ಹುಡುಗರು ಜಾಸ್ತಿಯಿದ್ದಾರೆ, ಹುಡುಗಿಯರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಹೇಳುತ್ತಾ ಬೇರೆ ಜಾತಿಯ ಹುಡುಗಿಯರನ್ನು ಮದುವೆಯಾಗುವ ಸ್ಥಿತಿಗೆ ಬಂದಿದೆ ಎನ್ನುವ ಕಾಲದಲ್ಲಿ ಮಗಳಿಗೆ ಒಳ್ಳೆಯ ಹುಡುಗ ಸಿಗುತ್ತಿಲ್ಲ ಎಂಬ ಚಿಂತೆ ಅಮ್ಮನಿಗೆ. ತಂಗಿಗೆ ಮನೆಯವರ ಕಡೆಯ ಯಾರಾದರೂ ಒಳ್ಳೆಯ ಹುಡುಗನನ್ನು ಹುಡುಕುತ್ತಿರುವ ಅಕ್ಕ. ಈ ನಡುವೆ ಅರೇಂಜ್ಡ್ ಹುಡುಗನನ್ನು ನೋಡುತ್ತಾ ಆಯ್ಕೆ ಮಾಡುತ್ತಿರುವ ಹುಡುಗಿ.
ಸಾವಿತ್ರಿ ಶ್ಯಾನುಭಾಗ
ಉಪ್ಪಿಟ್ಟು, ಶಿರಾ ಹುಡುಗನ ಮನೆಯವರಿಗಾಗಿ ಚೆನ್ನಾಗಿ ತುಪ್ಪ ಹಾಕಿ ಮಾಡಿಟ್ಟು, ಸೀರೆ ಮ್ಯಾಚಿಂಗ್ ರವಿಕೆ ಚೆನ್ನಾಗಿ ಸಿಂಗರಿಸಿ ಕೊಂಡು, ಕಾಫಿ ಮಾಡಲು ಡಿಕಾಕ್ಷನ್ ಮಾಡಿಟ್ಟು ಕಾಯತೊಡಗಿದಳು ಹುಡುಗಿ ಶಿಲ್ಪ.
ಹುಡುಗನ ಮನೆಯವರು ಬಂದು ಅವರ ಉಪಚಾರಗಳನ್ನು ಪಡೆದು, ಹುಡುಗಿಯನ್ನು ನೋಡಿ ನಾಲ್ಕು ಮಾತನಾಡಿ, ಹುಡುಗ- ಹುಡುಗಿ ಮಾತನಾಡುವುದಿದ್ದರೆ ಹೋಗಿ ಎಂದು ಕೋಣೆಗೆ ಕಳುಹಿಸಿದರು. ಅವರ ಮಾತುಕತೆ ಮುಗಿದು, ಹೊರಗೆ ಬಂದು ಸ್ವಲ್ಪ ದಿನದಲ್ಲಿ ಕರೆ ಮಾಡಿ ತಿಳಿಸುತ್ತೇವೆ ಎಂದು ಹುಡುಗನ ಮನೆಯವರು ಹೊರಟು ಹೋದರು.
ಅಮ್ಮ, ಮಗಳಿಗೆ ಈ ಕಾಯುವಿಕೆ ಹೊಸದೇನು ಅಲ್ಲ. ಶಿಲ್ಪಳಿಗೆ ಈಗ 25 ಕಳೆದು 26 ತುಂಬಿತು. 22-23 ವಯಸ್ಸಿಗೇ ಅಮ್ಮ ಅವಳ ಓದು ಮುಗಿಯುವಷ್ಟರಲ್ಲಿ ಹುಡುಗ ನೋಡಲು ಶುರುಮಾಡೋಣ ಎಂದಾಗ ಒಂದೆರಡು ವರ್ಷ ಕಳೆಯಲಿ ಎಂದು ಮುಂದೂಡಿ ದಳು. ಗೆಳತಿಯರೆಲ್ಲ ಅವಳೊಂದಿಗೆ ಬೆಂಗಳೂರಿಗೆ ಬಂದು ಕೆಲಸ ಹುಡುಕಿ ಒಳ್ಳೆಯ ಕೆಲಸಕ್ಕೆ ಸೇರಿ, ಅಮ್ಮನಿಗೆ ಸ್ವಲ್ಪ ಹಣ ಕಳುಹಿಸಿ, ಅವಳಿಗೆ ಮಾಡ್ರನ್ ಬಟ್ಟೆ, ಪಿಜ್ಜಾ, ಬರ್ಗರ್ ಆಸೆಯನ್ನೆಲ್ಲ ತೀರಿಸಿಕೊಂಡಳು.
