Monday, 25th November 2024

Border-Gavaskar Trophy: ಆಸೀಸ್‌ ಟೆಸ್ಟ್‌ಗೆ ಬುಮ್ರಾ ನಾಯಕನಾಗಲಿ; ಗಾವಸ್ಕರ್

ಮುಂಬಯಿ: ಇನ್ನೆರಡು ವಾರದಲ್ಲಿ ಭಾರತ ತಂಡ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌(Border-Gavaskar Trophy) ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಇತ್ತಂಡಗಳ ಮೊದಲ ಪಂದ್ಯ ನ.22 ಪರ್ತ್​ನಲ್ಲಿ ಶುರುವಾಗಲಿದೆ. ರೋಹಿತ್​ ಪತ್ನಿ ರಿತಿಕಾ 2ನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿರುವ ಕಾರಣ ರೋಹಿತ್‌(rohit sharma) ಮೊದಲ ಟೆಸ್ಟ್​ ತಪ್ಪಿಸಿಕೊಳ್ಳುವ ನಿರೀಕ್ಷೆ ಇದೆ. ರೋಹಿತ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಹಲವರ ಹೆಸರು ಕೇಳಿ ಬಂದಿದೆ. ಆದರೆ, ಮಾಜಿ ನಾಯಕ ಸುನೀಲ್​ ಗಾವಸ್ಕರ್(Sunil Gavaskar) ಅವರು ಜಸ್​ಪ್ರೀತ್​ ಬುಮ್ರಾ ಅವರಿಗೇ ಇಡೀ ಸರಣಿಯ ನಾಯಕತ್ವ ವಹಿಸುವುದು ಉತ್ತಮ ಎಂದು ಹೇಳಿದ್ದಾರೆ.

ಉಪನಾಯಕ ಜಸ್​ಪ್ರೀತ್​ ಬುಮ್ರಾ ಅವರಿಗೇ ಸರಣಿಯ ನಾಯಕತ್ವ ನೀಡಿಬೇಕು. ರೋಹಿತ್​ ರಜೆ ಬಳಿಕ ಭಾರತ ತಂಡಕ್ಕೆ ಮರಳಿದಾಗ ಸರಣಿಯ ಇತರ ಪಂದ್ಯಗಳಲ್ಲಿ ಸಾಮಾನ್ಯ ಆಟಗಾರನಾಗಿ ಆಡಲಿ ಎಂದು ಗಾವಸ್ಕರ್ ಹೇಳಿದ್ದಾರೆ. ಇದೇ ವೇಳೆ ಆಸೀಸ್‌ ಸರಣಿಯನ್ನು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೇರಲೆಂದೇ ಪರಿಗಣನೆ ಮಾಡಬಾರದು ಬದಲಾಗಿ ಆಸ್ಟ್ರೆಲಿಯಾದಲ್ಲಿ ಟೆಸ್ಟ್​ ಸರಣಿ ಜಯಿಸುವತ್ತ ಮಾತ್ರ ಗಮನಹರಿಸುವುದು ಉತ್ತಮ. ಅಂತರ ಎಷ್ಟೇ ಇರಲಿ ಆದರೆ ಸರಣಿ ನಮ್ಮದಾಗಬೇಕು ಎಂದು ಗಾವಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ ವಿವಾದದ ಸುಳಿಯಲ್ಲಿ ಸುನಿಲ್​ ಗಾವಸ್ಕರ್​

ಆಸ್ಟ್ರೇಲಿಯಾ ವಿರುದ್ಧ ಭಾರತ ಕಳೆದ 4 ಸರಣಿಗಳಲ್ಲಿ ಗೆದ್ದು ಬೀಗಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.

ಈ ಹಿಂದಿನ ಎಡರು ಆಸೀಸ್‌ ಪ್ರವಾಸದಲ್ಲಿ ಗೆಲುವು ಸಾಧಿಸಿದ ಭಾರತ ಹ್ಯಾಟ್ರಿಕ್‌ ಸರಣಿ ಗೆಲುವು ಸಾಧಿಸಬಹುದೇ ಎಂದು ಕಾದು ನೋಡಬೇಕಿದೆ. ತವರಿನಲ್ಲೇ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧ ವೈಟ್‌ವಾಶ್‌ ಮುಖಭಂಗದ ಆಘಾತದಿಂದ ಹೊರಬಂದು ಆಡಿದರೆ ಭಾರತಕ್ಕೆ ಗೆಲುವು ಖಚಿತ ಎನ್ನಬಹುದು. ಇನ್ನೊಂದೆಡೆ ಕಳೆದ ಎರಡು ಪ್ರವಾಸದಲ್ಲಿದ್ದ ಹಲವು ಅನುಭವಿ ಆಟಗಾರರು ಈ ಬಾರಿ ತಂಡದಲ್ಲಿಲ್ಲ. ಎಲ್ಲ ಯುವ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಇವರೆಲ್ಲ ಆಸೀಸ್‌ ವೇಗದ ಪಿಚ್‌ನಲ್ಲಿ ಹೇಗೆ ಆಡಲಿದ್ದಾರೆ ಎನ್ನುವುದು ಕೂಡ ಈ ಬಾರಿಯ ಸರಣಿಯ ಕುತೂಹಲ.