ಒಂದೊಳ್ಳೆ ಮಾತು
ರೂಪಾ ಗುರುರಾಜ್
ಕುಂಡಲಿನೀ ನಾಮ ಪರಾಶಕ್ತಿಃ ಪ್ರತಿಷ್ಠಿತಾ’ ಆದಿಶಕ್ತಿ ಅಥವ ಪರಾಶಕ್ತಿಯು ಕುಂಡಲಿನಿ ಎಂಬ ಹೆಸರಿನಿಂದ (ಸಕಲ ಜೀವಿಗಳಲ್ಲೂ) ಪ್ರತಿಷ್ಠಿತಳಾಗಿದ್ದಾಳೆ! ಈ ಕುಂಡಲಿನಿಯು ನಮ್ಮಲ್ಲಿ ಎಲ್ಲಿ ಇದ್ದಾಳೆ ? ಪರಾಶಕ್ತಿ ಅಥವ ಕುಂಡಲಿನಿ ಶಕ್ತಿಯು ನಮ್ಮಲ್ಲಿ ನಮ್ಮ ಬೆನ್ನು
ಮೂಳೆಯ ತಳಭಾಗದಲ್ಲಿ ಜನನೇಂದ್ರಿ ಯಕ್ಕೂ ಗುದದ್ವಾರಕ್ಕೂ ಮಧ್ಯ ಭಾಗದಲ್ಲಿ ಇರುವ ‘ಮೂಲಾಧಾರ ಚಕ್ರ’ ಪ್ರದೇಶ ದಲ್ಲಿ (ಶಕ್ತಿ ರೂಪದಲ್ಲಿ) ಹಾವಿ ನಂತೆ ಸುರು ಳಿಸುತ್ತಿ ತನ್ನ ತಲೆಯನ್ನು (ಹೆಡೆಯನ್ನು) ಬ್ರಹ್ಮರಂದ್ರಕ್ಕೆ ಅಡ್ಡಲಾಗಿ ಇಟ್ಟು ನಿದ್ರಿಸುತ್ತಿ ರುತ್ತಾಳೆ ಎಂದು ಯೋಗಿಗಳು ಹೇಳುತ್ತಾರೆ.
ಮೇಲೆ ತಿಳಿಸಿದಂತೆ ಕುಂಡಲಿನಿ ಶಕ್ತಿಯು ಸರ್ಪದಂತೆ ಶಕ್ತಿಯ ರೂಪದಲ್ಲಿ ನಮ್ಮ ದೇಹದಲ್ಲಿ ಇರುತ್ತದೆ. ನಾವೆಲ್ಲರೂ ನಾಗರಕಲ್ಲುಗಳನ್ನು ಪೂಜಿಸುತ್ತೇವೆ. ಅದು ಕೇವಲ ಸರ್ಪಗಳ ಆರಾಧನೆಯಲ್ಲ ನಮ್ಮೊಳಗೆ ಇರುವ ಶಕ್ತಿಯ ಆರಾಧನೆಯೂ ಹೌದು. ಜೋಡಿ ಸರ್ಪಗಳ ನಾಗರಕಲ್ಲು ನಮ್ಮ ಉಸಿರಾಟದ ಹಾದಿಗಳಾದ ಬಲಮೂಗಿನ ಹೊಳ್ಳೆ, ಎಡ ಮೂಗಿನ ಹೊಳ್ಳೆ ಮತ್ತು ಇಡ ಮತ್ತು ಪಿಂಗಳ ನಾಡಿಗಳನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಏಳು ಹೆಡೆಗಳ ಒಂದು ಸರ್ಪ ಸುಷುಮ್ನಾ ನಾಡಿಯನ್ನು (ದೇಹದ ತಳಭಾಗದಿಂದ ಬೆನ್ನಿನ ಮೂಳೆಯ ಮೂಲಕ ಮೆದುಳಿನ ವರೆಗೂ ಹೋಗಿರುವ ಗುಪ್ತ ನಾಡಿ) ಪ್ರತಿನಿಽಸುತ್ತದೆ. ಆದರ ಏಳು ಹೆಡೆಗಳು ನಮ್ಮ ದೇಹ ದಲ್ಲಿರುವ ಸಪ್ತ ಚಕ್ರಗಳೆಂಬ ಶಕ್ತಿ ಕೇಂದ್ರಗಳನ್ನು ಪ್ರತಿನಿಧಿಸುತ್ತದೆ. ಈ ಏಳುಹೆಡೆಗಳ ಸರ್ಪವೇ ಕುಂಡಲಿನಿ ಶಕ್ತಿಯೂ ಆಗಿದೆ. ಇದನ್ನು ಮನಸ್ಸಿಗೆ ತಂದುಕೊಂಡು ಪ್ರಾಣಾಯಾಮ, ಯೋಗ ಸಾಧನೆಗಳನ್ನು ಮಾಡಿದಾಗ ಇದು ಹೆಚ್ಚು ಪರಿಣಾಮ ಕಾರಿಯಾಗಿ ಪ್ರಭಾವ ಬೀರುತ್ತದೆ ಎನ್ನುತ್ತಾರೆ ಹಿರಿಯರು. ತ್ರಿವೇಣಿ ಸಂಗಮಗಳಲ್ಲಿ (ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ) ಮಾಡುವ ಪುಣ್ಯ ಸ್ನಾನವೂ ಇದೇ ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳನ್ನು ಪ್ರತಿನಿಧಿಸುತ್ತದೆ.
ಅಕ್ಷರಗಳನ್ನು ತಿದ್ದಿ eನವನ್ನು ಪಡೆದುಕೊಂಡಂತೆ, ಮೂರ್ತಿಗಳನ್ನು ಆರಾಧಿಸಿ ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಿಕೊಳ್ಳುವುದೇ ಎಲ್ಲ ದೇವತಾ ಆರಾಧನೆಗಳ ಪುಣ್ಯ ತೀರ್ಥ ಸ್ನಾನಗಳ ಹಿಂದಿರುವ ರಹಸ್ಯ. ನಮ್ಮ ಸನಾತನ ಧರ್ಮದ ಪ್ರತಿ ಆಚರಣೆಗೂ ಇಂತದ್ದೊಂದು ಹಿನ್ನೆಲೆ ಇದ್ದೇ ಇರುತ್ತದೆ. ಅದನ್ನು ಅರಿತು ಪಾಲಿಸಿದಾಗ ನಾವು ಪ್ರಕೃತಿಗೆ ಹೆಚ್ಚು ಹತ್ತಿರವಾಗುತ್ತೇವೆ. ಮನೆಯಲ್ಲಿ ನೆಲದ ಮೇಲೆ ಮಣೆ ಯ ಹಾಕಿಕೊಂಡು ಕುಳಿತು ಊಟ ಮಾಡುವುದು, ನಮ್ಮ ದೇಹದ ಶಕ್ತಿಯಲ್ಲ ಭೂಮಿಗೆ ಇಳಿದು ಹೋಗದಿರಲಿ ಎಂದು. ಹೆಣ್ಣು ಮಕ್ಕಳು ತಡುವ ಕೈಬಳೆ, ಕಾಲುಂಗುರ, ಕರಿ ಮಣಿ ಸರ ಇವೆಲ್ಲವೂ ಅವರ ದೇಹದ ಶಕ್ತಿಯನ್ನು ದೇಹದ ಉಳಿಯು ವಂತೆ ಮಾಡುವಲ್ಲಿ ಸಹಕರಿಸುತ್ತವೆ. ಜೊತೆಗೆ ಕರಿಮಣಿ ಮೇಲಿಂದ ಬಿದ್ದ ನೀರು, ಹೃದಯಕ್ಕೆ ಒಳ್ಳೆಯದು ಎಂದು ಕೂಡ ಹೇಳುತ್ತಾರೆ. ಇನ್ನು ಕಾಲುಂಗುರ ಹಾಕಿದ ಬೆರಳಿನ ನರ ಹೆಣ್ಣು ಮಕ್ಕಳ ಗರ್ಭ ಕೋಶವನ್ನು ಸುಸ್ಥಿತಿಯಲ್ಲಿಡಲು ಸಹಾಯಮಾಡುತ್ತದೆ ಎನ್ನುತ್ತಾರೆ.
