Thursday, 31st October 2024

ಪಾರದರ್ಶಕ ಆಡಳಿತ ನನ್ನ ಧ್ಯೇಯ

ಕೆಆರ್‌ಐಡಿಎಲ್ ನಿಮಗದಲ್ಲಿ ಇರುವ ತೊಡಕುಗಳನ್ನು ನಿವಾರಣೆ ಮಾಡಿ, ಜನಸ್ನೇಹಿಯಾಗಿ ಮಾರ್ಪಡಿಸಲಾಗುತ್ತದೆ.
ಪ್ರಾಮಾಣಿಕ ಆಡಳಿತದಿಂದ ಪಾರದರ್ಶಕತೆ ಕಾಪಾಡಲು ಸಹಕಾರ. ಕಾನೂನಾತ್ಮಕವಾಗಿ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ನನ್ನ ಆದ್ಯತೆ ಎಂಬ ಸಂದೇಶ ನೀಡಿದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ (ಕೆಆರ್‌ಐಡಿಎಲ್) ಎಂ.ರುದ್ರೇಶ್ ಅವರು ವಿಶ್ವವಾಣಿಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಸಂದರ್ಶನದ ಒಂದು ನೋಟ ಇಲ್ಲಿದೆ.

ಸಂದರ್ಶನ: ಬಾಲಕೃಷ್ಣ.ಎನ್

ಕೆಆರ್‌ಐಡಿಎಲ್ ಅಧ್ಯಕ್ಷ ಗಾಧಿ ಪಡೆಯುವಲ್ಲಿ ನಿಮ್ಮ ಪರಿಶ್ರಮವೇನು?
2008 ರಲ್ಲಿ ಕಂಠೀರವ ಸ್ಟುಡಿಯೋದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ಕಂಠೀರವ ಸ್ಟುಡಿಯೋ ನಷ್ಟದಲ್ಲಿದೆ ಎಂದು ಬಾಗಿಲು ಹಾಕಲು ಮುಂದಾಗಿತ್ತು. ಇದೇ ಸಂದರ್ಭದಲ್ಲಿ ನನ್ನನ್ನು ಕಂಠೀರವ ಸ್ಟುಡಿಯೋದ ಅಧ್ಯಕ್ಷರನ್ನಾಗಿ ಮಾಡಿದರು. ನಾನು ಒಂದು ದೃಢ ನಿರ್ಧಾರ ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬಳಿಕ ಸಿಎಂ ಯಡಿಯೂರಪ್ಪ ಅವರು 5 ಕೋಟಿ ರು. ಹಣ ಬಿಡುಗಡೆ ಮಾಡಿ, ನನ್ನ  ಅಧಿಕಾರಾವಾಧಿ ಯಲ್ಲಿ ಸ್ಟುಡಿಯೋ ಅಭಿವೃದ್ಧಿ ಕಾರ್ಯಗಳಿಗೆ 3 ಕೋಟಿ ರು. ಹಣ ಖರ್ಚು ಮಾಡಲಾಗಿದೆ. ಬಾಕಿ ಎರಡು ಕೋಟಿ ಉಳಿಸಲಾ ಗಿದ್ದು, ಇದೀಗ ಹಣ ಯಾವುದಕ್ಕೆ ಉಪಯೋಗ ಆಗಿದೆ ಎಂಬುದು ಗೊತ್ತಿಲ್ಲ. ನಷ್ಟದಲ್ಲಿ ಈ ಮಂಡಳಿ ತಿಂಗಳಿಗೆ 1 ಕೋಟಿ
ರು. ಆದಾಯ ಬರುವಂತೆ ಮಾಡಿದೆ.

ನಿಗಮದಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು ದೂರು ಇದೆಯಲ್ಲಾ?
ಯಾವುದೇ ನಿಗಮ ಆಗಿರಬಹುದು ಸೂಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೆಆರ್‌ಐಡಿಎಲ್‌ಗೆ ದೇವರಾಜ ಅರಸು ಅವರ ಕಾಲದಿಂದಲೂ ಒಳ್ಳೆಯ ಹೆಸರಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಈ ನಿಮಗವನ್ನು ಮಾದರಿಯನ್ನಾಗಿಸಲಾಗುತ್ತದೆ. ಅದೇ ರೀತಿ ಪ್ರವಾಹ, ಭೂಕಂಪ ಸಂದರ್ಭದಲ್ಲಿ ಮನೆಗಳು ಕುಸಿತಗೊಂಡರೆ ಇದಕ್ಕೆ ಪರಿಹಾರ ನೀಡುತ್ತದೆ ಈ ನಿಗಮ. ಮನೆಗಳು ಹಾನಿಗೊಳಗಾದ ಕುಟುಂಬಕ್ಕೆ ಮನೆ ನಿರ್ಮಿಸಿಕೊಳ್ಳಲು 50 ಸಾವಿರದಿಂದ 1 ಲಕ್ಷ ನೀಡಲಾಗುತ್ತದೆ. ಕಾನೂನು ತೊಡಕು ಇಲ್ಲದೆ ಮನೆ ನಿರ್ಮಿಸಿ ಕೊಡುವ ಏಕೈಕ ನಿಗಮ ಇದಾಗಿದೆ. 4ಜಿ ಎಂಗ್ಸಂಪ್ಷನ್ ಪ್ರಶ್ನಿಸಿ ಕುರಿತು ಆರ್‌ಟಿಐ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದಾರೆ. 9 ತಿಂಗಳಿನಿಂದ ಯಾವುದೇ ಕಾಮಗಾರಿಗಳು ನಡೆದಿಲ್ಲದ ಕುರಿತು ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಲಾಗಿದೆ. ಆದ್ದರಿಂದ ಈ ಕಾನೂನು ತೊಡಕು ನಿವಾರಣೆ ಮಾಡಿ, ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟರೆ ಅನುಕೂಲವಾಗಲಿದೆ. ಬಿಜೆಪಿ ಸರಕಾರದ ಶಾಸಕರು,
ಸಂಸದರು ಇದಕ್ಕೆ ಬೆಂಬಲ ನೀಡಿದ್ದಾರೆ. ಕಲಾಪದಲ್ಲಿ ಈ ಕುರಿತು ತಿದ್ದುಪಡಿ ಮಾಡುವ ವಿಶ್ವಾಸವಿದೆ.

ನಗರೋತ್ಥಾನ ಯೋಜನೆಯಡಿ 50 ಕೋಟಿ ರು. ಅಕ್ರಮ ನಡೆದಿರುವ ಆರೋಪವಿದೆಯಲ್ಲಾ?
ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. 50 ಕೋಟಿ ಅಲ್ಲ, 100 ರು. ಅವ್ಯವಹಾರ ನಡೆದರೂ ಅದನ್ನು ತನಿಖೆ ಮಾಡಿಸು ತ್ತೇನೆ. ಸರಕಾರದ ಹಣ ಪೋಲು ಮಾಡಲು ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗಬೇಕೋ ಅದನ್ನು ಕಾನೂನಾತ್ಮಕವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗುತ್ತದೆ. ಈ ನಿಗಮದಲ್ಲಿ ಯಾರೇ ಅಧಿಕಾರಿ ನಿಯಮ ಮೀರಿ ವರ್ತಿಸಿದರೆ ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಕೆಆರ್‌ಐಡಿಎಲ್‌ನಲ್ಲಿ ಪಾರದರ್ಶಕ ಆಡಳಿತಕ್ಕೆ ರೂಪುರೇಷೆಗಳೇನು?
ಸರಕಾರದಿಂದ ಅನೇಕ ಯೋಜನೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ಒಳಪಡಿಸುವ ಮೂಲಕ ಜನಸ್ನೇಹಿ ನಿಗಮವನ್ನಾಗಿಸ ಲಾಗುತ್ತದೆ. ಪಾರದರ್ಶಕ ಆಡಳಿತಕ್ಕೆ ನಾನು ಒತ್ತು ನೀಡುತ್ತೇನೆ. ಪ್ರತಿಯೊಂದು ವಲಯದಲ್ಲೂ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ. ರಾಜ್ಯದಲ್ಲಿ ಅಭಿವೃದ್ಧಿ ಹರಿಕಾರ ಬಿ.ಎಸ್.ಯಡಿ ಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮಂತ್ರಿ ಮಂಡಲ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಕರೋನಾ ಹಾವಳಿಯಿಂದ ಅಭಿವೃದ್ಧಿಗೆ ತೊಡಕಾಗಿದೆ. ನರೇಂದ್ರಮೋದಿ ಸಹಕಾರದಿಂದ ಮುಖ್ಯಮಂತ್ರಿ ಅಭಿವೃದ್ಧಿಗೆ ಬಲ ನೀಡಲಿದ್ದಾರೆ. ಎಷ್ಟೆ ಒತ್ತಡ ಇದ್ದರೂ ಅಭಿವೃದ್ಧಿಗೆ ಕೈ ಜೋಡಿಸಲು ಸಿದ್ಧರಿದ್ದೇವೆ.

ನಿಮಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಏನು ಹೇಳಲು ಬಯಸುತ್ತೀರಾ?
ನಾನು ಬಿಜೆಪಿಯಲ್ಲಿ 1990ರಿಂದ ಬೂತ್ ಮಟ್ಟದಿಂದ ಕಾರ್ಯಕರ್ತರ ಪಡೆ ನಿರ್ಮಿಸಿ, ಪಕ್ಷ ನೀಡಿದಂತಹ ಜವಾಬ್ದಾರಿಗಳನ್ನು ನಿಭಾಯಿಸಿ ಸಂಘಟನೆಯಲ್ಲಿ ಸಕ್ರಿಯನಾದೆ. 1992ರಲ್ಲಿ ನಡೆದ ರಾಮಮಂದಿರ ಹೋರಾಟದಲ್ಲಿ ಬೆಂಗಳೂರಿನಿಂದ ಬಿಡದಿ ತನಕ ಲಾಲ್‌ಕೃಷ್ಣ ಆಡ್ವಾಣಿ ಅವರ ರಥಯಾತ್ರೆಗೆ ಪ್ರಮುಖನಾದೆ. ಯಾತ್ರೆ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದೆ. ಕೆಂಗೇರಿ ಹೋಬಳಿ ಪ್ರಧಾನ ಕಾರ್ಯರ್ಶಿಯಾಗಿ, ಉತ್ತರಹಳ್ಳಿ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾಗಿ, ರಾಮನಗರ ತಾಲೂಕು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾಧ್ಯಕ್ಷನಾಗಿದ್ದೇನೆ. ಈ ಕ್ಷೇತ್ರದಲ್ಲಿ ಮೊದಲು 2 ರಿಂದ 3 ಸಾವಿರ ಮತ ಬಿಜೆಪಿಗೆ ಬರುತ್ತಿತ್ತು. ಈಗ 30 ರಿಂದ 40 ಸಾವಿರ ಮತಗಳು ಸಿಗುವಂತೆ ಸಂಘಟನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಪಕ್ಷ ಸಂಘಟನೆ ಮತ್ತು ಕಾರ್ಯವೈಖರಿ ಪರಿಗಣಿಸಿ ನನಗೆ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ಸದಾ ನಾನು ಅಭಾರಿ. ಈ ಜವಾಬ್ದಾರಿಯನ್ನು ಯಾವುದೇ ಅಳುಕು ಇಲ್ಲದೆ ನಿಭಾಯಿ
ಸಿ, ಕೆಆರ್‌ಐಡಿ ಎನ್‌ನಲ್ಲಿ ಇರುವ ಕಾನೂನು ತೊಡಕು ನಿವಾರಣೆ ಮಾಡಿ ನಿಗಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯ ಲಾಗುತ್ತದೆ.