ಗೆಳತಿಯರೊಂದಿಗೆ ಬೆಂಗಳೂರಿನ ಸುತ್ತ ಗೆಳತಿಯರೊಂದಿಗೆ ತಿರುಗಾಡಿ ಬಂದಾಯ್ತು. ಅವಳ ಓದಿನ ನಡುವೆ ನಡೆದ ಅಕ್ಕನ ಮದುವೆಯಲ್ಲಿ ಚೆನ್ನಾಗಿ ಓಡಾಡಿ, ಒಂದೆರಡು ಸಂಬಂಧ ಆಗಲೇ ಕೇಳಿ ಬಂದಾಗ ಅಕ್ಕನ ಮದುವೆಯ ಖರ್ಚು ಮುಗಿದ ಮೇಲೆ
ಮಾಡೋಣ ಎಂದು ಅಮ್ಮ, ಅವಳ ಓದು ಮುಗಿಯಲಿ ಎಂದು ಅವರಿಗೆ ಉತ್ತರಿಸಿದ್ದಳು ಆಕೆಯ ತಾಯಿ. ಅಕ್ಕನ ಮದುವೆಯಾಗಿ ಐದಾರು ತಿಂಗಳು ಕಳೆಯುತ್ತಲೇ ಗರ್ಭ ಪಾತದ ಜೊತೆ ಅಕ್ಕ ಭಾವನ ಜಗಳ ತಾರಕಕ್ಕೇರಿದ ಸುದ್ದಿಯೂ ಆಕೆಯ ಕಿವಿಗೆ ತಲುಪಿತು. ಅಕ್ಕನನ್ನು ಲವ್ ಮಾಡಿ ಮದುವೆಯಾದ ಭಾವನೇ ಕಿರುಕುಳ ನೀಡುತ್ತಿದ್ದುದನ್ನು ಕಂಡು ಇವಳೇ ನಿಂತು ಅಮ್ಮನಿಗೆ ಸಮಾಧಾನ ಮಾಡಿ ಅಕ್ಕನಿಗೆ ಡೈವರ್ಸ್ ಸಿಗುವುದರಲ್ಲಿ ಸಹಾಯ ಮಾಡಿದ್ದಳು.
ಶಿಲ್ಪಳ ಗೆಳತಿಯರಲ್ಲಿ ಊರಲ್ಲೇ ಸಣ್ಣ ಕೆಲಸ ಮಾಡಿಕೊಂಡಿದ್ದ ಕೆಲವರಿಗೆ ಒಬ್ಬೊಬ್ಬರಿಗೆ ಮದುವೆಯಾಗಲು ಅಮ್ಮನಿಗೆ ತನ್ನ ಮಗಳಿಗೆ ಯಾವಾಗ ಮದುವೆ ಮಾಡುವುದು ಎಂಬ ಚಿಂತೆ. ದೊಡ್ಡ ಮಗಳು ಬೇರೆ ಡೈವರ್ಸ್ ಪಡೆದು ಮನೆಯಲ್ಲಿ ಕುಳಿತಿದ್ದಾಳೆ. ಸಣ್ಣ ಮಗಳಿಗೆ ಹುಡುಗನನ್ನು ಹುಡುಕುವಾಗ ಅದೂ ಒಂದು ತೊಂದರೆಯಾಗಬಹುದು ಎಂಬ ಚಿಂತೆ. ಒಂದೆರಡು ವರ್ಷದ ಹಿಂದೆ ಮಗಳು ರಜೆಯಲ್ಲಿ ಗೆಳತಿಯ ಮದುವೆಗೆ ಬಂದಾಗ ಮಗಳೇ ಊರಿನಲ್ಲಿ ಗೆಳತಿಯರೆಲ್ಲ ಮದುವೆಯಾಗುತ್ತಿದ್ದಾರೆ, ನಿನಗೂ ಹುಡುಕಲು ಶುರುಮಾಡೋಣವೆಂದು ಜಾತಕವನ್ನು ಕುಲದೇವಸ್ಥಾನ, ಊರ ದೇವರ ಕಾಲಬುಡದಲ್ಲಿಟ್ಟು ಕಾಯಿ ಒಡೆಸಿ ತಂದಿ ದ್ದಳು.
