Thursday, 31st October 2024

ನಗರ, ಗ್ರಾಮೀಣ ಕಾಂಗ್ರೆಸ್ ಪಕ್ಷದಿಂದ ತಿಮ್ಮಾಪುರರಿಗೆ ಸನ್ಮಾನ

ಸಿಂಧನೂರು : ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಆರ್ .ವಿ ತಿಮ್ಮಾಪುರ್ ಅವರಿಗೆ ಭಾನುವಾರ ಸನ್ಮಾನಿಸಲಾಯಿತು.

ಈ ವೇಳೆ ತಿಮ್ಮಪೂರ್ ಮಾತನಾಡಿ, ಮುಂದಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಾರೆ, ಹಣ ವಂಚನೆಗಳಿಂದ ಬಿಜೆಪಿಯವರು ಉಪಚುನಾವಣೆಗಳಲ್ಲಿ ಗೆದ್ದಿರಬಹುದು ಆದರೆ ಈ ಬಾರಿ ಮತದಾರರು ನಿಮಗೆ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದರು.

ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಯಾವ ವಿಷಯವು ಗೊತ್ತಿಲ್ಲ. ಅಂತವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಾರೆ ಮೊದಲು ಸರ್ಕಾರ ಉಳಿಸಿಕೊಳ್ಳಲು ಮುಂದಾಗಬೇಕು ಅದನ್ನು ಬಿಟ್ಟು ಮತ್ತೊಬ್ಬರಿಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ,ಉಪಾಧ್ಯಕ್ಷರು ಮುರ್ತುಜಾ ಹುಸೇನ್, ಮಾಜಿ ಅಧ್ಯಕ್ಷ ಜಾಫರ್ ಸಾಬ್ ಜಾಗೀರ್ದಾರ್ ನಗರ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ವಕೀಲ, ಶೇಖರಪ್ಪ ಗಿಣಿವಾರ, ಎಚ್. ಎನ್ ಬಡಿಗೇರ್, ಆಲಂ ಬಾಷಾ, ವೀರೇಶ ಶಿಳ್ಳಿ , ಅನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು