Friday, 22nd November 2024

US presidential election 2024: ಟ್ರಂಪ್‌ಗೆ ಮತ್ತೆ ಅಮೆರಿಕ ಅಧ್ಯಕ್ಷ ಪಟ್ಟ! ಥಾಯ್ಲೆಂಡ್ ಹಿಪ್ಪೋ ನುಡಿಯಿತು ಸ್ಫೋಟಕ ಭವಿಷ್ಯ

ವಾಷಿಂಗ್ಟನ್‌: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆಯ (US presidential election 2024) ಗೌಜಿ-ಗದ್ದಲ ಜೋರಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ..!, ಒಂದು ಬಾರಿ ಅಧ್ಯಕ್ಷರಾಗಿ ತನ್ನ ವಿಕ್ಷಿಪ್ತ ನಿರ್ಧಾರ ಮತ್ತು ವ್ಯಕ್ತಿತ್ವದಿಂದ ಜಗತ್ತಿನಾದ್ಯಂತ ಫೇಮಸ್ ಆಗಿರುವ ಡೊನಾಲ್ಡ್ ಟ್ರಂಪ್ (Donald Trump) ಈ ಬಾರಿ ಮತ್ತೆ ಅಧ್ಯಕ್ಷ ಪದಕ್ಕೆ ರೇಸ್‌ನಲ್ಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ಥಾಯ್ಲೆಂಡ್ ನ ವೈರಲ್ ಹಿಪ್ಪೋ (ನೀರಾನೆ) ಮೂ ಡೆಂಗ್ (Moo Deng) ಅಮೆರಿಕಾ ಚುನಾವಣೆಯ ಬಗ್ಗೆ ಹೇಳಿರುವ ಭವಿಷ್ಯ (Viral Hippo Prediction) ಸದ್ಯಕ್ಕೆ ಸಖತ್ ಟ್ರೆಂಡಿಂಗ್ ನಲ್ಲಿದೆ

ರಿಪಬ್ಲಿಕನ್‌ ಮತ್ತು ಡೆಮಾಕ್ರಾಟಿಕ್ ಎಂಬ ಎರಡೇ ಪಕ್ಷಗಳ ನಡುವೆ ನಡೆಯುವ ಈ ಎಲೆಕ್ಷನ್ ಜಿದ್ದಾಜಿದ್ದಿನಲ್ಲಿ ಕಳೆದ ಬಾರಿ ಟ್ರಂಪ್ ಅವರು ಡೆಮಾಕ್ರಾಟಿಕ್ ಪಕ್ಷದ ಜೋ ಬೈಡೆನ್ (Joe Biden) ವಿರುದ್ಧ ಸೋತು ಎರಡನೇ ಬಾರಿ ಅಧ್ಯಕ್ಷೀಯ ಪದವಿಗೇರುವ ಅವಕಾಶದಿಂದ ವಂಚಿತರಾಗಿದ್ದರು ಮತ್ತು ಈ ಸಂದರ್ಭದಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳೂ ನಡೆದಿದ್ದವು.

ಬಳಿಕ ಅಧಿಕಾರದ ಗದ್ದುಗೆಯೇರಿದ್ದ ಜೋ ಬೈಡೆನ್ ಟ್ರಂಪ್ ವಿರುದ್ಧ ತನಿಖೆಗೂ ಆದೇಶಿಸಿದ್ದರು, ಈ ಎಲ್ಲಾ ಅಗ್ನಿ ಪರೀಕ್ಷೆಗಳನ್ನು ಎದುರಿಸಿದ ಬಳಿಕ ಇದೀಗ ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಟ್ರಂಪ್ ಅವರು ಮತ್ತೆ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತು ಎರಡನೇ ಸಲ ಜಗತ್ತಿನ ದೊಡ್ಡಣ್ಣ ಎಂದೇ ಕರೆಯಿಸಿಕೊಳ್ಳುತ್ತಿರುವ ಅಮೆರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಗೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಈ ನಡುವೆ ಸಾಮಾನ್ಯವೆಂಬಂತೆ ಅಮೆರಿಕಾದ ಅಧ್ಯಕ್ಷೀಯ ಪದದ ಚುನಾವಣಾ ಭವಿಷ್ಯಗಳು ಹರಿದಾಡಲು ಪ್ರಾರಂಭಿಸಿವೆ. ಜನರು ಹೇಳುವ ಭವಿಷ್ಯ ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳ ಭವಿಷ್ಯಕ್ಕೂ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ.

