ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದು ಊರಿನಲ್ಲಿ ಒಬ್ಬ ಬಡ ಗುರುಗಳು ಇದ್ದರು. ಬಡತನದ ತಮ್ಮ ಶಿಷ್ಯರನ್ನು ಸಹ ಸಾಕುತ್ತಿದ್ದರು. ಕಷ್ಟದ ಸಮಯ ಮನೆಯಲ್ಲಿ ಶಿಷ್ಯರಿಗೆ ಒಂದು ಹೊತ್ತಿನ ಊಟಕ್ಕೂ ದುಸ್ತರವಾಗಿತ್ತು, ಒಂದಿಷ್ಟೂ ಅಡುಗೆಗೆ ಬಳಸಲಾಗುವ ಪದಾರ್ಥಗಳಿರಲಿಲ್ಲ.
ಗುರುಗಳು ಬಹಳ ನೋವಿನಿಂದ ದೇವರ ಮುಂದೆ ಕುಳಿತು ಭಗವದ್ಗೀತೆಯ. ‘ಅನನ್ಯಾಶ್ಚಿಂತಯಂತೋ ಮಾಮ್ ಯೇ ಜನಾಹ ಪರ್ಯು
ಪಾಸತೇ’ ಈ ಶ್ಲೋಕವನ್ನು ಭಾರವಾದ ಹೃದಯ ದಿಂದ ಓದುತ್ತಿದ್ದರು. ಅದೇ ಸಮಯಕ್ಕೆ ಅವರ ಪತ್ನಿ ಬಂದು, ನೋಡಿ ಮನೆಯಲ್ಲಿ ಒಂದು ಕಾಳು
ಅಕ್ಕಿ ಇಲ್ಲ. ದವಸಧಾನ್ಯಗಳೆಲ್ಲ ಖಾಲಿಯಾಗಿದೆ. ಹೇಗಾದರೂ ಇಂದು ನೀವು ಆಹಾರ ಸಾಮಗ್ರಿಗಳನ್ನು ತರಲೇಬೇಕು ಎಂದು ಅವರನ್ನು ಅಂಗಡಿ ಗೆ ಹೊರಡಿಸಿದರು.
ಗುರುಗಳಿಗೋ ಕೆಟ್ಟ ಮುಜುಗರ ಯಾರನ್ನು ಎಂದು ಕೈ ನೀಡಿ ಬೇಡಿದವರಲ್ಲ ಬಾಯಿ ಬಿಟ್ಟು ಕೇಳಿದವರಲ್ಲ. ಈಗ ನಾನು ಕೈಚಾಚಿ ಕೇಳುವಂಥ ಪರಿಸ್ಥಿತಿಯನ್ನು ತಂದುಬಿಟ್ಟೆ ಯಲ್ಲ ಎಂದು, ಓದುತ್ತಿದ್ದ ಭಗವದ್ಗೀತೆಯ ಶ್ಲೋಕದ ಮೇಲೆ ಕೆಂಪು ಇಂಕಿನ ಲೇಖನಿಯಿಂದ ಗೀಚಿದಂತೆ ಕಾಟು ಹೊಡೆದು, ಎದ್ದು ಪೇಟೆ ಕಡೆಗೆ ಹೊರಟರು.
ಅಂಗಡಿ ಬೀದಿಗೆ ಹೋದಾಗ ಅಂಗಡಿಯವನು ಗೌರವದಿಂದ ಕೂಡಿಸಿ ಮಾತನಾಡಿಸಿದನು. ಆದರೆ ಇವರು ಏನನ್ನು ಕೇಳದೆ ದುಃಖದಿಂದ ಅಲ್ಲಿಂದ
ಎದ್ದು ಹೊರಟುಬಿಟ್ಟರು. ಊರೆಲ್ಲ ಅಲೆದು ಮಧ್ಯಾಹ್ನ ತೀರಿದ ಮೇಲೆ ಅದೇ ದುಃಖದಲ್ಲಿ ಮನೆಯ ಕಡೆಗೆ ಹೊರಟಾಗ ಮನೆಯ ಗತಿ
ಏನಾಗಿದೆ ಯೋ ಎಂದು ಚಿಂತೆಯಾಯಿತು. ಮನೆ ಹತ್ತಿರ ಬರುತ್ತಿದ್ದಂತೆ, ಘಮ ಘಮ ಅಡುಗೆಯ ವಾಸನೆ ಬರುತ್ತಿತ್ತು. ನಮ್ಮ ಮನೆಯಿಂದ ಅಡುಗೆಯ ವಾಸನೆ, ಅವರಿಗೆ ಅನುಮಾನ ಬಂತು.
