Wednesday, 23rd October 2024

ಹಿಂದುಳಿದ ಜನತೆ, ಸರಕಾರದ ಸೇತುವೆಯಾಗಿ ಸೇತುವೆ

ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್

ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ಅರಸು ಅವರ ಬಗ್ಗೆ ತಳಸಮುದಾಯಗಳು ಅಪಾರವಾದ ನಂಬಿಕೆ ಇರಿಸಿದ್ದು, ಅದನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಸಂಸ್ಥೆ ಹಿಂದುಳಿದ ವರ್ಗಗಳಿಗೆ ಹೊಸ ತೊಂದು ಆಶಾಭಾವನೆ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯತತ್ಪರತೆ ಮಾಡಬೇಕಿದೆ ಎಂಬ ಸಂದೇಶ ನೀಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು.ಆರ್ (ಕೌಟಿಲ್ಯ) ಅವರೊಂದಿಗಿನ ವಿಶ್ವವಾಣಿ ಸಂದರ್ಶನದ ಒಂದು ನೋಟ ಇಲ್ಲಿದೆ.

ನಿಗಮದ ಅಧ್ಯಕ್ಷರಾಗಿ ಜನತೆಗೆ ಮತ್ತು ಸರಕಾರಕ್ಕೆೆ ನಿಮ್ಮ ಸಂದೇಶವೇನು?
ಸಾಮಾಜಿಕ ಕ್ರಾಂತಿ ಮತ್ತು ನೆಲದ ಕುಲಕಸುಬು ಆಧಾರಿತ ಸಮುದಾಯಗಳೇ ನಿಜವಾದ ಸಮಾಜ ಕಟ್ಟಿದವರು ಎಂಬ ಕಲ್ಪನೆ ಯನ್ನು ಸ್ವತಂತ್ರ ನಂತರದಲ್ಲಿ ಈ ಯೋಚನೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಲು ದೇವರಾಜ ಅರಸು ಅವರು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅಂತ ಪುಣ್ಯ ಪುರುಷನ ಹೆಸರಿನಲ್ಲಿ ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ ಆಗಿರು ವುದು ಅತ್ಯಂತ ಅರ್ಥಪೂರ್ಣ. ಪುಣ್ಯಾತ್ಮನ ಹೆಸರಿರುವ ನಿಗಮದ ಅಧ್ಯಕ್ಷನಾಗಿ ನಾನು ಒಬ್ಬ ತಳಸಮುದಾಯದವನಾಗಿದ್ದು, ಹೆಮ್ಮೆ ಎನಿಸುತ್ತದೆ. ಬಸವಣ್ಣನವರ ಕಲ್ಪನೆ ಹಾಗೂ ದೇವರಾಜ ಅರಸು ಅವರ ಆಶಯವನ್ನು ನನ್ನ ಅಧಿಕಾರಾ ವಧಿಯಲ್ಲಿ ಈಡೇರಿಸಲು ಪ್ರಯತ್ನಿಸುವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತು ಬಿಜೆಪಿ ಪಕ್ಷದ ಅಧ್ಯಕ್ಷರು ಈ ನಿಗಮಕ್ಕೆ ಆಯ್ಕೆ ಮಾಡಿರುವುದು ಜೀವನದಲ್ಲಿ ಮರೆಯಲಾರದ ಸಂಗತಿ.

ನಿಗಮದಡಿ ಸೌಲಭ್ಯಗಳು ಪಡೆದವರ ಪಾಲಾಗುತ್ತಿರುವ ದೂರು ಕೇಳಿ ಬಂದಿದೆಯಲ್ಲಾ?
ಅರಸು ಅವರ ಆಶಯದಂತೆ ಪ್ರತಿಯೊಂದು ಯೋಜನೆ ತಳಮಟ್ಟದ ಸಮುದಾಯಗಳಿಗೂ ಸಿಗುವ ರೀತಿ ಮಾಡಲಾಗುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಸೇವೆ ಸಿಗುವಂತೆ ಕಾರ್ಯಾಚರಣೆ ಮಾಡಲಾಗುತ್ತದೆ. ಯೋಜನೆ ಗಳ ಸುಧಾರಣೆ ತರಲು, ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳದೆ ವಿಫಲತೆ, ನಿಗಮದ ಉದ್ದೇಶಕ್ಕೆ ತಕ್ಕಂತೆ ಅನುಕೂಲ ಪಡೆದುಕೊಳ್ಳದಿರುವುದು ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಕಣ್ಗಾಗವಲು ವ್ಯವಸ್ಥೆ ರೂಪಿಸಲಾಗುತ್ತದೆ.

