Thursday, 14th November 2024

Kidambi Srikanth: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತೀಯ ಶಟ್ಲರ್‌ ಕಿದಂಬಿ ಶ್ರೀಕಾಂತ್‌

ಹೈದರಾಬಾದ್‌: ಭಾರತೀಯ ಶಟ್ಲರ್‌ ಕಿದಂಬಿ ಶ್ರೀಕಾಂತ್‌(Kidambi Srikanth) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫ್ಯಾಷನ್ ಡಿಸೈನರ್ ಆಗಿರುವ ಶ್ರಾವ್ಯ ವರ್ಮಾ(Shravya Varma) ಅವರನ್ನು ಮದುವೆಯಾಗಿದ್ದಾರೆ. ಶ್ರಾವ್ಯ ಅವರು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರ ಸೊಸೆಯಾಗಿದ್ದಾರೆ.

ಭಾನುವಾರ ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು, ಆಪ್ತರು ಮತ್ತು ಅನೇಕ ಗಣ್ಯರು ಭಾಗವಹಿಸಿದ್ದರು. ನವ ದಂಪತಿಗೆ ಆಶೀರ್ವದಿಸಿದರು. ಬಹುಭಾಷ ನಟಿಯಾಗಿ ರಶ್ಮಿಕಾ ಮಂದಣ್ಣ, ನಟ ವಿಜಯ್ ದೇವರಕೊಂಡ, ಕೀರ್ತಿ ಸುರೇಶ್‌ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ AUS vs PAK: ಆಸ್ಟ್ರೇಲಿಯಾಕ್ಕೆ ತವರಿನಲ್ಲೇ ಸರಣಿ ಸೋಲುಣಿಸಿದ ಪಾಕಿಸ್ತಾನ

ಶ್ರಾವ್ಯ ವರ್ಮಾ ಮತ್ತು ಶ್ರೀಕಾಂತ್ ಕಳೆದ ಕೆಳ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೇ ವರ್ಷ ಆಗಸ್ಟ್‌ನಲ್ಲಿ ಇಬ್ಬರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಹಸೆಮಣೆ ಏರಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಕಾಂತ್‌ಗೆ ಬ್ಯಾಡ್ಮಿಂಟನ್‌ ಆಟಗಾರರಾದ ಪಿ.ಕಶ್ಯಪ್‌, ಸೈನಾ ನೆಹ್ವಾಲ್, ಸಾಯಿ ಪ್ರಣೀತ್‌, ಸಮೀರ್‌ ವರ್ಮಾ, ಪಿ.ಪಿ. ಸಿಂಧು ಸೇರಿ ಹಲವರು ಶುಭ ಹಾರೈಸಿದ್ದಾರೆ.

‘ಪುಷ್ಪ’-2 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅಲ್ಲು ಅರ್ಜುನ್ ಜತೆ ಮತ್ತೊಮ್ಮೆ ರಶ್ಮಿಕಾ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ‘ಕಪಲ್ ಸಾಂಗ್‌’ನಲ್ಲಿ ಇವರಿಬ್ಬರನ್ನು ಕೆಮೆಸ್ಟ್ರಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಡಿಸೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ರಶ್ಮಿಕಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.