ಮನೆಯ ಹೊಸಿಲು ದಾಟಬೇಕು,ಅದೇ ವೇಳೆಗೆ ಅವರ ಹೆಂಡತಿ ಹೊರಗಡೆ ಬಂದು, ‘ಏನ್ರಿ ಇಷ್ಟು ಹೊತ್ತು ಎಲ್ಲಿ ಹೋಗಿದ್ದೀರಿ, ಆಗಲೇ ಮ
ಕ್ಕಳಿಗೆ ಊಟ ಮುಗಿಯಿತು. ನೀವು ಆ ಹುಡುಗನ ಕೈಯಲ್ಲಿ ಸಾಮಾನನ್ನು ಕಳುಹಿಸಿದ್ದೀರಲ್ಲ ತಕ್ಷಣ ಅಡಿಗೆ ಮಾಡಿದೆ ಎಂದರು. ಅಲ್ಲ ಅದೇನ ಆರು
ತಿಂಗಳಿಗೆ ಆಗುವಷ್ಟು ಕಳುಹಿಸಿದ್ದೀರಲ್ಲ.’ ಎಂದಾಗ, ‘ಯಾರು? ಯಾವ ಹುಡುಗ? ಯಾವ ಸಾಮಾನು’ ಎಂದು ಕೇಳುತ್ತಿದ್ದರೆ, ಅವ್ಯಾವುದನ್ನೂ
ಕಿವಿ ಮೇಲೆ ಹಾಕಿಕೊಳ್ಳದೇ, ‘ನಿಮ್ಮನ್ನು ಎಷ್ಟು ಮೃದು ಸ್ವಭಾವದವರು, ಯಾರನ್ನು ನೋಯಿಸುವುದಿಲ್ಲ ಎಂದುಕೊಂಡಿದ್ದೆ.
ಆದರೆ ಪಾಪ, ಆ ಸಣ್ಣ ಹುಡುಗನಿಗೆ ಎಷ್ಟು ಕಠಿಣವಾದ ಶಿಕ್ಷೆ ಕೊಟ್ಟಿದ್ದೀರಿ? ಹುಡುಗನ ಬಾಯಿಂದ ರಕ್ತ ಬರುತ್ತಿತ್ತು, ಅವನ ನಾಲಗೆ ಮೇಲೆ ಗೀರಿದ ಗಾಯವಾಗಿತ್ತು. ಏನಾಯಿತು ಎಂದು ಕೇಳಿದ್ದಕ್ಕೆ, ಅಮ್ಮ, ನಿಮ್ಮ ಯಜಮಾನರಿಗೆ ನನ್ನ ಮೇಲೆ ತುಂಬಾ ಕೋಪ ಬಂದುಬಿಟ್ಟಿದೆ ನಾನು ಯಾವತ್ತೋ, ಸಾಮಾನು ತಂದುಕೊಡುತ್ತೇನೆ ಎಂದಿದ್ದೆ. ಆದರೆ ಮರೆತುಬಿಟ್ಟಿದ್ದೆ ಅದಕ್ಕಾಗಿ ನಿಮ್ಮ ಯಜಮಾನರು ನನ್ನ ನಾಲಿಗೆಗೆ ಗಾಯಮಾಡಿದರು ಅಂದ. ಆ ಸಣ್ಣ ಹುಡುಗನಿಗೆ ನೀವು ಅಷ್ಟೊಂದು ಶಿಕ್ಷೆ ಕೊಡುವುದಾ?’ ಎಂದು ಕೇಳಿದರು. ತಕ್ಷಣ ಗುರುಗಳಿಗೆ
ಗೊತ್ತಾಯಿತು ಕೂಡಲೇ ದೇವರ ಕೋಣೆಗೆ ಹೋಗಿ ನಮಸ್ಕಾರ ಮಾಡಿ ದರು. ‘ಏ ಕೃಷ್ಣಾ ಯಾಕೋ ಹೀಗೆ ಮಾಡಿಕೊಂಡೆ?’
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ| ತೇಷಾಂ ನಿತ್ಯಾಭೀಯುಕ್ತಾನಾಂ, ಯೋಗಕ್ಷೇಮಂ ವಹಾಮ್ಯಹಮ|
(ಅನನ್ಯವಾದ ಮನಸ್ಸಿನಿಂದ ನನ್ನನ್ನು ಯಾರು ಚಿಂತನೆ ಮಾಡುತ್ತಾರೋ ಅಂತಹವರ ಯೋಗಕ್ಷೇಮಗಳನ್ನು ನಾನೇ ವಹಿಸಿಕೊಳ್ಳುತ್ತೇನೆ- ಭಗವದ್ಗೀತೆಯ ೯ನೇ ದಲ್ಲಿ ಬರುವ ಶ್ಲೋಕ.)
ಅಂತ ನೀನು ಹೇಳಿದ್ದು ನಿಜ. ನಿನ್ನ ಮೇಲೆ ನಂಬಿಕೆ ಇದ್ದರೆ ಸಾಕು. ಎಲ್ಲವನ್ನೂ, ಎಲ್ಲರನ್ನೂ ನೀನೇ ಸಲಹುವೆ. ‘ಶ್ರೀಹರಿಯ ನಂಬಿ ಕೆಟ್ಟವರಿಲ್ಲ’ ನಮ್ಮ ನಂಬಿಕೆ ಗಟ್ಟಿಯಾಗಿರಬೇಕು. ಮನದ ತುಂಬ ಕೃಷ್ಣನನ್ನೇ ತುಂಬಿಕೊಂಡು ಕಣ್ತುಂಬಿ ಕೊಂಡು ಅದೆಷ್ಟು ಹೊತ್ತು ಕುಳಿತಿದ್ದರೊ ಅವರಿಗೆ
ಗೊತ್ತಿಲ್ಲ. ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನ್ನಬಾರದೆ ಶ್ರೀಕೃಷ್ಣ ಎನಬಾರದೆ.