Friday, 22nd November 2024

Sidhu Moosewala’s Younger Brother: ಸಿದ್ದು ಮೂಸೇವಾಲಾನ ಪುಟ್ಟ ತಮ್ಮನ ಮುಖ ರಿವೀಲ್; ಹೀಗಿದ್ದಾನೆ ಶುಭದೀಪ್

ಮುಂಬಯಿ: ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ಸಿದ್ದು ಮೂಸೇವಾಲಾನ (Sidhu Moosewala) ಹೆತ್ತವರು ತಮ್ಮ ಪುಟ್ಟ ಮಗುವಿನ (Sidhu Moosewala’s Younger Brother) ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಗುವಿನ ಹೆಸರು ಶುಭದೀಪ್ ಎಂದಾಗಿದ್ದು, ಈ ವಿಡಿಯೋದಲ್ಲಿ ಶುಭದೀಪ್ ಪಗಡಿ ಧರಿಸಿ ತನ್ನ ಹೆತ್ತವೊಂದಿಗೆ ಕುಳಿತಿದ್ದಾನೆ.

ಸಿದ್ದು ಮೂಸೇವಾಲಾನ ತಂದೆ ಬಲ್ಕೂರ್ ಸಿಂಗ್ (Balkaur Singh) ಮತ್ತು ಅವರ ಪತ್ನಿ ಚರಣ್ ಕೌರ್ (Charan Kaur) ಅವರಿಗೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಪುತ್ರ ಸಂತಾನ ಪ್ರಾಪ್ತಿಯಾಗಿತ್ತು. ಈ ವಿಡಿಯೋದಲ್ಲಿ ಶುಭದೀಪ್ ಗೆ (Shubhdeep) ಚಮಚದಲ್ಲಿ ಹಾಲುಣಿಸುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋದಲ್ಲಿ ವೈದ್ಯರ ತಂಡವೊಂದು ಮಗುವನ್ನು ಹಿಡಿದುಕೊಂಡಿರುವುದು ಮತ್ತು ಮಗುವಿನ ತಂದೆ ಬಲ್ಕೂರ್ ಸಿಂಗ್ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ.

ಈ ಹಿಂದೆ, ತಮಗೆ ಮಗುವಾಗುತ್ತಿರುವ ವಿಷಯವನ್ನು ಹೇಳಿಕೊಂಡಿದ್ದರು. ಇದೀಗ ತಮ್ಮ ಕುಟುಂಬದ ಛೋಟಾ ಚಾಂಪಿಯನ್ ಫೊಟೋವನ್ನು ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡಿರುವ ಬಳ್ಕೂರ್ ಸಿಂಗ್ ಅದರೊಂದಿಗೆ ಪಂಜಾಬಿ ಭಾಷೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʼಶುಭ್ ದಿಪ್ ನ ಕೋಟ್ಯಂತರ ಫಾಲೋವರ್ಸ್ ಹಾಗೂ ಅಭಿಮಾನಿಗಳ ಶುಭಕಾಮನೆಗಳಿಗೆ ಧನ್ಯವಾದಗಳು, ಅಕಲ್ ಪುರಾಖ್ ಶುಭ್ ನ ಚಿಕ್ಕ ತಮ್ಮನನ್ನು ನಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದಾರೆ. ನನ್ನ ಪತ್ನಿಯ ಆರೋಗ್ಯ ಚೆನ್ನಾಗಿದೆ, ದೇವರ ಆಶೀರ್ವಾದಕ್ಕಾಗಿ ನಾವು ಋಣಿಗಳಾಗಿದ್ದೇವೆ. ನಿಮ್ಮೆಲ್ಲರ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಆಭಾರಿಗಳಾಗಿದ್ದೇವೆ..’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌

ಮೂಸೇವಾಲ ಅವರ ನಿಜವಾದ ಹೆಸರು ಶುಭದೀಪ್ ಸಿಂಗ್ ಸಿದ್ದು ಎಂದಾಗಿತ್ತು. ಅದನ್ನೇ ಬಲ್ಕೂರ್ ಅವರು ನಮೂದಿಸಿದ್ದಾರೆ. ಹೆಮ್ಮೆಯ ತಂದೆಯಾಗಿ ಈ ಚಿತ್ರವನ್ನು ಅವರು ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಂದಿಗೆ ಅವರು ಹಂಚಿಕೊಂಡಿದ್ದಾರೆ.

ತನ್ನ ಪತ್ನಿ ಆಕೆಯ 58ನೇ ವರ್ಷದಲ್ಲಿ ಐವಿಎಫ್ (IVF) ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಸಿಂಗ್ ಅವರು ಕೆಲ ದಿನಗಳ ಹಿಂದೆ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಮತ್ತು ತನ್ನ ಪತ್ನಿ ಗರ್ಭಿಣಿಯಾಗಿರುವ ವಿಚಾರಕ್ಕೆ ಸಂಬಂಧಿಸಿಂತೆ ಹರಡುತ್ತಿರುವ ಗಾಳಿಸುದ್ದಿಗಳಿಗೆ ಕಿವಿಗೊಡದಂತೆ ಅವರು ಮನವಿಯನ್ನೂ ಸಹ ಮಾಡಿಕೊಂಡಿದ್ದರು.

“ನಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಹಲವಾರು ಗಾಳಿಸುದ್ದಿಗಳು ಹಬ್ಬುತ್ತಿವೆ. ಆದರೆ ಅವುಗಳನ್ನು ದಯವಿಟ್ಟು ನಂಬಬೇಡಿ. ಹಾಗೇನಾದರೂ ಸುದ್ದಿಗಳಿದ್ದಲ್ಲಿ ನಾವೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ” ಎಂದು ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು.

ಪಂಜಾಬ್ ಮೂಲದ ಜನಪ್ರಿಯ ರ್ಯಾಪರ್ ಸಿದ್ದು ಮೂಸೇವಾಲಾ 2022ರ ಮೇ 29ರಂದು, ಪಂಜಾಬ್ ನ ಮಾನ್ಸ ಜಿಲ್ಲೆಯಲ್ಲಿ ಆರು ಜನ ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾಗಿದ್ದರು. ಮೂಸೇವಾಲಾ ಅವರಿಗಿದ್ದ ಭದ್ರತಾ ವ್ಯವಸ್ಥೆಯನ್ನು ಕಡಿಮೆಗೊಳಿಸಿದ ಒಂದು ದಿನದ ಬಳಿಕ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.