Tuesday, 19th November 2024

Abhishek Bachchan: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ನಡುವೆಯೇ ಮಗಳು ಆರಾಧ್ಯಾ ಬಗ್ಗೆ ಅಭಿಷೇಕ್ ಬಚ್ಚನ್ ಭಾವನಾತ್ಮಕ ಮಾತು!

ಮುಂಬೈ: ಐಶ್ವರ್ಯಾ ರೈ(Aishwarya Rai) ಮತ್ತು ಅಭಿಷೇಕ್ ಬಚ್ಚನ್(Abhishek Bachchan) ನಡುವಿನ ಸಂಬಂಧವು ಮೊದಲಿನಿಂದಲೂ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ. ಕೆಲ ದಿನಗಳಿಂದ ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಬಂದಿದ್ದವು.

ಅನಂತ್-ರಾಧಿಕಾ ಮದುವೆಗೆ ಐಶ್ವರ್ಯಾ-ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು. ಇದಾದ ನಂತರ ಒಂದೋ ಎರಡೋ ಬಾರಿ ಬಿಟ್ಟರೆ ಇವರಿಬ್ಬರೂ ಒಟ್ಟಿಗೆ ಕಾಣಿಸಲೇ ಇಲ್ಲ. ಅಷ್ಟೇ ಅಲ್ಲದೇ , ಐಶ್ವರ್ಯಾ ರೈ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹೌದು ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಹಲವು ತಿಂಗಳುಗಳಿಂದ ವದಂತಿಗಳು ಕೇಳಿಬರುತ್ತಲೇ ಇದೆ. ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಯಾಗಿ 17 ವರ್ಷಗಳಾಗಿವೆ. ದಂಪತಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ. ಅವರ ವಿಚ್ಛೇದನದ ವದಂತಿಗಳು ಈ ವರ್ಷದ ಜುಲೈ ಆರಂಭದಲ್ಲಿ ಮೊದಲಿಗೆ ಕೇಳಿಬಂತು. ಅನಂತ್ ಅಂಬಾನಿ ಅವರ ಮದುವೆಯಲ್ಲಿ ಬಚ್ಚನ್ ಕುಟುಂಬದ ಜೊತೆ ಬರದೆ ಐಶ್ವರ್ಯಾ ಅವರು ತಮ್ಮ ಮಗಳೊಂದಿಗೆ ಪ್ರತ್ಯೇಕವಾಗಿ ಬಂದಿದ್ದರು. ಇದಾದ ನಂತರ ಅಭಿಷೇಕ್ ವಿಚ್ಛೇದನಕ್ಕೆ ಸಂಬಂಧಿಸಿದ ಪೋಸ್ಟ್(Post) ಒಂದನ್ನು ಲೈಕ್ ಮಾಡುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದ್ದು, ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಹೆಚ್ಚಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಬಿಗ್ ಬಿ ಪುತ್ರ ಅಭಿಷೇಕ್ ತಮ್ಮ ಮಗಳು ಆರಾಧ್ಯಾ(Aaradhya) ಬಗ್ಗೆ ಭಾವನಾತ್ಮಕವಾಗಿ ಮಾತಾನಾಡಿದ್ದು, ಸದ್ಯ ಈ ಕುರಿತಾದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

‘ಐ ವಾಂಟ್ ಟು ಟಾಕ್’ ಸಿನೆಮಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಅಭಿಷೇಕ್ ತಮ್ಮ ಹೊಸ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ, ತಮ್ಮ ಮಗಳು ಈ ಚಿತ್ರಕ್ಕೆ ಹೇಗೆ ಸ್ಫೂರ್ತಿ ನೀಡಿದ್ದಾಳೆ ಎಂಬುದರ ಕುರಿತು ಹಂಚಿಕೊಂಡಿದ್ದಾರೆ. ಅರ್ಜುನ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಬಗ್ಗೆ ಮತ್ತು ಆ ಪಾತ್ರ ಎಷ್ಟು ಸವಾಲಿನದ್ದಾಗಿತ್ತು ಅನ್ನುವುದನ್ನು ವಿವರಿಸಿರುವ ಅಭಿಷೇಕ್, ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಬಂದಾಗ ತಮ್ಮ ಮಗಳು ಕಲಿಸಿದ ಪಾಠದಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ.

