Sunday, 24th November 2024

IPL 2025: ಆರ್‌ಸಿಬಿಗೆ ಮುಂದಿನ ನಾಯಕ ಯಾರು? ನಾಯಕತ್ವದ ರೇಸ್‌ನಲ್ಲಿದ್ದಾರೆ ಈ ಐವರು!

IPL 2025: `Virat Kohli to Quinton De Cock'-5 Captaincy Contenders For RCB Ahead Of IPL 2025

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇತಿಹಾಸದಲ್ಲಿಯೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇಲ್ಲಿಯವರೆಗೂ ಒಮ್ಮೆಯೂ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅಂದ ಹಾಗೆ ಮುಂಬರುವ 2025ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲಲ್ಲಿದೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂದ ಹಾಗೆ ಕ್ರಿಕೆಟ್‌ ಅಭಿಮಾನಿಗಳ ಚಿತ್ತ ನವೆಂಬರ್‌ 24 ಮತ್ತು 25ರಂದು ನಡೆಯುವ ಮೆಗಾ ಹರಾಜಿನತ್ತ ನೆಟ್ಟಿದೆ. ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ ಹಾಗೂ ಯಶ್‌ ದಯಾಳ್‌ ಸೇರಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಬೆಂಗಳೂರು ಫ್ರಾಂಚೈಸಿ, ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್‌ ಡು ಪ್ಲೆಸಿಸ್‌ ಸೇರಿದಂತೆ ಇನ್ನುಳಿದ ಎಲ್ಲಾ ಆಟಗಾರರನ್ನು ಕೈ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ. ಅಂದ ಹಾಗೆ 2025ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿಯ ನಾಯಕತ್ವದ ರೇಸ್‌ನಲ್ಲಿರುವ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2025: ಕೆಕೆಆರ್‌ಗೆ ರಿಂಕು ಸಿಂಗ್‌ ನಾಯಕ?

ಆರ್‌ಸಿಬಿಯ ನಾಯಕತ್ವದ ರೇಸ್‌ನಲ್ಲಿರುವ ಐವರು ಆಟಗಾರರು

  1. ವಿರಾಟ್‌ ಕೊಹ್ಲಿ

2021ರಲ್ಲಿ ನಾಯಕತ್ವದ ಜವಾಬ್ದಾರಿಯಿಂದ ಕೆಳಗೆ ಇಳಿದಿದ್ದ ವಿರಾಟ್‌ ಕೊಹ್ಲಿ, ಮುಂಬರುವ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಾಯಕರಾಗಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಆರ್‌ಸಿಬಿ ನಾಯಕತ್ವಕ್ಕೆ ಕಮ್‌ಬ್ಯಾಕ್‌ ಮಾಡುವ ಸಾಮರ್ಥ್ಯ ಕಿಂಗ್‌ ಕೊಹ್ಲಿಗೆ ಇದೆ. ಅಂದ ಹಾಗೆ ತಮ್ಮ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದು ಕೊಡುವ ಆಸೆ ವಿರಾಟ್‌ ಕೊಹ್ಲಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ನಾಯಕನಾದರೂ ಅಚ್ಚರಿ ಇಲ್ಲ.

  1. ಶ್ರೇಯಸ್‌ ಅಯ್ಯರ್‌

ಹಾಲಿ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಿಂದ ನಾಯಕ ಶ್ರೇಯಸ್‌ ಅಯ್ಯರ್‌ ಅಚ್ಚರಿ ರೀತಿಯಲ್ಲಿ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕನ ಹುಡುಕಾಟದಲ್ಲಿರುವ ಫ್ರಾಂಚೈಸಿಗಳು ಬಲಗೈ ಬ್ಯಾಟ್ಸ್‌ಮನ್‌ ಮೇಲೆ ಕಣ್ಣಿಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕೂಡ ಅವರನ್ನು ಖರೀದಿಸಿ ನಾಯಕತ್ವ ನೀಡುವ ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿರಬಹುದು.

IPL 2025: ʻಜೆರಾಲ್ಡ್‌ ಕೊಯೆಡ್ಜಿಗೆ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತʼ-ಇದಕ್ಕೆ ಕಾರಣ ತಿಳಿಸಿದ ಡಿಕೆ!

  1. ರಿಷಭ್‌ ಪಂತ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ರಿಲೀಸ್‌ ಆಗಿರುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಕೂಡ ಮೆಗಾ ಹರಾಜಿನಲ್ಲಿ ಬಹುಬೇಡಿಕೆಯ ಆಟಗಾರ. ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಪಂತ್‌ ಅವರನ್ನು ಖರೀದಿಸಿಲ್ಲವಾದರೆ, ಈ ಅವಕಾಶವನ್ನು ಬೇರೆ ಫ್ರಾಂಚೈಸಿಗಳು ಸದುಪಯೋಗಪಡಿಸಿಕೊಳ್ಳಬಹುದು. ಅದರಂತೆ ಆರ್‌ಸಿಬಿ ಪಂತ್‌ ಅವರನ್ನು ಖರೀದಿಸಿ ನಾಯಕತ್ವ ನೀಡಬಹುದು.

  1. ಕೆಎಲ್‌ ರಾಹುಲ್‌

ಕನ್ನಡಿಗ ಕೆಎಲ್‌ ರಾಹುಲ್‌ ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮರಳಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಬಲಗೈ ಬ್ಯಾಟ್ಸ್‌ಮನ್‌ ಬಿಡುಗಡೆಯಾಗಿದ್ದಾರೆ. ಒಂದು ವೇಳೆ ಕೆಎಲ್‌ ರಾಹುಲ್‌ ಅವರನ್ನು ಆರ್‌ಸಿಬಿ ಖರೀದಿಸಿದರೆ, ಸ್ಥಳೀಯ ಆಟಗಾರನಿಗೆ ನಾಯಕತ್ವ ನೀಡಬಹುದು.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮುನಾಫ್‌ ಪಟೇಲ್‌ ಬೌಲಿಂಗ್‌ ಕೋಚ್‌!

  1. ಕ್ವಿಂಟನ್‌ ಡಿ ಕಾಕ್‌

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೇ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಕ್ವಿಂಟನ್‌ ಡಿ ಕಾಕ್‌ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಆಟಗಾರರಾಗಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌, ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಹಲವು ಫ್ರಾಂಚೈಸಿಗಳ ಪರ ಅವರು ಆಡಿದ್ದಾರೆ. ಇದೀಗ ಅವರನ್ನು ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಡಿ ಕಾಕ್‌ ಆರ್‌ಸಿಬಿ ಪರ ಈ ಹಿಂದೆ ಆಡಿದ್ದರು.