Saturday, 23rd November 2024

Dr K Sudhakar: ಶಾಸಕರನ್ನು ಆರಿಸಿದ ಜನತೆ ಇವರ ಭ್ರಷ್ಟಾಚಾರವನ್ನು ಸ್ವಲ್ಪ ಸವಿಯಲಿ : ಡಾ.ಕೆ.ಸುಧಾಕರ್

ಅರ್ಧರಾತ್ರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ: ಕುರಿ ಬಲಿಯಲು ಬಿಟ್ಟಿದ್ದೇನೆ ಎಂದು ವಾಗ್ದಾಳಿ

ಚಿಕ್ಕಬಳ್ಳಾಪುರ : ಹಿಂದಿನ ಸರಕಾರದಲ್ಲಿ ನನ್ನ ಮೇಲೆ ಇಲ್ಲದ ಆಪಾದನೆಗಳನ್ನು ಮಾಡಿದ್ದರು. ನಾನು ಈಗಲೂ ಕೂಡ ಚಾಲೆಂಜ್ ಮಾಡುತ್ತೇನೆ.ಯಾರಾದರೂ ನನಗೆ ಹಣಕೊಟ್ಟಿದ್ದರೆ ಹೇಳಲಿ ಎಂದು ಸವಾಲೆಸೆದರು.

ನಗರ ಹೊರವಲಯ ಸಂದದರ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಿಜವಾದ ಭ್ರಷಾಚಾರ ಈಗ ಪ್ರಾರಂಭವಾಗಿದೆ.ಪ್ರತಿಯೊAದು ಕಛೇರಿಯಲ್ಲಿ ದಲ್ಲಾಳಿಗಳ ಬದಲಿಗೆ ತಮ್ಮ ಸ್ವಂತ ಸಂಬ0ಧಿ ಗಳನ್ನು ಬಿಟ್ಟು ವ್ಯವಹಾರ ಮಾಡುತ್ತಿದ್ದಾರೆ.ಈ ವ್ಯವಹಾರವೆಲ್ಲಾ ಕಾರುಗಳಲ್ಲಿ ಕುಳಿತೋ, ಐಷಾರಾಮಿ ಹೋಟೆ ಗಳಲ್ಲಿ ಕುಳಿತು ಮಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಮಿಸ್ಸಿಂಗ್ ಪೈಲ್ಸ್

ಶಾಸಕ ಪ್ರದೀಪ್ ಈಶ್ವರ್ ತಮ್ಮ ೧೮ ತಿಂಗಳ ಅವಧಿಯಲ್ಲಿ  ಯಾವ ಜಮೀನು ಪತ್ರಗಳು ಇರಬೇಕು, ಇರಬಾರದು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ.ಈ ಅವಧಿಯಲ್ಲಿ ಎಷ್ಟು ಮಿಸ್ಸಿಂಗ್ ಫೈಲ್ಸ್ ಆಗಿವೆ ಎಂದು ಮಾಧ್ಯಮದವರೇ ಹೋಗಿ ನೋಡಿ. ಎಲ್ಲಾ ಮಿಸ್ಸಿಂಗ್ ಆಗಿವೆ. ಅವರಿಗೆ ಬೇಕಾದ ದಾಖಲೆಗಳು ಮಾತ್ರ ಸಿಗುತ್ತವೆ, ಬೇರೆಯವು ಸಿಗುವುದಿಲ್ಲ ಎಂದು ದೂರಿದರು.

ದೌರ್ಭಾಗ್ಯ ಸರಕಾರ

ಜನರಿಗೆ ಸೌಭಾಗ್ಯ ತರುತ್ತೇವೆಂದು ಬಂದ ಸರಕಾರ ದೌರ್ಭಾಗ್ಯವನ್ನು ತಂದಿದ್ದಾರೆ. ಅವರು ಉತ್ತರ ಕೊಡುವ ಸಮಯ ಬರುತ್ತೆ ಅವರು ಉತ್ತರ ಕೊಡುತ್ತಾರೆ.೧೮ ತಿಂಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ.ರಾಜಕೀಯ ವೈಷಮ್ಯ ಹೆಚ್ಚಾಗಿ, ದುರುದ್ದೇಶದಿಂದ ಜನರಿಗೆ ತೊಂದರೆ ಕೊಡುತ್ತಿದ್ದಾರೆ.ಸ್ವಂತ ಲಾಭಕ್ಕಾಗಿ ಇವರು ಅಧಿಕಾರಕ್ಕೆ ಬಂದಿದ್ದಾರೆ ವಿನಃ ಜನಸೇವೆಗಲ್ಲ ಎಂದು ತಿವಿದರು.

