Tuesday, 3rd December 2024

SMAT 2024: ಮಧ್ಯಪ್ರದೇಶ ತಂಡಕ್ಕೆ ಆರ್‌ಸಿಬಿ ಬ್ಯಾಟರ್‌ ನಾಯಕ

ಮಧ್ಯಪ್ರದೇಶ: ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ರಜತ್ ಪಾಟೀದಾರ್(Rajat Patidar) ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ(SMAT 2024) ಮಧ್ಯಪ್ರದೇಶ ತಂಡವನ್ನು(Madhya Pradesh) ಮುನ್ನಡೆಸಲಿದ್ದಾರೆ. ಇದೇ ನ. 23 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಭಾರತ ತಂಡದ ಹಲವು ಅನುಭವಿ ಆಟಗಾರರು ಕೂಡ ಈ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಕಾರಣ ಪಂದ್ಯಾವಳಿ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ. ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್‌ ಹೀಗೆ ಸ್ಟಾರ್‌ ಆಟಗಾರರ ದಂಡೇ ಇದೆ.

ಬೆಂಗಳೂರು ಫ್ರಾಂಚೈಸಿ ಈ ಬಾರಿ ರಜತ್ ಪಾಟೀದಾರ್ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.

ಮಧ್ಯಪ್ರದೇಶ ಟಿ20 ತಂಡ

ರಜತ್ ಪಾಟೀದಾರ್ (ನಾಯಕ), ಅರ್ಪಿತ್ ಗೌಡ್, ಹರ್‌ಪ್ರೀತ್ ಸಿಂಗ್, ಸುಭ್ರಾಂಶು ಸೇನಾಪತಿ, ವೆಂಕಟೇಶ ಅಯ್ಯರ್, ಅವೇಶ್ ಖಾನ್, ಕುಮಾರ್ ಕಾರ್ತಿಕೇಯ, ಕುಲ್ವಂತ್ ಖೆಜ್ರೋಲಿಯಾ, ರಾಹುಲ್ ಬಾಥಮ್, ಅಭಿಷೇಕ್ ಪಾಠಕ್, ಪಂಕಜ್ ಶರ್ಮಾ, ಶಿವಂ ಶುಕ್ಲಾ, ಕಮಲ್ ತ್ರಿಪಾಠಿ, ತ್ರಿಪುರೇಶ್ ಸಿಂಗ್, ವಿಕಾಸ್ ಶರ್ಮಾ.

ಇದನ್ನೂ ಓದಿ IND vs AUS: ಪೂಜಾರ ಇಲ್ಲದಿರುವುದು ಸಂತಸದ ವಿಷಯ; ಹ್ಯಾಜಲ್‌ವುಡ್‌

 ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಕೂಡ ತಂಡದಲ್ಲಿದ್ದು ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ(Krunal Pandya) ತಂಡಕ್ಕೆ ನಾಯಕನಾಗಿದ್ದಾರೆ. ಐಪಿಎಲ್ 2024 ರ ಮೆಗಾ ಹರಾಜು ನಡೆಯುವ ಒಂದು ದಿನ ಮೊದಲು(ನವೆಂಬರ್ 23) ಮುಷ್ತಾಕ್‌ ಅಲಿ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಹೀಗಾಗಿ ಹರಾಜಿನಲ್ಲಿರುವ ದೇಶೀಯ ಆಟಗಾರರು ತಮ್ಮ ಉತ್ಕೃಷ್ಟಮಟ್ಟದ ಆಟ ಪ್ರದರ್ಶಿಸಿ ಹರಾಜಿಗೂ ಮುನ್ನ ಗಮನಸೆಳೆಯುವ ಪ್ರಯತ್ನ ಮಾಡಬಹುದು.

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಪಾಂಡ್ಯ ಕೊನೆಯ ಬಾರಿಗೆ ಆಡಿದ್ದು ಜನವರಿ 2016ರಲ್ಲಿ. ಅದು ಉತ್ತರ ಪ್ರದೇಶ ವಿರುದ್ಧ ಫೈನಲ್‌ ಪಂದ್ಯವಾಗಿತ್ತು. ಫೈನಲ್‌ನಲ್ಲಿ ಬರೋಡಾ ಸೋಲು ಕಂಡು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಶ್ರೇಯಸ್ ಅಯ್ಯರ್ ಮುಂಬೈ(Mumbai) ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್‌ಗೆ(Shreyas Iyer) ಈ ಟೂರ್ನಿ ಪ್ರಮುಖವಾಗಿದೆ.

ರಣಜಿ ಟೂರ್ನಿಯಲ್ಲಿ ಅಯ್ಯರ್ ಒಡಿಶಾ ವಿರುದ್ಧ ದ್ವಿಶತಕ ಬಾರಿಸಿ ಮಿಂಚಿದ್ದರು. ಫಿಟ್‌ನೆಸ್‌ ಮತ್ತು ಫಾರ್ಮ್‌ ಕಳೆದುಕೊಂಡು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೂಡ ತಂಡದಲ್ಲಿದ್ದಾರೆ. ಅನುಭವಿ ಆಟಗಾರ ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.