ಜಾತಕದ ಕಾಪಿಯನ್ನು ಕೊಡತೊಡಗಲು, ಕೆಲವರು ಜಾತಕ ಕೂಡಿ ಬರಲಿಲ್ಲ, ಹುಡುಗಿ ಕಪ್ಪಗಿದ್ದಾಳೆ, ಸ್ವಲ್ಪ ಗಿಡ್ಡವಿದ್ದಾಳೆ,
ಬೆಂಗಳೂರಿನಲ್ಲಿ ಕೆಲಸ ಮಾಡುವ ಹುಡುಗಿ ಬೇಡವೆಂದು ಕಾರಣ ಹೇಳಿದಾಗ ಅಮ್ಮನಿಗೆ ಮಗಳ ಮದುವೆಯದೇ ಚಿಂತೆ.
ಗೆಳತಿಯ ಮದುವೆ ಶಿಲ್ಪಳ ಪ್ರಾಣಸ್ನೇಹಿತೆಗೆ ಮದುವೆಯಾಯ್ತು, ಅರೆಂಜ್ಡ ಮ್ಯಾರೇಜ್, ಹುಡುಗನೂ ಚೆನ್ನಾಗಿ ನೋಡಿಕೊಳ್ಳು ತ್ತಾನೆ.
ಅವಳಂತೂ ಶಿಲ್ಪಳಿಗೆ ಮದುವೆಯ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳಿ ಆಸೆಯನ್ನು ಹೆಚ್ಚಿಸಿದ್ದಾಳೆ. ಒಬ್ಬ ಹುಡುಗನಂತೂ ಜಾತಕ ಕೂಡಿ ಬರುತ್ತೆ ಎಂದು ಮನೆಯಲ್ಲಿ ಹೇಳುತ್ತಿದ್ದಂತೆ ಇವಳೊಂದಿಗೆ ಮಾತನಾಡಿ ಮದುವೆಯ ಕನಸನ್ನು ಕಾಣಿಸಿದವನು, ಮನೆಯಲ್ಲಿ ಅತ್ತೆಯ ಜವಾಬ್ದಾರಿ, ಅವಳ ಅಕ್ಕನ ಡೈವರ್ಸ್ ಕಥೆಯೆಲ್ಲ ಗೊತ್ತಾಗುತ್ತಿದ್ದಂತೆ, ಸುಮ್ಮನಾದ. ಅಕ್ಕನಲ್ಲೇ ಕೇಳಿದರೆ ಅವಳು ಎಲ್ಲರ ಬದುಕು ಒಂದೇ ತರಹ ಇರಲ್ಲ ಕಣೆ, ಈಗ ಮದುವೆಯಾದ ಗಂಡ ತುಂಬಾ ಚೆನ್ನಾಗಿ ನೋಡ್ಕೋತಾನೆ ಕಣೆ ಎಂದು ಮದುವೆಯ ಬದುಕಲ್ಲಿ ಭರವಸೆಯನ್ನು ಮೂಡಿಸುತ್ತಾಳೆ. ಅದೃಷ್ಟ ಚೆನ್ನಾಗಿದ್ದರೆ ಎಲ್ಲ ನೆಟ್ಟಗಿರುತ್ತೆ ಕಣೆ ಎಂದು ವೇದಾಂತ ವನ್ನು ನುಡಿಯುತ್ತಾಳೆ. ಈ ಮಾತನ್ನು ಕೇಳಿ ಅದೃಷ್ಟ ಪರೀಕ್ಷೆಗೆ ತನ್ನನ್ನು ಒಡ್ಡಿಕೊಳ್ಳಲು ತಯಾರಿ ಮಾಡಬೇಕಲ್ಲ ಎಂಬ ಗೊಂದಲ.