ಶಾಸಕರು ಸ್ವಂತ ಬಳಗದ ಮೂಲಕ ಕ್ಷೇತ್ರದ ಕಚೇರಿಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ಏನು ವಹಿವಾಟು ಆಗುತ್ತದೆ ಎಂದು ನೋಡುತ್ತಿದೆ. ಸಾಯಂಕಾಲ ಅವರ ಕಲೆಕ್ಷನ್ ಏನು ಎಂದು ಗಮನಿಸುತ್ತಿದ್ದಾರೆ. ಪರಿಣಾಮ ಅವರ ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ. ಅಷ್ಟರ ಮಟ್ಟಿಗೆ ಅವರೆಲ್ಲಾ ಸಫಲರಾಗಿದ್ದಾರೆ. ಒಳ್ಳೆ ಆದಾಯ ಜನರೇಟ್ ಮಾಡಿ ಕೊಳ್ಳುತ್ತಿದ್ದಾರೆ. ಅಷ್ಟಕ್ಕೇ ಮಾತ್ರ ಅವರು ಅಧಿಕಾರಕ್ಕೆ ಬಂದಿರೋದು. ಅದು ಈಗ ಜನರಿಗೆ ಅರ್ಥ ಆಗಿದೆ.ಜನರು ಏನೂ ಮೂರ್ಖರಲ್ಲ. ಅವರೂ ಕೂಡ ಎಲ್ಲಾ ಇಲಾಖೆಗಳಲ್ಲಿ ನೋಡುತ್ತಿದ್ದಾರೆ ಎಂದು ಕಾಲೆಳೆದರು.

ಹಿಂದೆ ನನ್ನ ಅವಧಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಯಾರೂ ಕೂಡ ಒಂದು ನಯಾಪೈಸೆ ಕೊಡುವಂತಿರಲಿಲ್ಲ. ಇವತ್ತು ಹಾಗೆ ಆಗುತ್ತಾ? ಒಂದೊ0ದು ಸ್ಟೇಷನ್ ಹತ್ತಿರ ಎಷ್ಟು ಜನ ಇರುತ್ತಾರೆ ನೋಡಿ ? ಹಿಂದೆ ಯಾಕೆ ಹೀಗೆ ಇರಲಿಲ್ಲ. ಯಾರೇ ಆಗಲಿ ಆಡಳಿತದ ಮೇಲೆ ಬಿಗಿ ಇರಬೇಕು. ಆಡಳಿತ ಹೇಗೆ ಮಾಡಬೇಕು ಎಂಬ ಬಗ್ಗೆ ಇವರಿಗೆ ಐಡಿಯಾನೇ ಇಲ್ಲ? ಏನೋ ಅರ್ಧರಾತ್ರಿಯಲ್ಲಿ ಅಧಿಕಾರ ಬಂದಿದೆ. ಅದನ್ನು ಸ್ವಂತ ಬಳಕೆಗೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ. ಎಷ್ಟು ದಿನ ಮಾಡಿಕೊಳ್ಳುತ್ತಾರೋ ಮಾಡಲಿ. ನಾನು ಕಾಯುತ್ತಿದ್ದೇನೆ. ನಿದ್ದೆ ಮಾಡುತ್ತಿಲ್ಲ, ಕುರಿ ಚೆನ್ನಾಗಿ ಬಲಿಯಲಿ ಎಂದು ಬಿಟ್ಟಿದ್ದೇನೆ ಎಂದು ಕಿಡಿಕಾರಿದರು.

ಇದನ್ನೂ ಓದಿ: MP Dr K Sudhakar: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಸದ ಡಾ.ಕೆ.ಸುಧಾಕರ್ ಮನವಿ