ಕರೋನಾ ವೇಳೆ ಮನೆಯಲ್ಲೇ ಇದ್ದ ಆರಾಧ್ಯ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಇದೇ ಸಮಯದಲ್ಲಿ ತಾವು ಓದಿದ ಪುಸ್ತಕವೊಂದರಲ್ಲಿ ಬರೆಯಲಾಗಿದ್ದ ‘ಪ್ರಪಂಚದ ಅತ್ಯಂತ ಧೈರ್ಯಶಾಲಿ ಪದವೆಂದರೆ ಅದು ಸಹಾಯ. ಏಕೆಂದರೆ ಸಹಾಯ ಕೇಳುವುದು ಸವಾಲುಗಳನ್ನು ಎದುರಿಸುವ ವಿಷಯಕ್ಕೆ ಸಂಬಂಧಿಸಿದ್ದು. ಸವಾಲುಗಳನ್ನು ಎದುರಿಸಲು ಸಹಾಯ ಪಡೆಯುವಿರೋ ಅಥವಾ ಸವಾಲುಗಳಿಂದ ನುಣುಚಿಕೊಳ್ಳಲು ಸಹಾಯ ಕೇಳುತ್ತಿರುವಿರೋ ಎಂಬುದು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ’ ಎಂಬ ಮಾತುಗಳನ್ನು ತನ್ನೊಂದಿಗೆ ಹಂಚಿಕೊಂಡಿದ್ದಳು. ಈ ಮಾತುಗಳು ನನಗೆ ಹೊಸ ರೀತಿಯ ಧೈರ್ಯ ಮತ್ತು ಸ್ಫೂರ್ತಿ ತಂದುಕೊಟ್ಟಿವೆ ಎಂದಿದ್ದಾರೆ ಅಭಿಷೇಕ್ ಬಚ್ಚನ್.

ಮಗಳು ಆರಾಧ್ಯ ಹೇಳಿರುವ ಮಾತುಗಳು ನನಗೆ ‘ಐ ವಾಂಟು ಟು ಟಾಕ್’ ಚಿತ್ರದಲ್ಲಿ ಅರ್ಜುನ್ ಸಿಂಗ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಲು ಸಹಾಯ ಮಾಡಿತ್ತು. ಅರ್ಜುನ್ ಸಿಂಗ್ ಹಲವು ಹೋರಾಟಗಳ ಹೊರತಾಗಿಯೂ ಧೃಡ ನಿಶ್ಚಯದಿಂದ ಇರುತ್ತಾನೆ. ಯಾವುದನ್ನೂ ಬಿಟ್ಟುಕೊಡಲು ಅವನು ಸಿದ್ಧನಿರುವುದಿಲ್ಲ. ಸಹಾಯ ಕೇಳಲು ಹೆದರುವುದಿಲ್ಲ. ಸಾವಿನೊಂದಿಗೆ ಸೆಣೆಸಲು ಆಸ್ಪತ್ರೆಗೆ ಹೋಗುವಾಗಲೂ ಹೆದರುವುದಿಲ್ಲ. ಜೀವನದ ಸವಾಲುಗಳನ್ನು ಎದುರಿಸುವಾಗಲು ಧೈರ್ಯ-ಸ್ಥೈರ್ಯದಿಂದ ಮುನ್ನುಗ್ಗುತ್ತಾನೆ. ಇಂಥ ಪಾತ್ರ ಪೋಷಣೆಗೆ ಪ್ರೇರೇಪಣೆಯಾಗಿದ್ದು ಪುತ್ರಿಯ ಸ್ಫೂರ್ತಿ ಎಂದು ಆರಾಧ್ಯಳನ್ನು ಹೊಗಳಿ ಕೊಂಡಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Shiva Rajkumar: ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