ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Sandalwood) ʼಕೆಜಿಫ್ ಚಾಚಾʼ (KGF) ಎಂದೇ ಖ್ಯಾತಿ ಗಳಿಸಿರುವ ಖಳ ನಟ ಹರೀಶ್ ರಾಯ್ (Harish Roy) ಶ್ವಾಸಕೋಶದ ಸೋಂಕು ಉಲ್ಬಣಿಸಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.
ಇವರಿಗೆ ಕ್ಯಾನ್ಸರ್ (Cancer) ಕೂಡ ಕಾಡುತ್ತಿದ್ದು, ಸದ್ಯ ಚಿಕಿತ್ಸೆಯ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಉಸಿರಾಟದ ತೊಂದರೆಯಿಂದ ಹರೀಶ್ ರಾಯ್ ತುಂಬಾ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಕೃತಕ ಆಕ್ಸಿಜನ್ ನೀಡುವ ಮೂಲಕ ಉಸಿರಾಟ ನಡೆಸಲಾಗುತ್ತಿತ್ತು. ಇದೀಗ ನಟನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು, ಆಕ್ಸಿಜನ್ ರಿಮೂವ್ ಮಾಡಲಾಗಿದೆ.
ಕೆಜಿಎಫ್ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದ ದಿನ ಯಶ್‌ಗೆ (Yash) ಹರೀಶ್ ರಾಯ್ ವಿಶ್ ಮಾಡಿದ್ದರು. ಆಗ ಯಶ್ ಫೋನ್ ಮಾಡಿ ಆರೋಗ್ಯ ವಿಚಾರಿಸಿ, ಹಣ ಬೇಕಾ ಅಂತ ಕೇಳಿದ್ದರು. ಅದನ್ನು ನೆನೆದ ಹರೀಶ್ ರಾಯ್, ಜೊತೆಗೆ ಕನ್ನಡಿಗರು ಮಾಡಿದ ಸಹಾಯ ನೆನೆದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
“ನನಗೆ ಮೊನ್ನೆ ಸೀರಿಯಸ್ ಆದಾಗ ಎಲ್ಲರಿಗೂ ಹೇಳದೆ ಹೋಗುತೀನಿ ಅಂತ ಅನ್ನಿಸಿತ್ತು. ಈಗ ಹೇಳ್ತಾ ಇದ್ದೀನಿ, ತುಂಬಾ ಸಹಾಯ ಮಾಡಿದ್ದಾರೆ. ನನಗೆ ಏನಾದರೂ ತೊಂದರೆ ಆದರೆ ದುನಿಯಾ ವಿಜಯ್ ಇದಾರೆ. ಬಂದು ಇಲ್ಲಿ ನಿಂತು ಎಲ್ಲಾ ಮಾಡೋಕೆ. ಗುರುಪ್ರಸಾದ್ ಅವರ ಕಾರ್ಯವನ್ನು ಮಾಡಿದ್ದನ್ನು ಮೊನ್ನೆ ನೋಡಿದ” ಎಂದಿದ್ದಾರೆ.
“ರಾಯರ ಮಂತ್ರಾಕ್ಷತೆ ಹಾಕ್ಕೊಂಡೆ. ಅಷ್ಟರಲ್ಲಿ ಡಾಕ್ಟರ್ ಬಂದು ಚೆಕ್ ಮಾಡಿ, ಕ್ಯಾನ್ಸರ್ ಇರೋದರಿಂದ ಕೆಲವೊಂದು ಚಿಕಿತ್ಸೆಗಳನ್ನು ಮಾಡೋದು ಬೇಡ ಅಂದರು. ಜೀವಕ್ಕೆ ಅಪಾಯ ಆಗುತ್ತೆ ಅಂತ. ರಾಯರೇ ನನ್ನ ರಕ್ಷಿಸಿದ್ದಾರೆ” ಎಂದು ನಟ ಹರೀಶ್ ರಾಯ್ ರಾಯರ ಪವಾಡವನ್ನು ಕೊಂಡಾಡಿದ್ದಾರೆ.
ಮೂರು ವರ್ಷದಿಂದ ಹರೀಶ ರಾಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕೆ ಹಾಗೂ ‘ಕೆಜಿಎಫ್ 2’ (KGF Chapter 2) ಚಿತ್ರದ ಶೂಟಿಂಗ್ ಇದೆ ಎಂಬ ಕಾರಣದಿಂದ ಅವರು ಚಿಕಿತ್ಸೆ ಪಡೆಯಲು ತಡ ಮಾಡಿದ್ದರು. ಹಣದ ಕೊರತೆ ಕೂಡ ಇದ್ದಿದ್ದರಿಂದ ಕಷ್ಟ ಅನುಭವಿಸಿದ್ದರು. ನಂತರ ವೈದ್ಯರನ್ನು ಭೇಟಿ ಮಾಡಿದಾಗ ಅವರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು. ಕೂಡಲೇ ಆಪರೇಷನ್ ಮಾಡಿಸಲಾಯಿತು. ಆಪರೇಷನ್ ನಂತರ ಕೂಡ ಕೆಲವು ಸಮಸ್ಯೆಗಳು ಎದುರಾಗಿದ್ದವು.
ಇದನ್ನೂ ಓದಿ: Actor Yash: ʼಯಶ್, ಬೇಗ ಸಿನಿಮಾ ಮಾಡಿʼ ಶಾರುಖ್ ಖಾನ್ ಮನವಿ ವೈರಲ್!