ಹಿಂದುಳಿದ ವರ್ಗಗಳ ಬಾಳಲ್ಲಿ ಆಶಾಕಿರಣ ಮೂಡಿಸಲು ಏನೆಲ್ಲಾ ಯೋಜನೆಗಳು ರೂಪಿಸುತ್ತೀರಾ?
ಈ ನಿಗಮದ ಮೂಲಕ 200ಕ್ಕೂ ಹೆಚ್ಚು ಸಮುದಾಯಗಳು ಇದರ ಅಡಿಯಲ್ಲಿ ಬರುತ್ತವೆ. ಸಮಾಜಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಅವರನ್ನು ಉತ್ತೇಜಿಸುವ ಪ್ರಯತ್ನ ಮಾಡಲು ಇದೊಂದು ಅವಕಾಶ ಲಭಿಸಿದೆ. ಆ ಮೂಲಕ ಸಮಾನತೆಯ ಸಮಾಜ ಕಟ್ಟುವ ಪರಿಕಲ್ಪನೆಗೆ ಹಾಗೂ ನರೇಂದ್ರ ಮೋದಿ ಅವರ ‘ಬಲಿಷ್ಠ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡಲು ಅವಕಾಶ ಸಿಕ್ಕಿದೆ. ಆಧುನಿಕ ತಂತ್ರಜ್ಞಾನದ ಆಕ್ರಮಣಕ್ಕೆ ತುತ್ತಾಗಿ, ಕುಲಕಸಬು ಆಧಾರಿತ ಸಮುದಾಯಗಳು ಅತಂತ್ರ ಸ್ಥಿತಿಯಲ್ಲಿವೆ. ಇಂತಹ ಸಮುದಾಯಗಳ ಪ್ರತಿಭಾವಂತರನ್ನು ಗುರುತಿಸಿ ಉತ್ತೇಜಿಸುವ ಕೆಲಸ ನಿಗಮದಿಂದ ಮಾಡಲಾಗುತ್ತದೆ.
ಸಮುದಾಯಗಳ ವಿದ್ಯಾರ್ಥಿಗಳು ಹಾಗೂ ಕೃಷಿಕರ ಬೆನ್ನಲುಬಾಗಿ ನಿಲ್ಲಲಾಗುತ್ತದೆ. ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರ ಹಾಗೂ ಪುನಶ್ಚೇತನ ಶಕ್ತಿ ಕೊಟ್ಟು ಬಿಜೆಪಿ ಸಿದ್ಧಾಂತ, ಯಡಿಯೂರಪ್ಪ ಅವರ ಸಮಾನತೆಯ ಚಿಂತನೆಯನ್ನು ಪಾಲಿಸಲಾಗು ತ್ತದೆ. ಸಾಮಾನ್ಯ ಕಾರ್ಯಕರ್ತನಾಗಿ ಹಿಂದುಳಿದ ಹಾಗೂ ಶೋಷಿತ ಮತ್ತು ಸರಕಾರದ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಂಕಲ್ಪ ನನ್ನದು.

ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅಕ್ರಮ ಕುರಿತು ನಿಮ್ಮ ನಿಲುವೇನು?
ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಕೃಷಿಕ ಸಮುದಾಯಗಳ ಏಳಿಗೆಗೆ ಯೋಜನೆಗಳ ಮೂಲಕ ಆಂದೋಲನ ಮಾಡಲಾಗುತ್ತದೆ. ಮುಖ್ಯವಾಗಿ ನೀರಿನ ಸಮಸ್ಯೆ ನಿವಾರಿಸಲು ಮಳೆನೀರಿನ ಕೊಯ್ಲು ಉತ್ತೇಜಿಸಲಾಗು
ತ್ತದೆ. ಅಂತರ್ಜಲಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೀರಿನ ಸಂಗ್ರಹಕ್ಕೆ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ.

ರೈತರ ಮತ್ತು ತಳ ಸಮುದಾಯಗಳ, ವಿದ್ಯಾರ್ಥಿ ಸ್ನೇಹಿಯಾಗಿ ನಿಗಮ ಮಾರ್ಪಾಡು ಮಾಡುವಲ್ಲಿ ನಿಮ್ಮ ಸಿದ್ಧತೆ ಹೇಗೆ?
ನಿಗಮದಡಿ ಯಾವೆಲ್ಲ ಸಮುದಾಯಗಳಿಗೆ ಸೌಲಭ್ಯಗಳು ಸಿಗಬೇಕು, ಅದು ಕಾಲಕ್ಕನುಗುಣವಾಗಿ ನೀಡಲಾಗುತ್ತದೆ. ಜನಪರವಾಗಿ ನಿಗಮ ಕಾರ್ಯನಿರ್ವ ಹಿಸಲಿದೆ. ಈಗಿರುವ ಕಾರ್ಯಕ್ರಮಗಳನ್ನು ವಿಸ್ತಾರ ಮಾಡಲಾಗುತ್ತದೆ. ಕೌಶಲ ಭಾರತ ಯೋಜನೆ ಎಲ್ಲಾ  ಮುದಾಯಗಳಿಗೂ ಲಭ್ಯವಾಗಲಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತೇಜಿಸಲು ಹಾಗೂ ಮುಖ್ಯವಾಹಿನಿಗೆ
ತಂದು ಸ್ವಾಭಿಮಾನ, ಆತ್ಮಬಲ ತುಂಬಲಾಗುತ್ತದೆ.

ನಿಗಮದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಹೇಗೆ ಕಡಿವಾಣ ಹಾಕುತ್ತೀರಾ?
ಅನೇಕ ಸಮುದಾಯಗಳು, ಅಸಂಘಟಿತರ ಸಾಮಾಜಿಕ ಅಭದ್ರತೆ ಹೋಗಲಾಡಿಸುವ ನಿಟ್ಟಿನಲ್ಲಿ ಕಾಯಕ ಸಮುದಾಯದ ವೇದಿಕೆ ಕಟ್ಟಿ ಸುಧಾರಣೆ ತರಲಾಗುತ್ತದೆ. ನಿಗಮದಲ್ಲಿ ಯಾವುದೇ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ಅದನ್ನು ನನ್ನ ಗಮನಕ್ಕೆ
ತಂದರೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪಾರದರ್ಶಕ ಆಡಳಿತ ನಡೆಸುವುದೇ ನನ್ನ ಧ್ಯೇಯ.