Tuesday, 3rd December 2024

Viral News: ಬೀದಿ ನಾಯಿಯ ಮೇಲೇ ಅತ್ಯಾಚಾರ ಎಸಗಲು ಯತ್ನಿಸಿದ ವಿಕೃತ!

viral news

ಚಿಕ್ಕಮಗಳೂರು: ವಿಲಕ್ಷಣವಾಗಿ ವರ್ತಿಸುತ್ತಿದ್ದ ಯುವಕನೊಬ್ಬ ಬೀದಿ ನಾಯಿಯ (street dog) ಮೇಲೆ ಅತ್ಯಾಚಾರಕ್ಕೆ (Physical Abuse) ಯತ್ನಿಸಿದ್ದು ಬಯಲಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ (Viral News) ಸೆರೆಯಾಗಿದ್ದು, ಈತನ ವಿರುದ್ಧ ಚಿಕ್ಕಮಗಳೂರಿನ (Chikkamagaluru news) ಕೊಪ್ಪದಲ್ಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೀದಿ ನಾಯಿಗಳ ಜೊತೆ ಯುವಕ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಸಿ ಕ್ಯಾಮರಾ ದೃಶ್ಯದಲ್ಲಿ ಕಂಡುಬಂದಿದೆ. ಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ‌ಘಟನೆ ನಡೆದಿದ್ದು, ಸ್ವಯಂಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಬೀದಿ ನಾಯಿ ಜತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ವಿಡಿಯೋ ಜಯಪುರ‌, ಕೊಪ್ಪ ಭಾಗದಲ್ಲಿ ವೈರಲ್ ಆಗುತ್ತಿದೆ.

ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್​ಸ್ಟೇಬಲ್ ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ನವೆಂಬರ್ 9ರಂದು ಕೃತ್ಯದ ಬಗ್ಗೆ ವಿಡಿಯೋ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯದ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಕಾನ್​ಸ್ಟೇಬಲ್ ದೂರು ನೀಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಜಯಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ಗುಪ್ತ ವರದಿಗಾಗಿ ಕರ್ತವ್ಯದಲ್ಲಿರುವಾಗ ಬಾತ್ಮೀದಾರರುಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬ ನಾಯಿಯನ್ನು ಹಿಡಿದುಕೊಂಡು ಅದರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಬೀದಿ ನಾಯಿಗೆ ಉಪದ್ರವ ಮಾಡುವುದರ ಜೊತೆಗೆ ಪ್ರಾಣಿ ಹಿಂಸೆ ಮಾಡಿರುವುದು ನಿಲ್ದಾಣದಲ್ಲಿರುವ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಅಂಗಡಿ ಮಾಲೀಕರ ಮೊಬೈಲ್​ನಿಂದ ಪಡೆದು ಪರಿಶೀಲಿಸಿದ್ದೇನೆ ಎಂದು ಪೊಲೀಸ್ ಕಾನ್​ಸ್ಟೇಬಲ್ ತಿಳಿಸಿದ್ದಾರೆ.

ವಿಡಿಯೋ ಪರಿಶೀಲಿಸಿದಾಗ ಸೆಪ್ಟೆಂಬರ್‌ 18ರಂದು ಬೆಳಗಿನ ಜಾವ ಸುಮಾರು 4.00 ಗಂಟೆ ಸಮಯದಲ್ಲಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಅವೇಳೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಯನ್ನು ಹಿಡಿದುಕೊಂಡು ಆದರೊಂದಿಗೆ ಅಸಭ್ಯವಾಗಿ ವರ್ತಿಸಿ ಪ್ರಾಣಿಗೆ ಹಿಂಸೆ ಹಾಗೂ ಉಪದ್ರವ ನೀಡುತ್ತಿರುವುದು ಕಂಡು ಬಂದಿದೆ. ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ವಿಳಾಸದ ಬಗ್ಗೆ ಪರಿಶೀಲನೆ ನಡೆಸಿದಾಗ ಆತ ಕಟ್ಟಿ ಮನೆ ವಾಸಿ ಶಿವರಾಜ ಎಂದು ದೃಢಪಟ್ಟಿರುತ್ತದೆ ಎಂದು ಪೊಲೀಸ್ ಕಾನ್​​ಸ್ಟೇಬಲ್ ತಿಳಿಸಿಹೇಳಿದ್ದಾರೆ.

ಇದನ್ನೂ ಓದಿ: Viral Video: ಭಾಷಣಕ್ಕೆ ಬಿಜೆಪಿ ಪ್ರಾಂಪ್ಟರ್! ಸಿಎಂ ಏಕನಾಥ್ ಶಿಂಧೆ ವಿಡಿಯೋ ವೈರಲ್