Wednesday, 30th October 2024

Love Jihad: ಮುಸ್ಲಿಂ ಯುವಕನ ಲವ್‌ ಜಿಹಾದ್‌ನಿಂದ ಮಗಳನ್ನು ಕಾಪಾಡಿ: ದೇವರಿಗೆ ಪತ್ರ ಬರೆದ ಹಿಂದೂ ಯುವತಿಯ ತಾಯಿ

love jihad

ಪುತ್ತೂರು: ʼಲವ್ ಜಿಹಾದ್ʼಗೆ (Love Jihad) ಸಂಬಂಧಿಸಿದಂತೆ ಅಸಹಾಯಕ ಪೋಷಕರೊಬ್ಬರು ದೇವರಿಗೆ ಪ್ರತ್ರ ಪರೆದಿರುವ ಘಟನೆ ದಕ್ಷಿಣ ಕನ್ನಡ (Dakshna Kannada news) ಜಿಲ್ಲೆಯ ಪುತ್ತೂರಿನಲ್ಲಿ (Putturu news) ವರದಿಯಾಗಿದೆ. ನೊಂದ ಪೋಷಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ (Shri Mahalingeshwara) ದೇವರ ಹುಂಡಿಯಲ್ಲಿ ಪತ್ರವೊಂದನ್ನು ಬರೆದು ಹಾಕಿದ್ದು, ಸಮೀರ್ ಎಂಬ ಮುಸ್ಲಿಂ ಯುವಕನಿಗೆ ಶಿಕ್ಷೆಯಾಗಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯುವತಿಯ ಹೆತ್ತ ತಂದೆ-ತಾಯಿ, ದೇವರ ಕಾಣಿಕೆ ಹುಂಡಿಗೆ ದೂರಿನ ಚೀಟಿ ಬರೆದು ಹಾಕಿದ್ದು, ಕಾಣಿಕೆ ಹುಂಡಿಯ ಲೆಕ್ಕ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಚೀಟಿ ಪತ್ತೆಯಾಗಿದೆ. ಅದರಲ್ಲಿ, “ಸಮೀರ್ ಎಂಬಾತನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ನಮ್ಮ ಜೀವನ‌ ಹಾಳು ಮಾಡಿದ ಸಮೀರ್‌ನ ಜೀವನ ಕೂಡ ಹಾಳಾಗಬೇಕು. ಸಮೀರ್‌ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೇ ಇದು ನನ್ನ ಪ್ರಾರ್ಥನೆ” ಎಂದು ನೊಂದ ತಾಯಿಯೊಬ್ಬರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಮೊರೆಯಿಟ್ಟಿದ್ದಾರೆ.

ಕೇರಳ ಹಾಗೂ ದಕ್ಷಿಣ ಕನ್ನಡದಲ್ಲಿ ವ್ಯಾಕವಾಗಿ “ಲವ್ ಜಿಹಾದ್” ಎಂಬುದು ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೆಲವು ಘಟನೆಗಳೂ ವರದಿಯಾಗಿವೆ. ಇತ್ತೀಚೆಗೆ ಹಿಂದೂ ಯುವತಿಯೊಬ್ಬಳು ಕಾಸರಗೋಡಿನ ಮುಸ್ಲಿಂ ಉದ್ಯಮಿಯೊಬ್ಬನನ್ನು ಮದುವೆಯಾಗಿದ್ದಳು. ಇದ್ನು ತಪ್ಪಿಸಲು ಯುವತಿಯ ತಂದೆ ಮಾಡಿದ ಪ್ರಯತ್ನಗಳು ಫಲಕಾರಿಯಾಗಿರಲಿಲ್ಲ.

ಈ ಹಿಂದೆ, ಕೇರಳದ ಹೈಕೋರ್ಟ್, ಮುಸ್ಲಿಮೇತರ ಹುಡುಗಿಯರನ್ನು ಗುರಿಯಾಗಿಸುವ ‘ರೋಮಿಯೋ ಜಿಹಾದ್/ಲವ್ ಜಿಹಾದ್ ಆಂದೋಲನ’ದ ಕುರಿತು ತನಿಖೆಗೆ ಆದೇಶಿಸಿತ್ತು.‌ ಬರೇಲಿಯ ನ್ಯಾಯಾಲಯವೊಂದು ಇಂಥ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಸಜೆ ವಿಧಿಸಿ, “ಲವ್‌ ಜಿಹಾದ್‌ ಈ ದೇಶದ ಐಕ್ಯತೆಗೆ ದೊಡ್ಡ ಆತಂಕ” ಎಂದು ಹೇಳಿತ್ತು.

ಇದನ್ನೂ ಓದಿ: Love Jihad: ʼಲವ್‌ ಜಿಹಾದ್‌ ದೇಶದ ಐಕ್ಯತೆಗೆ ದೊಡ್ಡ ಆತಂಕʼ ಎಂದ ನ್ಯಾಯಾಲಯ; ಅಪರಾಧಿಗೆ ಜೀವಾವಧಿ ಶಿಕ್ಷೆ