Friday, 25th October 2024

Nomination: ನಾಗರಾಜಕುಮಾರ್ ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಸರಕಾರಿ ನೌಕರರ ಸಂಘದ ಚುನಾವಣೆಗೆ ಪಪೂ/ಪದವಿ ಕಾಲೇಜು ಕಡೆಯಿಂದ ನಿರ್ದೇಶಕರ ಸ್ಥಾನಕ್ಕೆ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗರಾಜಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ನಾಗರಾಜಕುಮಾರ್ ಅವರನ್ನು ಚುನಾವಣಾ ಅಖಾಡದಿಂದ ಹಿಂದೆ ಸರಿಸಲು ಪರ್ಯಾಯ ಪ್ರಯತ್ನಗಳು ನಡೆದಿದೆಯದರೂ ಚುನಾವಣೆ ಪ್ರಕ್ರಿಯೆಯನ್ನು ಅಭ್ಯರ್ಥಿ ನಾಗರಾಜಕುಮಾರ್ ಮುಂದುವರೆಸಿದ್ದಾರೆ. ಪ್ರತಿಬಾರಿ ಪದವಿ ಪೂರ್ವ ಕಾಲೇಜಿಗೆ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಪದವಿ ಕಾಲೇಜಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ನಡೆದಿವೆ. ಹಿಂದೆಲ್ಲಾ ಚುನಾವಣೆ ಗುಪ್ತವಾಗಿ ನಡೆಯುತ್ತಿತ್ತು. ಈ ಬಾರಿ ಪೈಪೋಟಿಯಿಂದಾಗಿ ಪ್ರಚಾರಗಳು ಹೆಚ್ಚಾಗಲಿದೆ. ಪದವಿ ಕಾಲೇಜಿನ ೨೬ ಸೇರಿ ಒಟ್ಟು ೬೫ ಮತದಾರರಿದ್ದಾರೆ.

ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಬೇಕೆಂಬುದು ಮತದಾರರ ಅಭಿಪ್ರಾಯ. ಅ. ೨೮ ರಂದು ಚುನಾವಣೆ ನಡೆಯಲಿದೆ.