ಮೆನೋಪಾಸ್ ಸಮಸ್ಯೆ
ಅಮ್ಮನಿಗೆ ಚಿಂತೆಯ ನಡುವೆ ಮೆನೋಪಾಸ್ ಸಮಸ್ಯೆ. ಇವಳಿಗೂ ಚಿಂತೆಯ ನಡುವೆ ಸೈನಸ್ ಸಮಸ್ಯೆ, ವೈದ್ಯರ ಬಳಿ ಹೋದಾಗ
ಮದ್ದು ನೀಡಿ ಮದುವೆಯೇ ಇದಕ್ಕೆ ಪರಿಹಾರ ಎಂಬ ಉತ್ತರ. ಆದರೆ ಉತ್ತಮ ವರವನ್ನು ಹುಡುಕಬೇಕು, ಅವರಿಗೆ ಅವಳು ಇಷ್ಟ ವಾಗಬೇಕು. ಹುಡುಗನಿಗೆ ಇಷ್ಟವಾದರೆ ಸಾಕಾ, ಅವರ ಮನೆಯವರಿಗೆ ಇಷ್ಟವಾಗಬೇಕು.
ಅಮ್ಮ ಫೋನಿನಲ್ಲಿ ಹೇಳಿದ ಹುಡುಗನನ್ನು ಭೇಟಿಯಾಗಿ, ಸಣ್ಣ ಕಾರಣಗಳಿಗಾಗಿ ಅವನನ್ನು ರಿಜೆಕ್ಟ್ ಮಾಡುತ್ತಾ ಇನ್ನೊಂದು
ಭಾನುವಾರ ಇನ್ನೊಬ್ಬ ಹುಡುಗನನ್ನು ಭೇಟಿಯಾಗಿ ಅವನಿಗೆ ಕೂದಲು ಕಡಿಮೆಯಾಯಿತು, ಸಂಬಳ ಕಡಿಮೆಯಂತೆ, ಅತ್ತೆ
ಇರುವ ಮನೆ ಬೇಡ ಎಂಬೆಲ್ಲ ಕಾರಣ ಕೊಟ್ಟು ರಿಜೆಕ್ಟ್ ಮಾಡುತ್ತಾ ಮಗದೊಂದು ಭಾನುವಾರಕ್ಕೆ ಕಾಯುವ ಹವ್ಯಾಸವೇ ಆಯಿತು.
ಹುಡುಗರು ಜಾಸ್ತಿಯಿದ್ದಾರೆ, ಹುಡುಗಿಯರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಹೇಳುತ್ತಾ ಬೇರೆ ಜಾತಿಯ ಹುಡುಗಿ
ಯರನ್ನು ಮದುವೆಯಾಗುವ ಸ್ಥಿತಿಗೆ ಬಂದಿದೆ ಎನ್ನುವ ಕಾಲದಲ್ಲಿ ಮಗಳಿಗೆ ಒಳ್ಳೆಯ ಹುಡುಗ ಸಿಗುತ್ತಿಲ್ಲ ಎಂಬ ಚಿಂತೆ ಅಮ್ಮನಿಗೆ.
ತಂಗಿಗೆ ಮನೆಯವರ ಕಡೆಯ ಯಾರಾದರೂ ಒಳ್ಳೆಯ ಹುಡುಗನನ್ನು ಹುಡುಕುತ್ತಿರುವ ಅಕ್ಕ. ಹೀಗೆ ಎಲ್ಲರ ಬದುಕನ್ನು ಕಂಡು
ಮದುವೆಯಾಗಬೇಕೆ ಬೇಡವೇ ಎಂಬ ಗೊಂದಲದಲ್ಲಿರುವ ಶಿಲ್ಪಳಿಗೆ ಒಳ್ಳೆಯ ಗಂಡು ಸಿಕ್ಕಾನೆಯೇ? ಸಿಗಲಿ ಎಂಬ ಹಾರೈಕೆ.
ಅವಳಿಗೆ ಆಲ್ ದ ಬೆಸ್ಟ್.