Tuesday, 3rd December 2024

BBK 11: ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ಶೋಭಾ ಶೆಟ್ಟಿ ಬಾಯ್ ಫ್ರೆಂಡ್ ವಿಚಾರ: ಯಾರು?

Shishir and Shobha Shetty

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎಂಟನೇ ವಾರಕ್ಕೆ ಕಾಲಿಟ್ಟಿದೆ. ಮನೆಯೊಳಗೆ ಶೋಭಾ ಶೆಟ್ಟಿ ಮತ್ತು ರಂಜಿತ್ ಬುಜ್ಜಿ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಂದ ದಿನದಿಂದ ಇವರಿಬ್ಬರು ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇದರಲ್ಲಿ ಶೋಭಾ ಅವರಿಗೆ ಬಿಗ್ ​ಬಾಸ್ ಹೊಸದೇನೂ ಅಲ್ಲ. ಈ ಹಿಂದೆ ತೆಲುಗು ಬಿಗ್​ಬಾಸ್ ಸೀಸನ್ 7 ರಲ್ಲಿ ಇವರು ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು.

ಶೋಭಾ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ತಕ್ಷಣವೇ ಇವರ ಬಾಯ್ ಫ್ರೆಂಡ್ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಹೇಳಿದ್ದರು ಬೇರೆ ಯಾರೂ ಅಲ್ಲ, ಮನೆಯೊಳಗೆ ಇರುವ ಸ್ಪರ್ಧಿ ಶಿಶಿರ್ ಶಾಸ್ತ್ರೀ. ಶೋಭಾಗೆ ಈಗಾಗಲೇ ಬಾಯ್​ಫ್ರೆಂಡ್ ಇರುವ ವಿಚಾರವನ್ನು ಶಿಶಿರ್ ರಿವೀಲ್ ಮಾಡಿದ್ದಾರೆ. ಶೋಭಾಗೆ ಹೊರಗೆ ಬಾಯ್‌ಫ್ರೆಂಡ್ ಇದ್ದಾನೆ, ಮದುವೆ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಶೋಭಾ ಶೆಟ್ಟಿ ಮತ್ತು ಶಿಶಿರ್ ಇಬ್ಬರ ನಡುವೆ ಹಳೆ ಪರಿಚಯವಿದೆ. ಇಬ್ಬರೂ ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಶಿಶಿರ್ ಮತ್ತು ಶೋಭಾ ಶೆಟ್ಟಿ ಪರಸ್ಪರ ತಬ್ಬಿಕೊಂಡು, ವಿಶ್ ಮಾಡಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡ ಉಗ್ರಂ ಮಂಜು ಶಿಶಿರ್ ಕಾಲೆಳೆಯಲು ಮುಂದಾದರು.

ಶಿಶಿರ್ ಅವರನ್ನು ನೋಡಿ ಮಂಜು ಅವರು, ಯಾವಾಗಲೂ ಇಲ್ಲದಿರೋ ಕಳೆ ಈಗ ಕಾಣುತ್ತಿದೆ. ಯಾವಾಗೂ ಇಲ್ಲದ ಧ್ವನಿ ಈಗ ಬರ್ತಿದೆ. ಜೋರಾಗಿ ಸ್ವಾಗತ ಮಾಡಿದ್ದಾರೆ. ರವಿಚಂದ್ರನ್ ರೀತಿ ಬಣ್ಣದ ಡ್ರೆಸ್ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಶಿಶಿರ್, ಅವರಿಗೆ ಹೊರಗೆ ಹುಡುಗ ಇದ್ದಾನೆ, ಮದುವೆ ಆಗ್ತಿದ್ದಾರೆ ಎಂದಿದ್ದಾರೆ.

ಮೂಲತಃ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. ಕಾರ್ತಿಕ ದೀಪಂ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯನ್ನು ಶೋಭಾ ಪ್ರೀತಿಸುತ್ತಿದ್ದಾರೆ. ಆ ಸಂದರ್ಭದಲ್ಲೇ ಇವರ ಮಧ್ಯೆ ಪ್ರೀತಿ ಮೂಡಿದೆ. ಕೆಲವು ತಿಂಗಳ ಹಿಂದೆ ಶೋಭಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

BBK 11: ಬಿಗ್ ಬಾಸ್‌ ಮನೆಯಲ್ಲಿ ಯಾರು ವೀಕ್‌?, ಯಾರು ಸ್ಟ್ರಾಂಗ್?: ಶುರುವಾಯಿತು ಮಂಜು-ರಜತ್ ಜಗಳ