ದಕ್ಕೆ ಪೂರಕವೆಂಬಂತೆ ಥಾಯ್ಲೆಂಡ್ ನ ವೈರಲ್ ಹಿಪ್ಪೋ (ನೀರಾನೆ) ಮೂ ಡೆಂಗ್ (Moo Deng) (Viral Hippo Prediction) ಅಮೆರಿಕಾ ಚುನಾವಣೆಯ ಬಗ್ಗೆ ಹೇಳಿರುವ ಭವಿಷ್ಯ ಸದ್ಯಕ್ಕೆ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಫೇಮಸ್ ಹಿಪ್ಪೋ ಹೇಳಿರುವ ಭವಿಷ್ಯದ ಪ್ರಕಾರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತನ್ನ ಪ್ರತಿಸ್ಪರ್ಧಿ ಡೆಮಾಕ್ರಾಟಿಕ್ ಪಕ್ಷದ ಕಮಲಾ ಹ್ಯಾರಿಸ್ (Kamala Harris) ಅವರನ್ನು ಮಣಿಸಿ ಈ ಬಾರಿ ಅಮೆರಿಕಾದ ಅಧ್ಯಕ್ಷರಾಗಲಿದ್ದಾರಂತೆ!

ಖ್ವಾ ಖ್ಯೂ ಮುಕ್ತ ಮೃಗಾಲಯದಲ್ಲಿರುವ ಈ ಹಿಪ್ಪೋ ಎದುರು ಹಣ್ಣುಗಳಿಂದ ವಿಶಿಷ್ಟವಾಗಿ ತಯಾರಿಸಿದ್ದ  ಎರಡು ಕೇಕ್ ಗಳನ್ನು ಇರಿಸಲಾಗಿತ್ತು, ಹೀಗೆ ಮೃಗಾಲಯದ ಪರಿಚಾರಕರು ಮೂ ಡೆಂಗ್ ಹಿಪ್ಪೋ ಎದುರು ಎರಡು ಹಣ್ಣಿನ ಕೇಕ್‌ಗಳನ್ನು ಇರಿಸಿದ್ದರು. ಒಂದರಲ್ಲಿ ಡೊನಾಲ್ಡ್ ಟ್ರಂಪ್ ಎಂದು ಮತ್ತೊಂದರಲ್ಲಿ ಕಮಲಾ ಹ್ಯಾರಿಸ್ ಎಂದು ಥಾಯ್ ಸ್ಥಳೀಯ ಭಾಷೆಯಲ್ಲಿ ಕೆತ್ತಿಡಲಾಗಿತ್ತು.

ಬಳಿಕ ಇದರ ವಿಡಿಯೋ ಚಿತ್ರೀಕರಣವನ್ನೂ ಸಹ ಮಾಡಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ದಾಖಲಾಗಿರುವಂತೆ, ಮೂ ಡೆಂಗ್ ಹಿಪ್ಪೋ ಡೊನಾಲ್ಡ್ ಟ್ರಂಪ್ ಅವರ ಹೆಸರು ಕೆತ್ತಲಾಗಿದ್ದ ಹಣ್ಣಿನ ಕೇಕನ್ನು ತಿಂದಿದೆ. ಅದರಂತೆ ಡೆಂಗ್ ಜೊತೆಗಿದ್ದ ಇನ್ನೊಂದು ದೊಡ್ಡ ಹಿಪ್ಪೋ ಕಮಲಾ ಹ್ಯಾರಿಸ್ ಅವರ ಹೆಸರಿದ್ದ ಹಣ್ಣಿನ ಕೇಕನ್ನು ತಿಂದಿದೆ!

ಇದೀಗ ಪ್ರಿಡಿಕ್ಷನ್ ಸ್ಪೆಷಲಿಸ್ಟ್ ಮೂ ಡೆಂಗ್ ಹಿಪ್ಪೋ ನೀಡಿರುವ ಈ ಪ್ರಿಡಿಕ್ಷನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಡೆಂಗ್ ಭವಿಷ್ಯದ ಪ್ರಕಾರ ನ.05ರಂದು ನಡೆಯಲಿರುವ ಈ ಎಲೆಕ್ಷನ್ ನಲ್ಲಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆಯೋ ಎಂಬ ಕಾತರ ಮೂಡಿದೆ.

ಪ್ರಪಂಚದ ದೊಡ್ಡಣ್ಣನೆಂದೇ ಕರೆಸಿಕೊಳ್ಳುವ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು, ಇಂದು ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌(Donald Trump)ಹಾಗೂ ಡೆಮಾಕ್ರಟಿಕ್‌ ಪಾರ್ಟಿಯ ಕಮಲಾ ಹ್ಯಾರಿಸ್‌(Kamala Harris) ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಇಂದು ನಿರ್ಧಾರವಾಗಲಿದೆ.

ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನು ಭಾರತೀಯ ಕಾಲಮಾನದ ಪ್ರಕಾರ ನೋಡುವುದಾದರೆ ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಬುಧವಾರ ಬೆಳಗ್ಗೆ 6.30ಕ್ಕೆ ಅಂತ್ಯವಾಗಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: US Presidential Election 2024: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ; ಎಷ್ಟು ಹೊತ್ತಿಗೆ ಮತದಾನ? ಫಲಿತಾಂಶ ಯಾವಾಗ?