ನಮ್ಮ ಮಾಂಗಲ್ಯದಲ್ಲಿರುವ ಹವಳದ ಮಣಿಗಳು ಕೂಡ ಅವುಗಳ ಮೇಲೆ ಬಿದ್ದ ನೀರು, ಚರ್ಮಕ್ಕೆ ಒಳ್ಳೆಯದು ಜೊತೆಗೆ ನಾಡಿಮಿಡಿತ ವನ್ನು
ಉದ್ವೇಗಕ್ಕೊಳಗಾಗದಂತೆ ನೋಡಿಕೊಳ್ಳುತ್ತದೆ ಎನ್ನುತ್ತಾರೆ. ಮನೆಯ ಮುಂದಿನ ರಂಗೋಲಿ ಮುಂಚೆ ಅಕ್ಕಿಹಿಟ್ಟಿನಿಂದ ಹಾಕುತ್ತಿದ್ದರು, ಇದರಿಂದ ಮನೆಯ ಸುತ್ತಲೂ ಇರುವ ಪಕ್ಷಿಗಳಿಗೆ ಆಹಾರ ಸಿಗುತ್ತದೆ ಎನ್ನುವ ಒಂದು ಯೋಚನೆ. ಜೊತೆಗೆ ರಂಗೋಲಿ ಪುಡಿ ಇಂದ ಹಾಕಿದಂತಹ ರಂಗೋಲಿ ಕ್ರಿಮಿ ಕೀಟಗಳನ್ನು ದೂರವಿಡುತ್ತದೆ ಎನ್ನುವ ನಂಬಿಕೆ ಕೂಡ. ಊಟಕ್ಕೆ ಮುನ್ನ ಪ್ರತಿದಿನ ಮನೆಯನ್ನು ಕಸಗುಡಿಸಿ ನೆಲ ಒರೆಸಿ ಊಟಕ್ಕೆ ಕೂರುವುದರಿಂದ ಅಲ್ಲಿದ್ದ ಹುಳ ಹುಪ್ಪಟ್ಟೆಗಳನ್ನು ಗುಡಿಸಿ ಹಾಕಿ ಸ್ವಚ್ಛವಾದ ನೆಲದ ಮೇಲೆ ಊಟಕ್ಕೆ ಕೂರುವುದು ಹಿಂದಿನವರ ಯೋಚನೆ ಆಗಿತ್ತು.
ನಾವು ಸರಿಯಾಗಿ ಗಮನಿಸಿ ನೋಡಿದರೆ ಪ್ರತಿ ಆಚರಣೆಗೂ ಕೂಡ ಅದರದ್ದೇ ಆದ ಹಿನ್ನೆಲೆ ಇದೆ. ಕಾಲ ಪರಿಸ್ಥಿತಿಗಳು ಬದಲಾದಂತೆ ಕೆಲವು ಆಚರಣೆಗಳು ಪ್ರಸ್ತುತತೆಯನ್ನು ಕಳೆದುಕೊಂಡಿರಬಹುದು ಆದರೆ ಮತ್ತೆ ಕೆಲವು ಎಂದಿಗೂ ಕೂಡ ನಮ್ಮ ಒಳಿತಿಗಾಗಿ ಆಯೋಜಿಸಿದಂತವು.
ಇವುಗಳನ್ನ ಅರಿತು ಆಚರಿಸುವ ಮನಸ್ಸು ನಮಗಿರಬೇಕಷ್ಟೆ.