ಓಮನ್: ಎಮರ್ಜಿಂಗ್ ಏಷ್ಯಾಕಪ್(Emerging Asia Cup) ಟೂರ್ನಿಯಲ್ಲಿ ಭಾರತ(India A vs Pakistan A) ತಂಡ ಬುದ್ಧ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಗೆಲುವಿನ ಶುಭಾರಂಭ ಮಾಡಿದೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಭಾರತ 7 ರನ್ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರಮಣ್ದೀಪ್ ಸಿಂಗ್(Ramandeep Singh) ಹಿಡಿದ ಅದ್ಭುತ ಡೈವಿಂಗ್ ಕ್ಯಾಚ್‌ನ(Ramandeep Catch) ವಿಡಿಯೊ ವೈರಲ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಎ ತಂಡ ನಾಯಕ ತಿಲಕ್ ವರ್ಮ (44 ರನ್, 35 ಎಸೆತ, 2 ಬೌಂಡರಿ, 2 ಸಿಕ್ಸರ್) ಬಿರುಸಿನಾಟ ಮತ್ತು ಅಂಶುಲ್ ಕಂಬೋಜ್ (33ಕ್ಕೆ 3) ಬಿಗಿ ದಾಳಿ ನೆರವಿನಿಂದ
8 ವಿಕೆಟ್ಗೆ 183 ರನ್ ಕಲೆಹಾಕಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 7 ವಿಕೆಟ್ಗೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ IND vs NZ: ಸೋಲಿನ ಭೀತಿಯಲ್ಲಿ ಭಾರತ
ಯಾಸಿರ್ ಖಾನ್ ಹೊಡೆದ ಚೆಂಡು ಬೌಂಡರಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಚಿರತೆ ವೇಗದಲ್ಲಿ ಓಡಿ ಬಂದು ಡೈವ್ ಹಾರಿ ರಮಣದೀಪ್ ಸಿಂಗ್ ಸೂಪರ್ ಮ್ಯಾನ್ ರೀತಿಯಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು. ಈ ಕ್ಯಾಚ್ ಹಿಡಿಯದೇ ಹೋಗಿದ್ದರೆ, ಭಾರತ ಸೋಲುವ ಸಾಧ್ಯತೆಯೂ ಇತ್ತು. ಯಾಸಿರ್ ಖಾನ್ ಮೂರು ಸಿಕ್ಸರ್ ನೆರವಿನಿಂದ 33 ರನ್ ಬಾರಿಸಿದ್ದರು. ಈ ಕ್ಯಾಚ್‌ನ ವಿಡಿಯೊವನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ʼರಮಣದೀಪ್ ಸಿಂಗ್ ಅವರ ಅದ್ಭುತ ಕ್ಯಾಚ್ ಅಪಾಯಕಾರಿ ಯಾಸಿರ್ ಖಾನ್ ಅವರನ್ನು ಹೊರಹಾಕಿತು!ʼ ಎಂದು ಬರೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಭಾರತ ಎ: 8 ವಿಕೆಟ್ಗೆ 183 (ಅಭಿಷೇಕ್ 36, ಪ್ರಭ್ಸಿಮ್ರನ್ 36, ತಿಲಕ್ 44, ನೇಹಾಲ್ 25, ಬಡೋನಿ 2, ರಮಣ್ದೀಪ್ 17, ನಿಶಾಂತ್ 6, ಸುಫಿಯಾನ್ 28ಕ್ಕೆ 2). ಪಾಕಿಸ್ತಾನ ಎ: 7 ವಿಕೆಟ್ಗೆ 176 (ಯಾಸಿರ್ ಖಾನ್ 33, ಮಿನ್ಹಾಸ್ 41, ಸಮದ್ 25, ಕಂಬೋಜ್ 33ಕ್ಕೆ 3, ರಸಿಕ್ ಸಲಾಂ 30ಕ್ಕೆ 2, ನಿಶಾಂತ್ ಸಂಧು 15ಕ್ಕೆ 2).