Tuesday, 3rd December 2024

Self Harming : ಉದ್ಘಾಟನೆಯಾಗಲು ಕೆಲವೇ ದಿನ ಬಾಕಿ ಇದ್ದ ಕಟ್ಟದಲ್ಲಿ ವ್ಯಕ್ತಿ ಆತ್ಮಹತ್ಯೆ

Self Harming

ತುಮಕೂರು: ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಶುಭಾರಂಭ ಮಾಡಬೇಕಾಗಿದ್ದ ಹಂತದಲ್ಲಿದ್ದ ಕಟ್ಟಡದಲ್ಲಿಯೇ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ಪಾವಗಡ ಪಟ್ಟಣದ ತುಮಕೂರು ರಸ್ತೆಯ ಮೊರ್ ಕಾಂಪ್ಲೆಕ್ಸ್‌ನ ಮುಂದೆ ಈ ಘಟನೆ ಸಂಭವಿಸಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಹಾಕಲಾಗಿದ್ದ ಸರ್ವೆ ಮರಗಳಿಗೆ ತನ್ನ ಲುಂಗಿಯಿಂದಲೇ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದು ಸೋಮವಾರ ಬೆಳಗ್ಗೆ ವಿಷಯ ಗೊತ್ತಾಗಿದೆ.

ಈ ಘಟನೆ ಮುಖ್ಯ ರಸ್ತೆಯ ಬದಿಯಲ್ಲಿಯೇ ನಡೆದಿರುವ ಕಾರಣ ಆ ಭಾಗದ ಜನರು ಬೆಚ್ಚಿ ಬೀಳುವಂತಾಗಿದೆ. ವಿಷಯ ತಿಳಿದು ನೂರಾರು ಜನ ಸ್ಥಳೀಯರು ಘಟನೆ ನಡೆದ ಬಳಿ ಬಂದು ನೇಣು ಬಿಗಿದುಕೊಂಡಿರುವಂತ ವ್ಯಕ್ತಿಯ ಯಾರು ಎಂಬುದರ ಪತ್ತೆ ಕಾರ್ಯದಲ್ಲಿ ಮುಂದಾಗಿದ್ದಾರೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡರುವ ವ್ಯಕ್ತಿಯನ್ನು ಕೆಳಕ್ಕೆ ಇಳಿಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಪತ್ನಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಎದೆಗೆ ಇರಿದು ಕೊಂದ ಪತಿ

ಕೋಲಾರ: ಪದೇಪದೆ ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪತಿಯೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವುದು (Murder Case) ಕೋಲಾರ ಜಿಲ್ಲೆಯ ಜಮಾಲ್ ಷಾ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: Self Harming: ಗಂಡ ಕಪ್ಪೆಂದು ನೇಣಿಗೆ ಕೊರಳೊಡ್ಡಿದಳು ನವ ವಿವಾಹಿತೆ!

ರೋಹಿದ್ ಅಲಿಯಾಸ್ ಅರ್ಬಾಜ್ (25) ಕೊಲೆಯಾದ ಯುವಕ. ಅಮ್ಜದ್ ಕೊಲೆ ಆರೋಪಿ. ರೋಹಿದ್ ಕೆಲ ದಿನಗಳಿಂದ ಅಮ್ಜದ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ. ಇದೇ ವಿಚಾರವಾಗಿ ರೋಹಿದ್‌ಗೆ ಅಮ್ಜಾದ್ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ತನ್ನ ಹಳೇ ಚಾಳಿ ಮುಂದುವರಿಸಿದ್ದ ರೋಹಿದ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ರೋಹಿಸ್‌ನ ಎದೆಗೆ ಚಾಕುವಿನಿಂದ ಇರಿದು ಅಮ್ಜಾದ್ ಕೊಲೆ ಮಾಡಿದ್ದು ಆರೋಪಿಯನ್ನು ಕೋಲಾರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.