜಾದಲ್ಲಿ ಪತ್ತೆಯಾಗಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಇಸ್ರೇಲ್ ಸೇನೆ ಕಣ್ತಪ್ಪಿಸಿಕೊಂಡು ಮನೆಯಿಂದ ಮನೆಗೆ ಹೋಗುತ್ತಿರುವುದನ್ನು ಪತ್ತೆ ಹಚ್ಚಿ ದಾಳಿ ನಡೆಸಿ ಕೊಂದು ಹಾಕಿರುವುದಾಗಿ ಇಸ್ರೇಲ್ ಸೇನೆ ಗುರುವಾರ ಹೇಳಿದೆ. 2023ರ ಅಕ್ಟೋಬರ್ 7ರಂದು ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಹಮಾಸ್‌ಗೆ ನೀಡಿದ ಪ್ರಮುಖ ಹೊಡೆತಗಳಲ್ಲಿ ಇದು ಒಂದು ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಸರಿಸುಮಾರು ಒಂದು ವರ್ಷದ ಕಾರ್ಯಾಚರಣೆ ಬಳಿಕ ಅಕ್ಟೋಬರ್ 16ರಂದು ದಕ್ಷಿಣ ಕಮಾಂಡ್‌ನ ಐಡಿಎಫ್ ಮಿಲಿಟರಿ ಸೈನಿಕರು ದಕ್ಷಿಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಕೊಂದು ಹಾಕಿರುವುದನ್ನು ದೃಢಪಡಿಸಿದೆ.

ಕಳೆದ ವರ್ಷದಲ್ಲಿ ಐಡಿಎಫ್ ಮತ್ತು ಐಎಸ್‌ (ಶಿನ್ ಬೆಟ್ ಆಂತರಿಕ ಭದ್ರತಾ ಸಂಸ್ಥೆ) ಹಲವು ಕಾರ್ಯಾಚರಣೆಗಳನ್ನು ನಡೆಸಿ ಯಾಹ್ಯಾ ಸಿನ್ವಾರ್‌ನ ಚಲನವಲನಕ್ಕೆ ನಿರ್ಬಂಧ ವಿಧಿಸಿತ್ತು. ಇದು ಆತನ ಹತ್ಯೆಗೆ ಕಾರಣವಾಯಿತು ಎಂದು ಇಸ್ರೇಲ್ ಸೇನೆ ತಿಳಿಸಿದೆ. ಯಾಹ್ಯಾ ಸಿನ್ವಾರ್‌ನನ್ನು ಹೊಡೆದು ಉರುಳಿಸಿದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 828ನೇ ಬ್ರಿಗೇಡ್ (ಬಿಸ್ಲಾಚ್) ನ ಐಡಿಎಫ್ ಸೈನಿಕರು ಮೂವರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಮೃತರ ದೇಹವನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ ಯಾಹ್ಯಾ ಸಿನ್ವಾರ್‌ನ ಹತ್ಯೆಯನ್ನು ಖಚಿತಪಡಿಸಲಾಗಿದೆ.

ಸೇನಾ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ರಫಾ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದು ಕೊಂದ ಬಳಿಕ ಸಿನ್ವಾರ್ ನನ್ನು ಕೊಲ್ಲಲಾಯಿತು ಎಂದು ಹೇಳಿದರು. ಮನೆಯಿಂದ ಮನೆಗೆ ಓಡಿ ಹೋಗುತ್ತಿದ್ದ ಮೂವರು ಭಯೋತ್ಪಾದಕರನ್ನು ಇಸ್ರೇಲ್ ಸೇನೆ ಗುರುತಿಸಿತ್ತು ಎಂದು ಹಗರಿ ತಿಳಿಸಿದ್ದಾರೆ.

ಇಸ್ರೇಲ್ ಸೇನೆ ಗುಂಪಾಗಿ ದಾಳಿ ನಡೆಸಿತ್ತು. ಸೇನೆ ಸ್ಥಳದಿಂದ ಚದುರಿದಾಗ ಸಿನ್ವಾರ್‌ ಒಬ್ಬನೇ ಕಟ್ಟಡವೊಂದಕ್ಕೆ ಓಡಿ ಹೋಗುವುದನ್ನು ಇಸ್ರೇಲ್ ಸೇನೆಯ ಡ್ರೋನ್ ಮೂಲಕ ಪತ್ತೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವನು ಡ್ರೋನ್ ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.

Israel Attack

ಬಳಿಕ ಕಟ್ಟಡದೊಳಗೆ ಆತನನ್ನು ಗುರುತಿಸಿದ ಇಸ್ರೇಲ್ ಸೇನೆ ಆತನ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿತ್ತು. ಆತನ ಬಳಿ ಬಂದೂಕು ಮತ್ತು 40 ಸಾವಿರ ಶೆಕೆಲ್ ನಗದು ಪತ್ತೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಸಿನ್ವಾರ್‌ ಮೇಲೆ ದಾಳಿ ನಡೆಸಿದ ಸ್ಥಳದಲ್ಲಿ ಯಾವುದೇ ಒತ್ತೆಯಾಳುಗಳಿರಲಿಲ್ಲ. ಅಕ್ಟೋಬರ್ 7ರಂದು ಹಮಾಸ್ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್ ಜೊತೆಗೆ ದಾಳಿಯ ಮಾಸ್ಟರ್ ಮೈಂಡ್ ಸಿನ್ವಾರ್ ಕೂಡ ಸೇರಿದ್ದಾನೆ ಎಂದು ಇಸ್ರೇಲ್ ಆರೋಪಿಸಿದೆ. ಇದನ್ನು ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ದೃಢಪಡಿಸದಿದ್ದರೂ ಈ ವರ್ಷದ ಆರಂಭದಲ್ಲಿ ಡೀಫ್ ನನ್ನು ಕೊಲ್ಲಲಾಗಿತ್ತು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

Gurpatwant Singh Pannun: ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆಗೆ ಮಾಜಿ ʻರಾʼ ಅಧಿಕಾರಿ ಯತ್ನ; ಅಮೆರಿಕ ಆರೋಪ

ಜುಲೈ 31ರಂದು ಇರಾನ್‌ನಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಕೊಲ್ಲಲ್ಪಟ್ಟಿದ್ದರು. ಆದರೆ ಇಸ್ರೇಲ್ ಹನಿಯೆಹ್ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವರ್ಷ ಹಮಾಸ್ ದಾಳಿಯಿಂದ ಇಸ್ರೇಲ್ ನಲ್ಲಿ 1,206 ಜನ ಮೃತಪಟ್ಟಿದ್ದರು. ಗಾಜಾದಲ್ಲಿ ಇಸ್ರೇಲ್‌ ನಡೆಸಿದ ಮಿಲಿಟರಿ ಕಾರ್ಯಾಚರಣೆಯಿಂದ 42,438 ಮಂದಿಯನ್ನು ಕೊಲ್ಲಲಾಗಿದೆ. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ನ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.