Tuesday, 3rd December 2024

The Sabarmati Report: 6 ದಿನದಲ್ಲಿ ʼದಿ ಸಬರಮತಿ ರಿಪೋರ್ಟ್‌ʼ ಚಿತ್ರ ಗಳಿಸಿದ್ದೆಷ್ಟು? ಇಲ್ಲಿದೆ ಡಿಟೇಲ್ಸ್‌

The Sabarmati Report

ಮುಂಬೈ : ಗುಜರಾತ್‌ನ ಗೋದ್ರಾದಲ್ಲಿ 2002ರ ಫೆಬ್ರವರಿಯಲ್ಲಿ ನಡೆದ ಹತ್ಯಾಕಾಂಡದ (Godhra Tragedy) ಕಥೆಯನ್ನು ಹೇಳುವ ಬಹುನಿರೀಕ್ಷಿತ ಸಿನಿಮಾ ʼದಿ ಸಬರಮತಿ ರಿಪೋರ್ಟ್‌ (The Sabarmati Report ) ನವೆಂಬರ್‌ 15ರಂದು ಬಿಡುಗಡೆಯಾಗಿದೆ. ವಿಕ್ರಾಂತ್‌ ಮಾಸ್ಸೆ (Vikrant Massey), ರಾಶಿ ಖನ್ನಾ ಸೇರಿ ಹಲವು ಸಿನಿ ತಾರೆಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾದ 6 ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಂಡಿದೆ.

ಚಿತ್ರ ಬಿಡುಗಡೆಯಾದ ಮೊದಲ ದಿನ 1.5 ಕೋಟಿ ರೂ. ಗಳಿಕೆ ಕಂಡಿದ್ದರೆ, ಎರಡನೇ ದಿನ 2.1 ಕೋಟಿ ರೂ, ಮೂರನೇ ದಿನ 3 ಕೋಟಿ ರೂ, ನಾಲ್ಕನೇ ದಿನ 1.15 ದಿನ ಕೋಟಿ ರೂ, ಐದನೇ ದಿನ 1.30 ಕೋಟಿ ರೂ. ಹಾಗೂ ಆರನೇ ದಿನ 1.50 ಕೋಟಿ ರೂ. ಸಂಗ್ರಹ ಮಾಡಿದೆ. ಬಿಡುಗಡೆಯಾದ ಒಟ್ಟು ಆರು ದಿನಗಳಲ್ಲಿ 10 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಬುಕ್ ಮೈ ಶೋನಲ್ಲಿ ‘ದಿ ಸಬರಮತಿ ರಿಪೋರ್ಟ್‌’ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. 12 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 8.3 ರೇಟಿಂಗ್ ಸಿಕ್ಕಿದೆ. ಈ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಬರಮತಿ ರಿಪೋರ್ಟ್‌ನಲ್ಲಿ ವಿಕ್ರಾಂತ್ ಪತ್ರಕರ್ತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಸತ್ಯಾಸತ್ಯತೆಯನ್ನು ಬಿಚ್ಚಿಡುವ ಸಿನಿಮಾ ಇದಾಗಿದೆ. ರಾಶಿ ಖನ್ನಾ ಮತ್ತು ರಿದ್ಧಿ ಡೋಗ್ರಾ ಕೂಡ ನಟಿಸುತ್ತಿದ್ದಾರೆ. ಧೀರಜ್ ಸರ್ನಾ ನಿರ್ದೇಶನ ಹಾಗೂ ಏಕ್ತಾ ಕಪೂರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

ಇದನ್ನೂ ಓದಿ : The Sabaramati Report: ಸತ್ಯ ಹೊರಬರುತ್ತಿದೆ…ʻದಿ ಸಬರಮತಿ ರಿಪೋರ್ಟ್‌ʼಗೆ ಪ್ರಧಾನಿ ಮೋದಿ ಮೆಚ್ಚುಗೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು.  ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ (Tax-free) ಘೋಷಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಈ ಘೋಷಣೆ ಹೊರಡಿಸಿದ್ದು, ಶೀಘ್ರದಲ್ಲಿ ತಾವು ಚಿತ್ರ ವೀಕ್ಷಿಸುವುದಾಗಿ ಹಾಗೂ ನಮ್ಮ ಸಂಸದರು, ಶಾಸಕರುಗಳಿಗೆ ಸಿನಿಮಾ ನೋಡಲು ಹೇಳುವುದಾಗಿ ತಿಳಿಸಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕೂಡ ದಿ ಸಬರಮತಿ ರಿಪೋರ್ಟ್‌ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಸತ್ಯವನ್ನು ಸಿನಿಮಾ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ತಂದಿದ್ದಾರೆ, ಯಾರೂ ಎಷ್ಟೇ ಪ್ರಯತ್ನ ಪಟ್ಟರೂ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ೇ