Thursday, 21st November 2024

BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ಜೋಡಿ ಕ್ಯಾಪ್ಟನ್ ಆಗಿ ಆಯ್ಕೆಯಾದ ತ್ರಿವಿಕ್ರಮ್-ಐಶ್ವರ್ಯ

Trivikram and Aishwarya

ಈ ವಾರ ಬಿಗ್ ಬಾಸ್ (Bigg Boss Kannada 11) ಕ್ಯಾಪ್ಟನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನೆಂದರೆ ಇಬ್ಬರು ಕ್ಯಾಪ್ಟನ್ಸ್. ಹೌದು, ಇಬ್ಬರು ನಾಯಕರ ನೇತೃತ್ವದಲ್ಲಿ ಈ ವಾರ ಬಿಗ್ ಬಾಸ್ ಜರ್ನಿ ಸಾಗಲಿದೆ. ಇದಕ್ಕಾಗಿಯೇ ಬಿಗ್ ಬಾಸ್ ಒಂದು ಟಾಸ್ಕ್ ಕೂಡ ಕೊಟ್ಟಿದ್ದರು. ಈ ಟಾಸ್ಕ್‌ಗಾಗಿ ಇಬ್ಬಿಬ್ಬರು ಸ್ಪರ್ಧಿಗಳು ಆಡಿದ್ದಾರೆ. ಇಲ್ಲಿ ಗೆದ್ದ ಜೋಡಿ ಮನೆಯಲ್ಲಿ ಕ್ಯಾಪ್ಟನ್ ಆಗಿರುತ್ತಾರೆ. ಅದರಂತೆ ಇದರಲ್ಲಿ ಗೆದ್ದು ತ್ರಿವಿಕ್ರಮ್ ಮತ್ತು ಐಶ್ವರ್ಯ ಜೋಡಿ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ವಿಶೇಷ ಎಂದರೆ ಬಿಗ್​ಬಾಸ್​ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ವಾರ ದೊಡ್ಮನೆಯಲ್ಲಿ ಜೋಡಿ ಕ್ಯಾಪ್ಟನ್ ಆಯ್ಕೆ ಆಗಿದ್ದಾರೆ. ಕಳೆದ 10 ವರ್ಷದಲ್ಲಿ ಆಯಾ ವಾರ ಒಬ್ಬರೇ ಕ್ಯಾಪ್ಟನ್ ಆಗಿದ್ದಾರೆ. ಇಬ್ಬರು ಕ್ಯಾಪ್ಟನ್ ಅನ್ನುವ ಕಾನ್ಸೆಪ್ಟ್ ಇರಲೇ ಇಲ್ಲ. ಆದರೀಗ, ಬಿಗ್ ಬಾಸ್ ಸೀಸನ್-11ರಲ್ಲಿ ಸ್ವತಃ ಬಿಗ್ ಬಾಸ್ ಹೇಳಿದಂತೆ ಹೊಸ ಅಧ್ಯಾಯ ಶುರು ಮಾಡಿಕೊಂಡಿದ್ದಾರೆ.

ಟಾಸ್ಕ್ ಏನಿತ್ತು?:

ಒಂದು ಜೋಡಿ ಗಾರ್ಡನ್ ಏರಿಯಾದಲ್ಲಿ ಅಳವಡಿಸಲಾದ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ, 17 ನಿಮಿಷಗಳನ್ನು ಏಣಿಸಬೇಕು. ಜೋಡಿಗಳು 17 ನಿಮಿಷ ಮುಗಿದಿದೆ ಎಂದು ಭಾವಿಸಿದರೇ ಗಡಿಯಾರದಿಂದ ಕಳೆಗೆ ಇಳಿದು ಪಕ್ಕದಲ್ಲಿ ಇರುವ ಗಂಟೆ ಬಾರಿಸಿಬೇಕು. ಆದರೆ ಇದರ ಮಧ್ಯೆ ಪ್ರತಿ ಸ್ಪರ್ಧಿಗಳು ಅವರ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಸರಿಯಾಗಿ 17 ನಿಮಿಷ ಅಥವಾ ಇದರ ಆಸುಪಾಸಿನಲ್ಲಿ ಗಂಟೆ ಬಾರಿಸಿದ ಜೋಡಿ ಮನೆಯ ಕ್ಯಾಪ್ಟನ್ ಆಗುತ್ತಾರೆ.

ಅದರಂತೆ ಅಂತಿಮ ಟಾಪ್ ಮೂರರಲ್ಲಿ ಮೋಕ್ಷಿತಾ ಪೈ – ಗೌತಮಿ ಜಾಧವ್ (14 ನಿಮಿಷ 1 ಸೆಕೆಂಡ್), ಉಗ್ರಂ ಮಂಜು – ಅನುಷಾ ರೈ (13 ನಿಮಿಷ 9 ಸೆಕೆಂಡ್), ತ್ರಿವಿಕ್ರಮ್ – ಐಶ್ವರ್ಯಾ ಶಿಂಧೋಗಿ (19 ನಿಮಿಷ 42 ಸೆಕೆಂಡ್) ಈ ಮೂರು ಜೋಡಿಗಳು ಬಂದಿದ್ದರು. 17 ನಿಮಿಷ ಅಥವಾ ಇದರ ಆಸುಪಾಸಿನಲ್ಲಿ ಗಂಟೆ ಬಾರಿಸಿದ ಜೋಡಿ ತ್ರಿವಿಕ್ರಮ್-ಐಶ್ವರ್ಯಾ ಆಗಿದ್ದಾರೆ. ಹೀಗಾಗಿ ಇವರು ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಶತ್ರುಗಳಾದ ಮಿತ್ರರು: ಉಗ್ರಂ ಮಂಜು-ತ್ರಿವಿಕ್ರಮ್ ನಡುವೆ ದೊಡ್ಡ ಜಗಳ