ವಿಮಾನಗಳ ಪೈಲಟ್ಗಳು (Airplane pilot) ಸುಗಂಧ ದ್ರವ್ಯ (Perfume), ಮೌತ್ ವಾಶ್ (mouth wash), ಟೂತ್ ಜೆಲ್ಗಳನ್ನು (tooth gel) ಬಳಸುವಂತಿಲ್ಲ. 2023ರಿಂದ ಈ ನಿಯಮ ಜಾರಿಯಲ್ಲಿಲ್ಲಿರುವುದು ಯಾಕೆ (Breath Tests) ಎನ್ನುವುದು ಗೊತ್ತಿದೆಯೇ?
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 2023ರ ಅಕ್ಟೋಬರ್ನಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ವಿಮಾನ ಸಿಬ್ಬಂದಿಗೆ ಆಲ್ಕೋಹಾಲ್ ಪ್ರಮಾಣ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.
ಸುಗಂಧ ದ್ರವ್ಯ, ಮೌತ್ ವಾಶ್, ಟೂತ್ ಜೆಲ್ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಇರುವುದರಿಂದ ಅವರು ಪರೀಕ್ಷೆಯಲ್ಲಿ ವಿಫಲರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಡಿಜಿಸಿಎ ಮಾನದಂಡಗಳ ಅಡಿಯಲ್ಲಿ ಪ್ರತಿ ವಿಮಾನದ ಎಲ್ಲ ನಿರ್ವಾಹಕರಿಗೆ, ಸಿಬ್ಬಂದಿ ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರಿಗೆ ವಿಮಾನ ಕರ್ತವ್ಯದ ಅವಧಿಯಲ್ಲಿ ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಪ್ರೀ-ಫ್ಲೈಟ್ ಬ್ರೀತ್ ವಿಶ್ಲೇಷಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಮೌತ್ ವಾಶ್, ಟೂತ್ ಜೆಲ್, ಸುಗಂಧ ದ್ರವ್ಯಗಳು ಆಲ್ಕೋಹಾಲ್ಯುಕ್ತ ಅಂಶವನ್ನು ಒಳಗೊಂಡಿರುತ್ತವೆ. ಇದು ವೈದ್ಯಕೀಯ ಕಾರ್ಯವಿಧಾನಕ್ಕೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಇದನ್ನು ಬಳಸದೇ ಇರಲು ಪೈಲೆಟ್ ಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಭಾರತದಲ್ಲಿ ಹೊರಗಿನಿಂದ ಬರುವ ಮತ್ತು ಇಲ್ಲಿಂದ ತೆರಳುವ ಪ್ರತಿ ವಿಮಾನದ ಸಿಬ್ಬಂದಿಗೂ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಅದ್ದರಿಂದ ಯಾವುದೇ ವಿಮಾನ ಸಿಬ್ಬಂದಿ ಯಾವುದೇ ಔಷಧ, ಮೌತ್ವಾಶ್, ಟೂತ್ ಜೆಲ್, ಸುಗಂಧ ದ್ರವ್ಯ ಅಥವಾ ಆಲ್ಕೊಹಾಲ್ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಇವನ್ನು ಬಳಸುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.