Tuesday, 3rd December 2024

Time Deposit Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿದೆ ಲಕ್ಷ ರೂ.ವರೆಗೆ ಬಡ್ಡಿ ಗಳಿಸುವ ಅವಕಾಶ!

Time Deposit Scheme

ಉಳಿತಾಯ ಖಾತೆಗೆ (Time Deposit Scheme) ಹಣವನ್ನು ಠೇವಣಿ ಮಾಡುವಾಗ ಬಡ್ಡಿ ದರವನ್ನು ಪರಿಗಣಿಸುವುದು ಮುಖ್ಯ. ಯಾಕೆಂದರೆ ನಾವು ಮಾಡುವ ಠೇವಣಿಯು ಹೆಚ್ಚ ಲಾಭ ತಂದುಕೊಡಬೇಕು ಎನ್ನುವ ಬಯಕೆ ಎಲ್ಲರಲ್ಲೂ ಇರುತ್ತದೆ. ಹೀಗಾಗಿ ಉಳಿತಾಯ ಖಾತೆಯನ್ನು (Savings Scheme) ತೆರೆಯುವ ಮೊದಲು ಎಲ್ಲಿ ಎಷ್ಟು ಬಡ್ಡಿ ದರವಿದೆ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು.

ಅಂಚೆ ಕಚೇರಿಯಲ್ಲಿ (Post office) ಉಳಿತಾಯ ಖಾತೆಯನ್ನು ತೆರೆದರೆ ಹೆಚ್ಚಿನ ಬಡ್ಡಿ ಪ್ರಯೋಜನಗಳನ್ನು ಪಡೆಯಬಹುದು. ಹೀಗಾಗಿ ಅಂಚೆ ಕಚೇರಿಯಲ್ಲಿರುವ ವಿವಿಧ ಉಳಿತಾಯ ಯೋಜನೆಗಳನ್ನು ಸಾಕಷ್ಟು ಜನರನ್ನು ಸೆಳೆಯುತ್ತವೆ.

5 ವರ್ಷಕ್ಕೆ 5 ಲಕ್ಷ ಹೂಡಿಕೆ

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಯಲ್ಲಿ ಎಲ್ಲರೂ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಇದು ಹೆಚ್ಚಿನ ಬಡ್ಡಿದರಗಳ ಜೊತೆಗೆ ತೆರಿಗೆ ಪ್ರಯೋಜನವನ್ನು ಸಹ ಒದಗಿಸುತ್ತದೆ. ಸರ್ಕಾರವು ಪ್ರಸ್ತುತ ಈ ಯೋಜನೆಗೆ ಶೇ. 7.5 ಬಡ್ಡಿದರವನ್ನು ನೀಡುತ್ತಿದೆ.

Time Deposit Scheme

ಈ ಯೋಜನೆಯಡಿ ಗರಿಷ್ಠ ಐದು ವರ್ಷಗಳ ಅವಧಿಗೆ ಹಣವನ್ನು ಹೂಡಿಕೆ ಮಾಡಬಹುದು. ಇದು ಇತರ ಪೋಸ್ಟ್ ಆಫೀಸ್ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯವನ್ನು ಕೊಡುತ್ತದೆ.

ಲಕ್ಷ ರೂಪಾಯಿಗಳವರೆಗೆ ಬಡ್ಡಿಯನ್ನು ಗಳಿಸಲು ಪೋಸ್ಟ್ ಆಫೀಸ್ ನ ಟಿಡಿ ಅಂದರೆ ಟೈಮ್ ಡೆಪಾಸಿಟ್ ನಲ್ಲಿ ಐದು ವರ್ಷಗಳ ಅವಧಿಗೆ 5 ಲಕ್ಷ ರೂ. ಹೂಡಿಕೆ ಮಾಡಿದರೆ ಮೆಚ್ಯೂರಿಟಿಯ ಬಳಿಕ ಒಟ್ಟು 7,24,974 ರೂ. ಪಡೆಯಬಹುದು. ಇಲ್ಲಿ 5 ಲಕ್ಷ ರೂ. ಹೂಡಿಕೆಗೆ 2,24,974 ರೂ. ಗಳನ್ನು ಬಡ್ಡಿ ರೂಪದಲ್ಲಿ ಪಡೆಯಬಹುದಾಗಿದೆ.

Nirmala Sitharaman: ಬ್ಯಾಂಕ್ ಸಾಲಗಳ ಬಡ್ಡಿ ದರ ಇಳಿಕೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು

ಬಡ್ಡಿ ದರಗಳು

ಪೋಸ್ಟ್ ಆಫೀಸ್ ಟಿಡಿ ಯೋಜನೆಗೆ ಅಂದರೆ ಟೈಮ್ ಡೆಪಾಸಿಟ್ ಯೋಜನೆಗೆ ವಿವಿಧ ಅವಧಿಗೆ ವಿಭಿನ್ನ ಬಡ್ಡಿದರಗಳನ್ನು ಹೊಂದಿರುತ್ತವೆ. ಮೊದಲ ಒಂದು ವರ್ಷದ ಅವಧಿಗೆ ಶೇ. 6.9 ಬಡ್ಡಿ ದರ ನೀಡಿದರೆ, 2 ರಿಂದ 3 ವರ್ಷಗಳ ಅವಧಿಯ ಠೇವಣಿ ಯೋಜನೆಗೆ ಶೇ.7 ಬಡ್ಡಿ ದರವನ್ನು ನೀಡಲಾಗುತ್ತದೆ. ಹೂಡಿಕೆಯ 5 ವರ್ಷಗಳ ಅವಧಿಗೆ ಶೇ. 7.5ರಷ್ಟು ಬಡ್ಡಿ ದರವನ್ನು ಪಡೆಯಬಹುದು.